More

    ದೇಗುಲ ಸಮೀಪದ ಮದ್ಯದಂಗಡಿ ತೆರವು ಮಾಡಿ

    ಭದ್ರಾವತಿ: ಜನ್ನಾಪುರ ಶ್ರೀ ಅಂತರಘಟ್ಟಮ್ಮ ದೇವಸ್ಥಾನದ ಬಳಿ ಇರುವ ವೈನ್​ಸ್ಟೋರ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಸೈನ್ಯ ಸಂಘಟನೆ ಕಾರ್ಯಕರ್ತರು ಸೋಮವಾರ ನಗರಸಭೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

    ವೈನ್​ಶಾಪ್ ಪಕ್ಕದಲ್ಲೇ ದೇವಸ್ಥಾನ, ಅಂಚೆ ಕಚೇರಿ ಇದ್ದು ಮಹಿಳೆಯರು, ವೃದ್ಧರು ಈ ಪ್ರದೇಶದಲ್ಲಿ ಓಡಾಡುವಂತಿಲ್ಲ. ಕೂಗಳತೆ ದೂರದಲ್ಲಿ ನ್ಯಾಯಾಧೀಶರ ಮನೆಗಳಿವೆ. ಫಿಲ್ಟರ್ ಶೆಡ್, ವೇಲೂರು ಶೆಡ್, ಜಿಂಕ್​ಲೈನ್ ನಿವಾಸಿಗಳು ಆ ವೈನ್​ಶಾಪ್ ಇರುವ ರಸ್ತೆಯಲ್ಲೇ ಸಂಚರಿಸಬೇಕಿದ್ದು ಕಿರಿಕಿರಿ ಉಂಟು ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

    ಟೆಂಡರ್ ಕರೆಯದೆ ಬಸ್ ನಿಲ್ದಾಣ ತೆರವು:

    ಚನ್ನಗಿರಿ ರಸ್ತೆ ವಿಸ್ತರಣೆ ನೆಪ ಹೇಳಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಯಾವುದೇ ಟೆಂಡರ್ ಕರೆಯದೆ ಏಕಾಏಕಿ 2 ಸರ್ಕಾರಿ ಬಸ್ ತಂಗುದಾಣ ತೆರವುಗೊಳಿಸಿದ್ದಾರೆ. ಹಿರೇಕೆರೆ ಜಾಗದಲ್ಲಿ ಸಬ್​ಟ್ಯಾಂಕ್ ನಿರ್ವಿುಸಲಾಗಿದೆ. ಕೆರೆ ಜಾಗದಲ್ಲಿ ಯಾವುದೇ ಕಟ್ಟಡ ನಿರ್ವಿುಸಬಾರದೆಂಬ ಸುಪ್ರೀಂಕೋರ್ಟ್ ಆದೇಶವಿದ್ದರೂ ಸಬ್​ಟ್ಯಾಂಕ್ ನಿರ್ವಿುಸಲಾಗಿದೆ. ಕೂಡಲೇ ಅದನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.

    ಕರ್ನಾಟಕ ಜನ ಸೈನ್ಯ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು, ಅನಿಲ್, ಅನಂತರಾಮು, ಪರಮೇಶ್, ಆಟೋರಾಜು, ಶಾಂತಮ್ಮ, ಅನುರಾಧಾ, ವಿನುತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts