More

    ಜೆಡಿಎಸ್ ಶಾಸಕ ಗೌರಿಶಂಕರ್​ ಅನರ್ಹಗೊಳಿಸಿ, ಆದೇಶಕ್ಕೆ 30 ದಿನ ತಡೆ ನೀಡಿದ ಹೈಕೋರ್ಟ್

    ತುಮಕೂರು: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆಸಿರುವ ಆರೋಪ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಡಿಸಿ ಗೌರಿ ಶಂಕರ್ ಆಯ್ಕೆಯನ್ನು ಇಂದು ಅನೂರ್ಜಿತಗೊಳಿಸಿರುವ ಹೈಕೋರ್ಟ್, 30 ದಿನಗಳ ಕಾಲ ಆದೇಶಕ್ಕೆ ತಡೆ ನೀಡಿದೆ.

    2018ರ ಚುನಾವಣೆಯಲ್ಲಿ ನಕಲಿ ಬಾಂಡ್ ಆಮಿಷ ಒಡ್ಡಿ ಅಕ್ರಮವಾಗಿ ಗೆದ್ದಿದ್ದಾರೆ ಆರೋಪದ ಮೇಲೆ ಗೌರಿಶಂಕರ ವಿರುದ್ಧ ಪ್ರಕರಣ ದಾಖಲಾಗಿತ್ತು. 32 ಸಾವಿರ ವಯಸ್ಕರು ಹಾಗೂ 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಪಾಲಿಸಿ ಬಾಂಡ್ ವಿತರಿಸಿದ್ದಾರೆ ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ದೂರು ನೀಡಿದ್ದರು. ಗೌರಿಶಂಕರ್ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸುವಂತೆ ಮನವಿ ಮಾಡಿದ್ದರು.

    ಇಂದು ತೀರ್ಪು ನೀಡಿದ ಹೈಕೋರ್ಟ್​ ಗೌರಿಶಂಕರ್​ ಅವರ ಶಾಸಕ ಸ್ಥಾನವನ್ನು ಅನೂರ್ಜಿತಗೊಳಿಸಿ ಅದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಆದೇಶಕ್ಕೆ 30 ದಿನಗಳ ಕಾಲ ಹೈಕೋರ್ಟ್​ ತಡೆ ನೀಡಿದೆ. ಸದ್ಯ ಗೌರಿಶಂಕರ್​ ಅವರು ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ.

    ಇದನ್ನೂ ಓದಿ: ಮುಸ್ಲಿಮರಿಗೆ ನಾವು ಅನ್ಯಾಯ ಮಾಡಿಲ್ಲ, ಅಧಿಕಾರಕ್ಕೆ ಬರುವ ಪಕ್ಷದಲ್ಲಿ ಈ ರೀತಿಯ ಗೊಂದಲ ಸಹಜ: ಬಿಎಸ್​ ಯಡಿಯೂರಪ್ಪ

    30 ದಿನಗಳಲ್ಲಿ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್​ನಲ್ಲಿ ತಡೆ ಪಡೆದರೆ ಮಾತ್ರ ಗೌರಿಶಂಕರ್ ಸೇಫ್ ಆಗಲಿದ್ದಾರೆ. ಇಲ್ಲವಾದರೆ ಚುನಾವಣಾ ಅಕ್ರಮಗಳ ಹಿನ್ನೆಲೆಯಲ್ಲಿ ಅನರ್ಹಗೊಳ್ಳುತ್ತಾರೆ. ಅನರ್ಹಗೊಂಡಲ್ಲಿ 6 ವರ್ಷಗಳ ಕಾಲ ಅನರ್ಹವಾಗಲಿದ್ದು, ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇರುವುದಿಲ್ಲ.

    ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸದ ಪರಿಸ್ಥಿತಿ ಹಿನ್ನೆಲೆಯಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಆದೇಶಕ್ಕೆ ತಡೆ ನೀಡಲು ಗೌರಿಶಂಕರ್​ ಪರ ಮೇಲ್ಮನವಿ ಸಲ್ಲಿಸುವುದಾಗಿ ವಕೀಲ ಹೇಮಂತ್ ರಾಜ್ ಹೇಳಿದ್ದಾರೆ. ಚುನಾವಣಾ ವೇಳಾಪಟ್ಟಿ ಪ್ರಕಟವಾಗಿರುವುದರಿಂದ ಆದೇಶಕ್ಕೆ ತಡೆ ಕೋರಿದ್ದಾರೆ. ಸದ್ಯಕ್ಕೆ 30 ದಿನಗಳ ಕಾಲ ಆದೇಶಕ್ಕೆ ತಡೆ ನೀಡಲಾಗಿದೆ. ಇದೀಗ ಗೌರಿಶಂಕರ್​ ಅವರ ರಾಜಕೀಯ ಭವಿಷ್ಯ ಸುಪ್ರೀಂಕೋರ್ಟ್​ ತೀರ್ಪಿನ ಮೇಲಿದೆ. (ದಿಗ್ವಿಜಯ ನ್ಯೂಸ್​)

    ಕಳೆದ 24 ಗಂಟೆಗಳಲ್ಲಿ 3,016 ಹೊಸ ಕೋವಿಡ್​ ಪ್ರಕರಣ ಪತ್ತೆ, 14 ಮಂದಿ ಸಾವು: 6 ತಿಂಗಳಲ್ಲೇ ಗರಿಷ್ಠ

    15 ವರ್ಷಗಳ ಬಳಿಕ ಪೆಪ್ಸಿ ಹೊಸ ಲೋಗೋ ಅನಾವರಣ!

    ಬಿಟಿಎಂ ಲೇಔಟ್​ನಲ್ಲಿ ಕೇಳಿಬಂತು ‘ಪಾಕಿಸ್ತಾನ್ ಜಿಂದಾಬಾದ್’! ವಿಚಾರಣೆ ನಂತರ ನಿಟ್ಟುಸಿರಿಟ್ಟ ಸಾರ್ವಜನಿಕರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts