More

    ಕೌಶಲ ಉಚಿತ ತರಬೇತಿಗೆ ಅರ್ಜಿ ಆಹ್ವಾನ

    ಚಾಮರಾಜನಗರ: ತಾಲೂಕಿನ ಮರಿಯಾಲದ ಬಳಿಯಲ್ಲಿರುವ ಜೆಎಸ್‌ಎಸ್ ನೈಪುಣ್ಯತಾ ತರಬೇತಿ ಸಂಸ್ಥೆಯಿಂದ 45 ದಿನಗಳ ಕೌಶಲ ಉಚಿತ ತರಬೇತಿ ಆಯೋಜಿಸಲಾಗಿದೆ.


    10ನೇ ತರಗತಿ ತೇರ್ಗಡೆ ಹೊಂದಿರುವ 16 ನಿರುದ್ಯೋಗಿ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಹಾರ್ಡ್‌ವೇರ್ ಆ್ಯಂಡ್ ನೆಟ್‌ವರ್ಕಿಂಗ್ ಹಾಗೂ ಕನಿಷ್ಠ 8ನೇ ತರಗತಿಯಲ್ಲಿ ತೇರ್ಗಡೆ ಹೊಂದಿರುವ 20 ಮಹಿಳಾ ಅಭ್ಯರ್ಥಿಗಳಿಗೆ ಅಡ್ವಾನ್ಸ್ ಸೀವಿಂಗ್ ಮಷಿನ್ ಆಪರೇಟರ್ ಕೋರ್ಸ್‌ನಲ್ಲಿ ಉಚಿತ ತರಬೇತಿಯನ್ನು ನೀಡಲಾಗುತ್ತದೆ.


    ಅಸಕ್ತಿಯುಳ್ಳ 18 ರಿಂದ 35 ವರ್ಷ ವಯೋಮಾನದ ನಿರುದ್ಯೋಗಿ ಅಭ್ಯರ್ಥಿಗಳು ಜೆಎಸ್‌ಎಸ್ ನೈಪುಣ್ಯತಾ ತರಬೇತಿ ಸಂಸ್ಥೆ, ಮರಿಯಾಲ ಚಾಮರಾಜನಗರ ಇಲ್ಲಿ ಅರ್ಜಿ ಪಡೆದು ವಿದ್ಯಾರ್ಹತೆಯ ಅಂಕಪಟ್ಟಿ, ದಾಖಲಾತಿ, ಆಧಾರ್ ಪ್ರತಿ, 4 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ತರಬೇತಿ ಬಳಿಕ ಗ್ರಾಮೀಣ ಕೈಗಾರಿಕಾ ಇಲಾಖೆಯಿಂದ ಅರ್ಹತಾ ಪತ್ರವನ್ನು ನೀಡಿ, ಉದ್ಯೋಗ ಹಾಗೂ ಸ್ವ ಉದ್ಯೋಗದ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ಮಾಹಿತಿಗಾಗಿ ಎನ್. ಮಹದೇವಸ್ವಾಮಿ (95383 08797) ಕೆ.ಎನ್.ಶಶಿಧರ್(98805 34739) ಅವರನ್ನು ಸಂಪರ್ಕಿಸಲು ಕೋರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts