More

    ವೇದಿಕೆಯಲ್ಲೇ ಪ್ರಜ್ವಲ್​ ಬೇಸರ: ಆ ಘಟನೆ ಕುರಿತು ಜಂಟಿಯಾಗಿ ಕಾರಣ ಬಿಚ್ಚಿಟ್ಟ ಅಣ್ಣ-ತಮ್ಮ!

    ಬೆಂಗಳೂರು: ದೊಡ್ಡಗೌಡರ ಕುಟುಂಬದ ಯುವ ನಾಯಕರಲ್ಲಿ ಭಿನ್ನಮತವಿದೆ, ಪ್ರಜ್ವಲ್​ ರೇವಣ್ಣ ಮತ್ತು ನಿಖಿಲ್​ ಕುಮಾರಸ್ವಾಮಿ ನಡುವೆ ಮನಸ್ತಾಪವಿದೆ… ಆ ಕಾರಣಕ್ಕಾಗಿಯೇ ಶಿರಾ ಬೈ ಎಲಕ್ಷನ್​ ವೇಳೆ ಪಕ್ಷದ ಅಭ್ಯರ್ಥಿ ಪರ ಮತಯಾಚಿಸುತ್ತಿದ್ದ ವೇದಿಕೆಯಲ್ಲೇ ಅವರಿಬ್ಬರ ಆಂತರಿಕ ಕಲಹ ಬಹಿರಂಗಗೊಂಡಿತ್ತು… ಎಂಬೆಲ್ಲ ಚರ್ಚೆಗೆ ಇಂದು(ಶನಿವಾರ) ಸ್ವತಃ ನಿಖಿಲ್​ ಮತ್ತು ಪ್ರಜ್ವಲ್​ ಇಬ್ಬರೂ ಒಟ್ಟಾಗಿ ತೆರೆ ಎಳೆದಿದ್ದಾರೆ.

    ನಗರದ ಜೆಡಿಎಸ್​ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಜೆಡಿಎಸ್​ ನಾಯಕರ ಸಭೆಯಲ್ಲಿ ಎಚ್​.ಡಿ.ಕುಮಾರಸ್ವಾಮಿ ಮತ್ತು ಎಚ್​.ಡಿ.ರೇವಣ್ಣರ ಸಮ್ಮುಖದಲ್ಲೇ ನಿಖಿಲ್​-ಪ್ರಜ್ವಲ್​ ಅವರು ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು. ವೇದಿಕೆಯಲ್ಲಿ ಮಾತು ಶುರು ಮಾಡಿದ ನಿಖಿಲ್​ ಕುಮಾರಸ್ವಾಮಿ, ಬಾ ಬ್ರದರ್ ಇಲ್ಲಿ… ಎನ್ನುತ್ತ ಪ್ರಜ್ವಲ್​ರ ಹೆಗಲ ಮೇಲೆ ಕೈ ಹಾಕಿದರು. ಶಿರಾದಲ್ಲಿ ಎರಡೇ ನಿಮಿಷದಲ್ಲಿ ಮಾತು ಮುಗಿಸಬೇಕು ಎಂದು ಸಮಯ ನಿಗದಿ ಮಾಡಿದ್ರು. ಹಾಗಾಗಿ ಪ್ರಜ್ವಲ್ ಹೆಸರನ್ನು ಹೇಳಲು ಆಗಲಿರಲಿಲ್ಲ. ಇದು ಗೊಂದಲಕ್ಕೆ ಕಾರಣವಾಯ್ತು. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.

    ಇದಕ್ಕೆ ದನಿಗೂಡಿಸಿದ ಪ್ರಜ್ವಲ್, ಶಿರಾದಲ್ಲಿ ಅಂದು ಸಮಾರಂಭ ನಡೆಯುತ್ತಿರುವಾಗಲೇ ವೇದಿಕೆಯಿಂದ ನಾನು ನಿರ್ಗಮಿಸಿದ್ದಕ್ಕೆ ಕೆಲವರು ಏನೇನೋ ಅರ್ಥ ಕಲ್ಪಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿದರು. ಚುನಾವಣೆ ಪ್ರಚಾರದ ಕೊನೇ ದಿನ ಮೂರ್ನಾಲ್ಕು ಗ್ರಾಮಗಳ ಪ್ರಚಾರಕ್ಕೆ 5 ಗಂಟೆಯೊಳಗೆ ಹೋಗಬೇಕಿತ್ತು. ಹೀಗಾಗಿ ನಾನು ಸಮಾರಂಭದಿಂದ ಎದ್ದು ಹೋದೆ. ನನ್ನ ಮತ್ತು ನಿಖಿಲ್​ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.

    ನಾವಿಬ್ಬರೂ ರಾಜ್ಯಾದ್ಯಂತ ಪ್ರವಾಸ ಮಾಡ್ತೀವಿ. ಯುವಕರನ್ನು ಪಕ್ಷಕ್ಕೆ ಸೆಳೆಯಬೇಕಾದರೆ ನಮ್ಮ ಪಕ್ಷ ಯುವಕರಿಗೆ ಮೀಸಲಾತಿ ಕೊಡ್ತೀವಿ ಎಂದು ಘೋಷಣೆ ಮಾಡಬೇಕು. ಆಗ ಯುವಕರು ಪಕ್ಷಕ್ಕೆ ಬರ್ತಾರೆ. ನಾವು ಕೂಡ ಯುವಕರನ್ನು ಪಕ್ಷಕ್ಕೆ ಕರೆಯಲು ಸಾಧ್ಯವಾಗುತ್ತೆ ಎಂದರು ಸಲಹೆ ನೀಡಿದರು.

    ನಾನು ಮತ್ತು ನಿಖಿಲ್ ಒಟ್ಟಾಗಿ ಸೇರಿ ಸಭೆ ಮಾಡಿ, ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡ್ತೀವಿ. ಪಕ್ಷದ ನಿಷ್ಠಾವಂತರಿಗೆ ಅವಕಾಶ ಕೊಟ್ಟು, ಪಕ್ಷವನ್ನು ಪುನರ್ ಸಂಘಟನೆ ಮಾಡಬೇಕಿದೆ. ಕುಮಾರಣ್ಣ ಮತ್ತೆ ಸಿಎಂ ಆಗ್ತಾರೆ, ನಾವೆಲ್ಲ ಒಟ್ಟಿಗೆ ಹೋದ್ರೆ ಮುಂದಿನ ಬಾರಿ 150 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದರು.

    ನಿಖಿಲ್​-ಪ್ರಜ್ವಲ್ ಒಟ್ಟಾಗಿ ಯುದ್ಧಕ್ಕೆ ಹೋಗಲಿ..! ಚಿಕ್ಕಪ್ಪ-ದೊಡ್ಡಪ್ಪನ ಎದುರಲ್ಲೇ ಸವಾಲು

    ತಾಯಿಯನ್ನು ಬಲಿ ಪಡೆದಿದ್ದ ಉಮಾಶ್ರೀ ಕಾರಿಗೆ ಮಗಳ ಜೀವವೂ ಹೋಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts