More

    ರಾಮಮಂದಿರಕ್ಕೆ ಹನುಮಾನ್ ಧ್ವಜ ಸಿದ್ಧಪಡಿಸಿದ್ದು ಮುಸ್ಲಿಂ ಟೈಲರ್

    ನವದೆಹಲಿ: ಎಲ್ಲರ ಚಿತ್ತ ಅಯೋಧ್ಯೆ ರಾಮ ಮಂದಿರದ ಮೇಲಿದೆ. ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆ ಜನವರಿ 22 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅಯೋಧ್ಯೆ ರಾಮ ಮಂದಿರ  ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಈಗಾಗಲೇ ಸಜ್ಜಾಗುತ್ತಿದೆ.

    ಕೆಲವು ದಿನಗಳ ಹಿಂದೆ ಮುಂಬೈನ ಮುಸ್ಲಿಂ ಯುವತಿಯೊಬ್ಬಳು ಶ್ರೀರಾಮನನ್ನು ನೋಡಲು ಪಾದಯಾತ್ರೆ ಮಾಡಿಕೊಂಡು ಹೊರಟಿದ್ದು ಸುದ್ದಿಯಾಗಿತ್ತು. ಈಗ ಮುಸ್ಲಿಂ ವ್ಯಕ್ತಿಯೊಬ್ಬ ರಾಮಮಂದಿರ ಮೇಲೆ ಇಡುವ  ಧ್ವಾಜಗಳನ್ನು ಸಿದ್ಧ ಪಡಿಸಿರುವುದು ಎಲ್ಲಡೆ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗಿದ್ದರೆ ಬನ್ನಿ ಆ ವ್ಯಕ್ತಿ ಯಾರು ಎನ್ನುವ ಕುರಿತಾಗಿ ಮಾಹಿತಿ ತಿಳಿದುಕೊಳ್ಳೋಣ…

    ಧ್ವಜದ ವಿಶೇಷತೆ:  ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ರಾಮ ಮತ್ತು ಹನುಮಾನ್ ಧ್ವಜಗಳಿಗೆ ಭಾರಿ ಬೇಡಿಕೆ ಕಂಡು ಬಂದಿದೆ. 40 ಅಡಿ ಉದ್ದ ಮತ್ತು 42 ಅಡಿ ಅಗಲದ ಹನುಮಾನ್ ಧ್ವಜವನ್ನು ಮುಸ್ಲಿಂ ಟೈಲರ್ ಗುಲಾಮ್ ಜಿಲಾನಿ(55) ಅವರು ಹೊಲಿದಿದ್ದಾರೆ. ಈ ಭವ್ಯವಾದ ಧ್ವಜ ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದ ಮೇಲೆ ಹಾರಿಸಲು ಸಿದ್ಧವಾಗಿದೆ.

    40 ಅಡಿಯ ಹನಮಾನ್ ಧ್ವಜದಲ್ಲಿ ಒಂದು ಬದಿಯಲ್ಲಿ ಹನುಮಾನ್ ಮತ್ತು ಇನ್ನೊಂದು ಬದಿಯಲ್ಲಿ ಹನುಮಂತನ ಭುಜದ ಮೇಲೆ ರಾಮ ಮತ್ತು ಲಕ್ಷ್ಮಣನ ಚಿತ್ರಗಳನ್ನು ಹೊಂದಿದೆ.

    ಜಿಲಾನಿ ಮೂರನೇ ತಲೆಮಾರಿನ ಟೈಲರ್ ಆಗಿದ್ದು, ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ಧಾರ್ಮಿಕ ‘ಮಹಾವೀರಿ’ ಧ್ವಜಗಳನ್ನು ತಯಾರಿಸುವಲ್ಲಿ ಪರಿಣತಿ ಪಡೆದಿದ್ದಾರೆ.

    ಜಿಲಾನಿ ಅವರು ಖಾಸಗಿ ಸುದ್ದಿ ವಾಹಿನಿ ಜತೆ ಮಾತನಾಡಿ, “100 ಕೋಟಿಗೂ ಹೆಚ್ಚು ಜನರು ಕನಸು ಕಾಣುತ್ತಿರುವ ಐತಿಹಾಸಿಕ ರಾಮ ಮಂದಿರವನ್ನು ನಾನೇ ಹೊಲಿದ ಧ್ವಜ ಅಲಂಕರಿಸುತ್ತಿದೆ ಎಂಬ ಹೆಮ್ಮೆ ನನಗೆ ಇದೆ. ನನಗೆ ಅವಕಾಶ ಸಿಕ್ಕರೆ, ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಖಂಡಿತವಾಗಿಯೂ ಅಯೋಧ್ಯೆಗೆ ಹೋಗುತ್ತೇನೆ” ಎಂದಿದ್ದಾರೆ.

    “ನಾನು ನನ್ನ ತಂದೆಯೊಂದಿಗೆ ವೀರ್ ವಸ್ತ್ರಾಲಯದ ಮುಂಭಾಗದಲ್ಲಿರುವ ಫತೇ ಲಾಲ್ ಅಗರ್ವಾಲ್ ಒಡೆತನದ ಭೋಲಾ ವಸ್ತ್ರಾಲಯದಲ್ಲಿ ಕೆಲಸ ಮಾಡುತ್ತಿದ್ದೆ, ಅಲ್ಲಿ ನಾನು ಪ್ರಸ್ತುತ ಉದ್ಯೋಗದಲ್ಲಿದ್ದೇನೆ” ಎಂದು ಅವರು ತಿಳಿಸಿದ್ದಾರೆ.

    ಶ್ರೀರಾಮನಿಗಾಗಿ ಬರಿಗಾಲಲ್ಲಿ ಅಯೋಧ್ಯೆಗೆ ಹೊರಟ ಮುಸ್ಲಿಂ ಯುವತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts