More

    ನ್ಯಾಯಕ್ಕಾಗಿ ಹೋರಾಟ ಅನಿವಾರ್ಯ

    ರಾಮದುರ್ಗ: ರೈತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಸರ್ವ ಪಕ್ಷಗಳ ಮುಖಂಡರು ರೈತರ ಬಗ್ಗೆ ಕಾಳಜಿ ತೋರಿದರೆ ಹೋರಾಟಗಳ ಅಗತ್ಯತೆ ಇರುವುದಿಲ್ಲ. ರಾಜಕೀಯ ಪಕ್ಷಗಳ ಸ್ವಾರ್ಥ ಸಾಧನೆಯ ವಿರುದ್ಧ ರೈತರು ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ ಎಂದು ರೈತ ಸೇನಾ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಸ್ವಾಮೀಜಿ ಹೇಳಿದ್ದಾರೆ.

    ತಾಲೂಕಿನ ಮುಳ್ಳೂರ ಗ್ರಾಮದಲ್ಲಿ ಈಚೆಗೆ ರೈತ ಸೇನಾ ಗ್ರಾಮ ಘಟಕದ ಉದ್ಘಾಟನೆ ಹಾಗೂ ರೈತ ಸಮಾವೇಶದಲ್ಲಿ ಮಾತನಾಡಿದ, ಮಹದಾಯಿ ಹಾಗೂ ಕಳಸಾ ಬಂಡೂರಿ ಹೋರಾಟದಲ್ಲಿ 11 ಜನ ಪ್ರಾಣ ತ್ಯಾಗ ಮಾಡಿದ್ದಾರೆ. ರೈತರ ಹೋರಾಟ ಹಾಗೂ ಸುಪ್ರೀಕೋರ್ಟ್ ಆದೇಶದಂತೆ ಕರ್ನಾಟಕ್ಕೆ ಮಹದಾಯಿ ಹಾಗೂ ಕಳಸಾ ಬಂಡೂರಿ ನದಿ ನೀರು ಹಂಚಿಕೆಯಾಗಿದೆ ವಿನಃ ರಾಜಕೀಯ ಪಕ್ಷಗಳ ಮುತುವರ್ಜಿಯಿಂದ ಅಲ್ಲ ಎಂದರು.

    ಅವರಾದಿ ಫಲಹಾರೇಶ್ವರ ಮಠದ ಶ್ರೀ ಶಿವಮೂರ್ತಿ ದೇವರು ಮಾತನಾಡಿ, ಕೆಲ ಹೋರಾಟಗಳು ರಾಜಕೀಯ ಪಕ್ಷಕ್ಕೆ ಅಂಟಿಕೊಂಡು ತಮ್ಮ ಮೂಲ ಬೇಡಿಕೆ ಮೆರೆತು ಹೋಗುವ ಹಂತಕ್ಕೆ ತಲುಪುತ್ತಿರುವುದು ಖೇದಕರ ಸಂಗತಿ ಎಂದರು.

    ಮೂಳ್ಳೂರ ಅನ್ನದಾನೇಶ್ವರ ಮಠದ ಚಂದ್ರೇಶಖರ ಶಿವಾಚಾರ್ಯ ಸ್ವಾಮೀಜಿ, ರಾಮದುರ್ಗ ಶಿವಮೂರ್ತೇಶ್ವರ ಮಠದ ಶಾಂತವೀರ ಸ್ವಾಮೀಜಿ, ಹರ್ಲಾಪೂರ ಢವಳೇಶ್ವರ ಮಠದ ರೇಣುಕ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಹದಾಯಿ ನರಗುಂದ ವೇದಿಕೆಯ ಅಧ್ಯಕ್ಷ ವೀರಬಸಪ್ಪ ಹೂಗಾರ, ಶಿವಾನಂದ ದಾಸರಡ್ಡಿ, ಗೌಡಪ್ಪಗೌಡ ಪಾಟೀಲ, ಶಿವಾನಂದ ಗುರುಬಸಣ್ಣವರ ಮಾತನಾಡಿದರು. ರೈತ ಸೇನೆಯ ತಾಲೂಕಾಧ್ಯಕ್ಷ ಗಿರಿಯಪ್ಪ ಹಂಜಿ ಅಧ್ಯಕ್ಷತೆ ವಹಿಸಿದ್ದರು.

    ರಾಮದುರ್ಗ ತಾಲೂಕಿನ ಸರ್ವ ಮಾಧ್ಯಮ ಪ್ರತಿನಿಧಿಗಳನ್ನು ಸತ್ಕರಿಸಲಾಯಿತು. ರೈತ ಸೇನಾದ ಹನುಮಂತ ಮಡಿವಾಳರ, ಫಕೀರಪ್ಪ ಜೋಗನ್ನವರ, ಮಲ್ಲಣ್ಣ ಅಲೆಕಾರ, ಪಂಚಪ್ಪ ಹನಸಿ, ಅಂದಾನಗೌಡ ಪಾಟೀಲ, ರಮೇಶ ನಾಯ್ಕರ, ಚನ್ನಬಸಪ್ಪ ಅನವಾಲ, ಮಾಯಪ್ಪ ಒಡೆಕನವರ, ಮಂಜು ಬಸಲಗುಂದಿ, ಮಲ್ಲಿಕಾರ್ಜುನ ಮಠಪತಿ ಇತರರಿದ್ದರು. ಪ್ರಶಾಂತ ಅಳಗೋಡಿ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts