More

    ಮಗು ಪಡೆಯಲು 9 ವರ್ಷ ಕಾದಿದ್ದ ದಂಪತಿಗೆ ಶಾಕ್​: ಅವಳಿ ಮಕ್ಕಳನ್ನು ಕೊಂದ ಸಾಕು ನಾಯಿಗಳು!

    ಸಾವೋಪೌಲೊ: ನಾಯಿಗಿಂತ ನಿಯತ್ತಿನ ಪ್ರಾಣಿ ಇನ್ನೊಂದಿಲ್ಲ ಎಂಬುದು ಜನರ ನಂಬಿಕೆ ಹಾಗೂ ಸತ್ಯವೂ ಹೌದು. ತನ್ನನ್ನು ಸಾಕಿದವರಿಗಾಗಿ ಪ್ರಾಣವನ್ನು ನೀಡಲು ನಾಯಿ ಹಿಂಜರಿಯುವುದಿಲ್ಲ. ಯಾವುದೇ ಸ್ವಾರ್ಥವಿಲ್ಲದ ನಿಸ್ವಾರ್ಥ ಜೀವಿ ನಾಯಿ ಎನ್ನುತ್ತೇವೆ. ಆದರೆ, ಅದೆಲ್ಲವನ್ನು ಈ ಸ್ಟೋರಿಯಲ್ಲಿ ಎದರಾಗುವ ಶ್ವಾನಗಳು ಸುಳ್ಳು ಮಾಡಿಬಿಟ್ಟಿವೆ.

    ಹೌದು, ಕೆಲವೇ ದಿನಗಳ ಹಿಂದೆ ಹುಟ್ಟಿದ ಅವಳಿ ಸಹೋದರಿಯರನ್ನು ಸಾಕು ನಾಯಿಗಳೇ ಮನೆಯಲ್ಲಿ ಯಾರು ಇಲ್ಲದ ವೇಳೆ ದಾಳಿ ಮಾಡಿ ಕಾಲುಗಳಿಂದ ಪರಚಿ, ಗಾಯಗೊಳಿಸಿ ಸಾಯಿಸಿರುವ ಮನಕಲಕುವ ಘಟನೆಯೊಂದು ಬ್ರೆಜಿಲ್​ನಿಂದ ವರದಿಯಾಗಿದೆ.

    ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಂದು ಯಡವಟ್ಟು, ಕರೊನಾ ಸೋಂಕಿತನ ಜತೆಯಲ್ಲೇ 5 ವರ್ಷದ ಮಗು ಪಯಣ!

    ಲ್ಯಾಬ್ರಡರ್​ ಮತ್ತು ಅಮೆರಿಕನ್​ ಫಾಕ್ಸ್​ಹುಂಡ್​ ಹೆಸರಿನ ಹೊಟ್ಟೆಕಿಚ್ಚಿನ ನಾಯಿಗಳೆರಡು ಶ್ವಾನ ಕುಲಕ್ಕೆ ಅವಮಾನವೆಸಗಿವೆ. ಬ್ರೆಜಿಲ್​ನ ಈಶಾನ್ಯ ರಾಜ್ಯ ಬಹಿಯಾದ ಪಿರಿಪಾ ನಗರದಲ್ಲಿ ಕಳೆದ ಮಂಗಳವಾರ ಘಟನೆ ನಡೆದಿದ್ದು, ಮಕ್ಕಳನ್ನು ಬಿಟ್ಟ ಪಕ್ಕದ ಮನೆಯವರೊಂದಿಗೆ ಮಾತನಾಡಲು ಮಾಲಕಿ ತೆರಳಿದ್ದಾಗ ಎರಡು ನಾಯಿಗಳು ಕೇವಲ 26 ದಿನಗಳ ಹಸುಗೂಸುಗಳನ್ನು ಪರಚಿ, ಗಾಯಗೊಳಿಸಿ ಕೊಂದಿವೆ.

    ಮಗು ಪಡೆಯಲು 9 ವರ್ಷ ಕಾದಿದ್ದ ದಂಪತಿಗೆ ಶಾಕ್​: ಅವಳಿ ಮಕ್ಕಳನ್ನು ಕೊಂದ ಸಾಕು ನಾಯಿಗಳು!

    ಬೆಡ್​ರೂಮ್​ನಲ್ಲಿ ಮಕ್ಕಳಿಬ್ಬರ ಅಳುವ ಶಬ್ಧ ಕೇಳಿ ತಾಯಿ ಎಲೈನ್​ ನೋವೈಸ್​ (29) ಓಡೋಡಿ ಬರುತ್ತಾಳೆ. ಆದರೂ, ಮಕ್ಕಳನ್ನು ಉಳಿಸಿಕೊಳ್ಳಲು ಆಕೆಯಿಂದ ಸಾಧ್ಯವಾಗುವುದಿಲ್ಲ.

    ಇದನ್ನೂ ಓದಿ: ನಿತ್ಯಾನಂದನ ಅಹ್ಮದಾಬಾದ್​ ಆಶ್ರಮದಿಂದ ನಾಪತ್ತೆಯಾದ ಯುವತಿಯರು ಕೈಲಾಸದಲ್ಲಿ; ಗುರುವಿನೊಟ್ಟಿಗೆ ಸಂಗೀತಾಭ್ಯಾಸ

    ಕೌನ್ಸಿಲ್ ಉದ್ಯೋಗಿಯಾಗಿರುವ ನೋವೈಸ್ ಅವರಿಗೆ 9 ವರ್ಷಗಳಿಂದ ಮಕ್ಕಳಾಗಿರುವುದಿಲ್ಲ. ಅದೃಷ್ಟವೆಂಬತೆ ಅವಳಿ ಮಕ್ಕಳಾಗಿರುತ್ತದೆ. ಆದರೆ, ಉದ್ರಿಕ್ತ ಶ್ವಾನಗಳು ಅವಳಿ ಸಹೋದರಿಯರನ್ನು ಎಳೆದಾಡಿ, ತುಂಬಾ ಪರಚಿ ಗಾಯಗೊಳಿಸಿ ಬಿಡುತ್ತವೆ. ಅಲ್ಲದೆ, ಮಕ್ಕಳ ಹೊಟ್ಟೆಯ ಮೇಲೆ ಶ್ವಾನಗಳು ಮಾರಕ ಹಾನಿ ಮಾಡಿಬಿಡುತ್ತವೆ. ಇದರಿಂದಾಗಿ ಮಕ್ಕಳು ಮರಣ ಹೊಂದುತ್ತವೆ.

    ಮನೆ ಪಕ್ಕದ ನರ್ಸ್​ ಗಂಭೀರವಾಗಿ ಗಾಯಗೊಂಡ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುತ್ತಾರೆ. ಆದರೆ, ಒಂದು ಮಗು ಅದೇ ಸಂದರ್ಭದಲ್ಲಿ ಸಾವಿಗೀಡಾಗುತ್ತದೆ. ಇನ್ನೊಂದು ಮಗು ಬಾರ್ಬೋಸಾ ಮುನ್ಸಿಪಲ್​ ಆಸ್ಪತ್ರೆಯಲ್ಲಿ ಮರಣ ಹೊಂದುತ್ತದೆ.

    ಇದನ್ನೂ ಓದಿ: ಪುಷ್ಪ ಚಿತ್ರಕ್ಕೆ ರಶ್ಮಿಕಾ ಬದಲು ಇನ್ನೋರ್ವ ನಟಿಗೆ ಮೊದಲು ಮಣೆ ಹಾಕಿದ್ದರು ನಿರ್ದೇಶಕರು…

    ಮಕ್ಕಳ ಜನನದ ಬಳಿಕ ನಮ್ಮ ಮೇಲೆ ಹೆಚ್ಚಿನ ಗಮನವನ್ನು ಮಾಲೀಕರು ನೀಡುತ್ತಿಲ್ಲ ಎಂಬ ಹೊಟ್ಟೆಕಿಚ್ಚಿನಿಂದ ಶ್ವಾನಗಳು ಮಕ್ಕಳನ್ನು ಕೊಂದಿವೆ ಎಂದು ನಂಬಲಾಗಿದೆ. ಮಗುವಾಗುದಕ್ಕೂ ಮುನ್ನ ಕುಟುಂಬಸ್ಥರು ಶ್ವಾನಗಳನ್ನು ಹೆಚ್ಚು ಅಚ್ಚಿಕೊಂಡಿದ್ದರಂತೆ. ಆದರೂ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)

    ಪ್ರಾಚೀನ ವಿಷ್ಣುಮೂರ್ತಿಗೆ ಕೈಹಾಕಿದ ಮರಳು ಕಲಾಕೃತಿ ಕಲಾವಿದೆಯ ಬಂಧನ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts