More

    ಆಭರಣ ಕಳವು ಮಾಡಿದ್ದ ಮೂವರ ಬಂಧನ

    ಮುನವಳ್ಳಿ: ಪಟ್ಟಣದಲ್ಲಿ ಕುಟುಂಬದ ಸದಸ್ಯರಿಬ್ಬರು ಕೋವಿಡ್-19 ಕೇರ್ ಸೆಂಟರ್‌ನಲ್ಲ್ಲಿದ್ದ ಸಮಯದಲ್ಲಿ ಹಾಗೂ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಅವರ ಮನೆಗೆ ನುಗ್ಗಿ ಚಿನ್ನಾಭರಣ ಕದ್ದಿದ್ದ ಮೂವರನ್ನು ಸವದತ್ತಿ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

    ಪಟ್ಟಣದ ಸದ್ದಾಂಹುಸೇನ್ ನದಾಫ್ (24), ಇಸ್ಮಾಯಿಲ್ ದೊಡಮನಿ (32) ಹಾಗೂ ಬಸನಿಂಗಪ್ಪ ಕಡಕೋಳ (32) ಬಂಧಿತರು. ಅವರಿಂದ 33,000 ರೂ. ನಗದು ಸೇರಿದಂತೆ 6.23 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ಜು.31ರಂದು ಮುನವಳ್ಳಿ ಪಟ್ಟಣದ ಗಾಂಧಿ ನಗರದ ನಿವಾಸಿ ಮಹಾಬಲೇಶ್ವರ ಮುನವಳ್ಳಿ ಎಂಬುವರು ಹೃದಯಾಘಾತದಿಂದ ನಿಧನರಾಗಿದ್ದರು. ಅವರಿಗೆ ಕರೊನಾ ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಅವರ ಕುಟುಂಬದವರನ್ನು ಸವದತ್ತಿ ಮುರಾರ್ಜಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅಂದೇ ರಾತ್ರಿ ಅವರ ಮನೆಯಲ್ಲಿ ಯಾರೂ ಇಲ್ಲದ್ದನ್ನು ಅರಿತ ಕಳ್ಳರು, ಮನೆಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದರು.

    ಮೃತರ ಪತ್ನಿ ಸುರೇಖಾ ಮುನವಳ್ಳಿ ಅವರು ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಠಾಣೆಯಲ್ಲಿ ದೂರು ನೀಡಿದ್ದರು. ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್‌ಐ ನಾಗನಗೌಡ ಕಟ್ಟಿಮನಿಗೌಡ್ರ, ಎಂ.ಜಿ. ತಾರಿಹಾಳ, ಸಿಬ್ಬಂದಿ ಬಸವರಾಜ ಹಿರೇಮಠ, ಕೆ.ಬಿ. ಕಾಂಬಳೆ, ಪಿ.ಎಸ್.ಹಿರೇಹೊಳಿ, ಎಸ್.ಎಂ. ಜಾಧವ ತನಿಖೆ ಆರಂಭಿಸಿದ್ದರು.
    ಕೇವಲ ಹತ್ತೇ ದಿನಗಳಲ್ಲಿ ಕಳ್ಳರನ್ನು ಬಂಧಿಸುವಲ್ಲಿ ಯಶ ಕಂಡಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts