More

    ಪತ್ರಕರ್ತರಿಗೆ ಬಸ್ ಸೌಲಭ್ಯಕ್ಕಾಗಿ ಅಧಿವೇಶನದಲ್ಲಿ ಧ್ವನಿ ಎತ್ತುವೆ

    ಕಂಪ್ಲಿ: ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ಸು ಸೌಲಭ್ಯ ಕಲ್ಪಿಸುವಂತೆ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಶಾಸಕ ಜೆ.ಎನ್.ಗಣೇಶ ಹೇಳಿದರು.

    ಇದನ್ನೂ ಓದಿ: http://ಪತ್ರಕರ್ತರಿಗೆ ಬಸ್ ಸೌಲಭ್ಯಕ್ಕಾಗಿ ಅಧಿವೇಶನದಲ್ಲಿ ಧ್ವನಿ ಎತ್ತುವೆ

    ಇಲ್ಲಿನ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪತ್ರಕರ್ತರಿಗೆ ಮಾಶಾಸನ ಸೇರಿ ಅಗತ್ಯ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ. ಪಟ್ಟಣದ ಪತ್ರಕರ್ತರಿಗೆ ನಿವೇಶನ ಒದಗಿಸುವ ಕ್ರಮ ಕೈಗೊಳ್ಳಲಾಗುವುದು.

    ಪುರಸಭೆಯಿಂದ ನಿವೇಶನ ದೊರೆತಲ್ಲಿ ಪತ್ರಿಕಾಭವನ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು ಎಂದರು. ತಹಸೀಲ್ದಾರ್ ಗೌಸಿಯಾಬೇಗಮ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತರಾಗದೆ ದಿನಪತ್ರಿಕೆ, ನಿಯತಕಾಲಿಕೆಗಳನ್ನು ಅಭ್ಯಾಸಿಸುವ ಹವ್ಯಾಸ ಬೆಳಸಿಕೊಳ್ಳಿ ಎಂದರು.

    ದಿವ್ಯಾಶ್ರೀ ಎಸ್ಸೆಸ್ಸೆಲ್ಸಿ, ಸಾಕ್ಷಿಗೌಡ ಪಿಯುಸಿ, ಎ.ಹಾಜೀರಾ ಬೀ ಎಂಸ್ಸಿ ಎಂಎಸ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ್ದು ಹಾಗೂ ಯೋಗ ಪಟು ಎಸ್.ಪೂಜಾ, ಬಯಲಾಟ ಕಲಾವಿದರಾದ ಟಿ.ಕೆ.ಶಿವಶಂಕ್ರಪ್ಪ, ನಾಯಕರ ದುರುಗಪ್ಪ, ಪತ್ರಿಕಾ ವಿತರಕ ಮಳೇಕಾರ್ ಲಕ್ಷ್ಮಣ ಇವರನ್ನು ಗೌರವಿಸಲಾಯಿತು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ವೀರೇಶ್, ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷ, ರಾಜ್ಯ ಕಾರ್ಯದರ್ಶಿ ಎನ್.ವೀರಭದ್ರಗೌಡ, ತಾಪಂ ಇಒ ಆರ್.ಕೆ.ಶ್ರೀಕುಮಾರ್, ನರೇಗಾ ಎಡಿಎ ಕೆ.ಎಸ್.ಮಲ್ಲನಗೌಡ, ಪುರಸಭೆ ಸಿಒ ಕೆ.ದುರುಗಣ್ಣ ಉಪ ಪ್ರಾಚಾರ್ಯ ಬಸವರಾಜ ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts