More

    ಜೆಎಸ್‌ಎಸ್‌ನಿಂದ ಮಹಿಳೆಯರಿಗಾಗಿ ಉದ್ಯೋಗ ಮೇಳ 29ಕ್ಕೆ

    ಧಾರವಾಡ: ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 75ನೇ ಜನ್ಮದಿನದ ಅಂಗವಾಗಿ ಜನತಾ ಶಿಕ್ಷಣ ಸಮಿತಿ ಹಾಗೂ ರ‍್ಯಾಪಿಡ್ ಸಂಸ್ಥೆಗಳ ಆಶ್ರಯದಲ್ಲಿ ವಿದ್ಯಾಗಿರಿ ಜೆಎಸ್‌ಎಸ್ ಕ್ಯಾಂಪಸ್‌ನಲ್ಲಿ ಅ. 29ರಂದು ಬೆಳಗ್ಗೆ 10.30ಕ್ಕೆ ಮಹಿಳೆಯರಿಗಾಗಿ ಬೃಹತ್ ಉದ್ಯೋಗ ಮೇಳ ಆಯೋಜಿಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ ಹೇಳಿದರು.
    ಕಾಲೇಜಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಸಬಲೀಕರಣಕ್ಕಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಮೂಹ ಸಂಸ್ಥೆಗಳು ಸದಾ ಶ್ರಮಿಸುತ್ತಿವೆ. ಇದೀಗ ೩ನೇ ಬಾರಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ವೀರೇಂದ್ರ ಹೆಗ್ಗಡೆ ಅವರ ಜನ್ಮದಿನ ನಿಮಿತ್ತ ಕಳೆದ ವರ್ಷದಿಂದ ಸತತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದು 75ನೇ ಕಾರ್ಯಕ್ರಮವಾಗಿದೆ ಎಂದರು.

    ರ‍್ಯಾಪಿಡ್ ಸಂಸ್ಥೆ ಸಿಇಒ ಮಾಳವಿಕಾ ಕಡಕೋಳ ಮಾತನಾಡಿ, ಈ ಹಿಂದೆ ನಡೆದ ಉದ್ಯೋಗ ಮೇಳ ಅತ್ಯಂತ ಯಶಸ್ವಿಯಾಗಿ ನಡೆದಿವೆ. ಸುಮಾರು ಅಂದಾಜು 1000ಕ್ಕೂ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಈ ಬಾರಿಯ ಮೇಳದಲ್ಲಿ ಸುಮಾರು 40 ಕಂಪನಿಗಳು ಭಾಗವಹಿಸಲಿವೆ. ಬೆಳಗ್ಗೆ ೮ರಿಂದ ನೋಂದಣಿ ಆರಂಭವಾಗಲಿದ್ದು, ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ -ೆÃಲ್ ಆದವರಿಂದ ಸ್ನಾತಕೋತ್ತರ ಪದವೀಧರರು ಪಾಲ್ಗೊಳ್ಳಬಹುದು ಎಂದರು.
    ಮೇಳವನ್ನು ಡಾ. ಅಜಿತ್ ಪ್ರಸಾದ ಉದ್ಘಾಟಿಸುವರು. ಏಕಸ್ ಕಂಪನಿಯ ಡಾ. ರವಿ ಗುತ್ತಲ, ಟಾಟಾ ಮೋಟರ್ಸ್ನ ಅಮಿತಾವ್ ಸಹಾಯ್ ಅತಿಥಿಗಳಾಗಿ ಭಾಗಹಿಸುವರು. ವಾಣಿಶ್ರೀ ಪುರೋಹಿತ ಅಧ್ಯಕ್ಷತೆ ವಹಿಸುವರು ಎಂದರು.
    ಡಾ. ಸೂರಜ್ ಜೈನ್, ಮಹಾವೀರ ಉಪಾಧ್ಯೆ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts