More

    ಜೊಲ್ಲೆ ಉದ್ಯೋಗ ಸಮೂಹದ ಸಾಮಾಜಿಕ ಸೇವೆ ಶ್ಲಾಘನೀಯ

    ಚಿಕ್ಕೋಡಿ: ಒಂದೇ ಸೂರಿನಡಿ ಹಲವು ಸೇವೆ ಒದಗಿಸುತ್ತಿರುವ ಜೊಲ್ಲೆ ಉದ್ಯೋಗ ಸಮೂಹವು ಅನೇಕ ಯುವಕರಿಗೆ ಸಹಕಾರಿ ಸಂಸ್ಥೆಗಳನ್ನು ಹುಟ್ಟು ಹಾಕುವ ಮೂಲಕ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಉ.ಖಾನಾಪುರದ ಸಿದ್ದೇಶ್ವರ ಶಿವಾಚಾರ್ಯ ಶ್ರೀ ಹೇಳಿದ್ದಾರೆ.

    ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಗುರುವಾರ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ 58ನೇ ಜನ್ಮದಿನದ ಅಂಗವಾಗಿ ಜ್ಯೋತಿ ಸೊಸೈಟಿ ಶಾಖೆ ಉದ್ಘಾಟಿಸಿ ಮಾತನಾಡಿದರು. ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹಾವೀರ ನಾಶೀಪುಡಿ ಮಾತನಾಡಿ, ಸಂಸದ ಅಣ್ಣಾಸಾಹೇಬ ಹುಟ್ಟುಹಬ್ಬದ ನಿಮಿತ್ತ ಜ್ಯೋತಿ ವಿವಿಧ ಉದ್ದೇಶಗಳ ಸಹಕಾರಿ ಸಂಘದಿಂದ ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿ, ಮಣಗುತ್ತಿ, ಬೆಳವಡಿ ಹಾಗೂ ವಿಜಯಪುರ ಜಿಲ್ಲೆಯ ಇಂಡಿ, ಅಲಮೇಲಗಳಲ್ಲಿ ಹೊಸ ಶಾಖೆ ಪ್ರಾರಂಭಿಸಲಾಗಿದೆ ಎಂದರು.

    ರಾಚೋಟೇಶ್ವರ ಶ್ರೀ, ಆಶಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ನಿರ್ದೇಶಕರಾದ ಕಲ್ಲಪ್ಪ ನಾಯಿಕ, ಶ್ರೀಕಾಂತ ಚೌಗಲಾ, ವಿಲಾಸ ಕದಂ, ಅಣ್ಣಾಸಾಹೇಬ ಬೆಂಡವಾಡೆ, ರವೀಂದ್ರ ಕುರಾಡೆ, ಜೀವಪ್ಪ ಪಾಟೀಲ, ಮಾರುತಿ ಪಾಟೀಲ, ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ವಿಜಯ ಖಡಕಬಾವಿ, ಸಂತೋಷ ಪಾಟೀಲ ಉಪಸ್ಥಿತರಿದ್ದರು.

    ಐಗಳಿ ವರದಿ: ಇಲ್ಲಿನ ಶ್ರೀ ಮುತ್ತೂರವ್ವ ದೇವಿ ದೇವಸ್ಥಾನ ಹತ್ತಿರದ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಗುರುವಾರ ಐಗಳಿ ತಾಪಂ ಸದಸ್ಯ ಯಲ್ಲಪ್ಪ ಮಿರ್ಜಿ ಚಾಲನೆ ನೀಡಿದರು. ಕಾಮಗಾರಿಗೆ ಅಣ್ಣಾಸಾಹೇಬ ಜೊಲ್ಲೆ ಅವರ ಸಂಸದರ ನಿಧಿಯಿಂದ 5 ಲಕ್ಷ ರೂ. ಮಂಜೂರಾಗಿದ್ದು, ಜೊಲ್ಲೆ ಅವರ ಹುಟ್ಟುಹಬ್ಬದ ನಿಮಿತ್ತ ಕಾಮಗಾರಿಯನ್ನು ಲ್ಯಾಂಡ್ ಆರ್ಮಿಯಿಂದ ಕೈಗೊಳ್ಳಲಾಗುವುದು ಎಂದು ಸಿ.ಎಸ್.ನೇಮಗೌಡ ತಿಳಿಸಿದರು. ಶಿವಾನಂದ ವಾಳ್ವೆ, ಸಿ.ಎಚ್. ಪಾಟೀಲ, ಶ್ಯಾಮರಾವ ತೆಲಸಂಗ, ಆರ್.ಆರ್.ತೆಲಸಂಗ, ಜಿ.ಎಸ್. ಬಿರಾದಾರ, ಅಪ್ಪಾಸಾಬ ಪಾಟೀಲ, ಬಸವರಾಜ ಬಿರಾದಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts