More

    ಜೆಡಿಎಸ್ ಬಡವರು, ರೈತರ ಪಕ್ಷ : ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡ ಹೇಳಿಕೆ

    ಶಿಡ್ಲಘಟ್ಟ: ಜೆಡಿಎಸ್ ಕೇವಲ ಶ್ರೀಮಂತರು ಹಾಗೂ ನಾಯಕರ ಪಕ್ಷವಲ್ಲ, ಬದಲಿಗೆ ಇದೊಂದು ಬಡವರ ಹಾಗೂ ರೈತರ ಪಕ್ಷ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಹೇಳಿದರು.

    ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಗರದ ಹೊರವಲಯದ ಹಂಡಿಗನಾಳದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್‌ನಿಂದ ಗುರುವಾರ ಆಯೋಜಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಜನತೆಯ ಹಾಗೂ ರೈತರ ಪರವಾಗಿ ದುಡಿಯುವುದೇ ಜೆಡಿಎಸ್ ಮುಖ್ಯ ಗುರಿ. ಈ ಪಕ್ಷವನ್ನು ತೆಗೆಯಲು ಸಿದ್ದರಾಮಯ್ಯರ ಕೈಯ್ಯಲ್ಲೂ ಆಗಲ್ಲ. ಹಾಗೆಯೇ ಈ ಜಿಲ್ಲೆಯ ಮತ್ತೋರ್ವ ಮಹಾನುಭಾವನನ್ನು ವಿಧಾನಸಭೆ ಸ್ಪೀಕರ್ ಆಗಿಯೂ ವಾಡಿದ್ದೇ, ಇಂತಹವರೆಲ್ಲಾ ಪಕ್ಷ ತೊರೆದು ಹೋದರೂ ಪಕ್ಷ ಇನ್ನೂ ಗಟ್ಟಿಯಾಗಿ ನಿಂತಿದೆಯೆಂದರೆ ಅದಕ್ಕೆ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರು ಕಾರಣ ಎಂದರು.

    ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ನ ಎಲ್ಲ ಭಾಗ್ಯಗಳಿಗೂ ಹಣ ನೀಡಿ ನಂತರ ರೈತರ ಸಾಲ ಮನ್ನಾ ಮಾಡಿ ಎಂದು ಸಿದ್ದರಾಮಯ್ಯ ಒತ್ತಡ ಹೇರಿದಾಗಲೂ ಅವರೆಲ್ಲಾ ಭಾಗ್ಯಗಳಿಗೂ ಹಣ ನೀಡಿ ರೈತರ ಸುಮಾರು 25 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದು ರೈತನ ಮಗನಾದ ಎಚ್.ಡಿ.ಕುವಾರಸ್ವಾಮಿ ಮಾತ್ರ, ಬೇರೆ ಯಾರೂ ಸಾಲ ಮನ್ನಾ ಮಾಡಲಿಲ್ಲ ಎಂದರು.

    ಹಾಗಾಗಿ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ರೈತನ ಮಗನಾದ ವಕ್ಕಲೇರಿ ರಾಮುರಿಗೆ ಅತ್ಯಂತ ಹೆಚ್ಚಿನ ಮತಗಳು ನೀಡಿ ಜಯಶೀಲರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

    ಪಕ್ಷದಿಂದ ಬಹಳಷ್ಟು ಮಂದಿ ಅಲ್ಪಸಂಖ್ಯಾತರನ್ನು ಶಾಸಕರನ್ನಾಗಿ, ಸಚಿವರನ್ನಾಗಿ ಮಾಡಿದ್ದೇನೆ. ಐದು ವರ್ಷ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎಷ್ಟು ಮಂದಿ ಅಲ್ಪಸಂಖ್ಯಾತರನ್ನು ಬೆಳೆಸಿದ್ದಾರೆ ಎಂದು ಪ್ರಶ್ನಿಸಿದರು. 123 ಶಾಸಕರ ಸಂಖ್ಯೆ ಹೊಂದಿದ್ದ ಕಾಂಗ್ರೆಸ್ ನಮ್ಮ ಪಕ್ಷದಿಂದ 7 ಮಂದಿಯನ್ನು ಕರೆದುಕೊಂಡು ಹೋಗುವ ಮೂಲಕ ಜೆಡಿಎಸ್ ಅನ್ನು ಮುಗಿಸುತ್ತೇವೆ ಎಂದು ಹೊರಟ ಪರಿಣಾಮ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ 78 ಶಾಸಕರನ್ನು ಮಾತ್ರ ಗೆಲ್ಲಿಸಿಕೊಳ್ಳಲು ಸಾಧ್ಯವಾಯಿತು ಎಂದರು.

    ಜೆಡಿಎಸ್ ಮುಖಂಡ ಬಿ.ಎನ್.ರವಿಕುವಾರ್ ವಾತನಾಡಿ, ರಾಜಕಾರಣದಲ್ಲಿ ನಂಬಿಕೆ ಎನ್ನುವುದು ಬಹುಮುಖ್ಯವಾಗಿರುತ್ತದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಎಲ್ಲ ಅಭ್ಯರ್ಥಿಗಳಿಗೂ ಒಂದೊಂದು ಬಿ ಫಾರ್ಮ್ ನೀಡಿದರೆ ನನಗೆ ಪಕ್ಷದ ವರಿಷ್ಠರು ಎರಡು ಬಿ ಫಾರ್ಮ್ ನೀಡಿದ್ದರು. ಪಕ್ಷ ಹಾಗೂ ವರಿಷ್ಠರು ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಜತೆಗೆ ನಾನು ಜೀವಂತವಾಗಿರುವವರೆಗೂ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಹಿನ್ನಡೆಯಾಗಲು ಬಿಡುವುದಿಲ್ಲ. ಕಾರ್ಯಕರ್ತರು ಯಾವುದೇ ಗೊಂದಲಗಳಿಗೆ ಕಿವಿಗೊಡಬಾರದು ಎಂದರು.

    ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ವಕ್ಕಲೇರಿ ರಾಮು, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಜೆಡಿಎಸ್ ಜಿಲ್ಲಾಶಧ್ಯಕ್ಷ ಕೆ.ಎಂ.ಮುನೇಗೌಡ, ಮಾಜಿ ಜಿ.ಪಂ ಸದಸ್ಯ ಬಂಕ್ ಮುನಿಯಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ವಿ.ವೆಂಕಟೇಶ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್ ಮತ್ತಿತರರು ಹಾಜರಿದ್ದರು.

    ಪ್ರಧಾನಿ ಮೋದಿ ಅವರನ್ನು ಸಾಕಷ್ಟು ಬಾರಿ ಭೇಟಿ ಮಾಡಿದ್ದೇನೆ. ಈ ಹಿಂದೆ ಮನಮೋಹನ್ ಸಿಂಗ್, ವಾಜಪೇಯಿ ಅವರನ್ನೂ ಭೇಟಿ ಮಾಡಿದ್ದೇನೆ. ಪ್ರಧಾನಿ ಭೇಟಿ ಮಾಡೋಕೆ ಸಿದ್ದರಾಮಯ್ಯ ಪರ್ಮಿಷನ್ ತೆಗೆದುಕೊಂಡು ಹೋಗಬೇಕಾ? ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ದೇವೇಗೌಡ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಈಗ ಕೋಲಾರದಲ್ಲಿ ಏನ್ ನಡೀತಿದೆ ಅಂತ ಗೊತ್ತಿದೆ. ಅವನೇನ್ ಮಾಡ್ತಿದ್ದಾನೆ, ನಾನು ಸ್ಪೀಕರ್ ಮಾಡಿದ್ದೇನೆ, ಆ ಮಹಾನುಭಾವನನ್ನ ಕೇಳಿ ಎಂದು ಗುಡುಗಿದರು.

    ರಾಜಕೀಯ ನಿಷ್ಠೆ ಪ್ರಶ್ನಿಸಬೇಡಿ: ದೇಶದ ರಾಜಕಾರಣ ಎಷ್ಟು ಹದೆಗೆಟ್ಟಿದೆ ಎಂದರೇ ಆ ಬಗ್ಗೆ ಚರ್ಚೆ ಮಾಡುವುದೇ ವ್ಯರ್ಥ. ನನ್ನ ರಾಜಕೀಯ ಜೀವನದಲ್ಲಿ ಯಾರು ಎಷ್ಟೇ ಒತ್ತಡಗಳನ್ನು ಹಾಕಿದರೂ 1977ರಲ್ಲಿ ದೇಶದ ಅಂದಿನ ಪ್ರಧಾನಿ ಮುರಾರ್ಜಿ ದೇಸಾಯಿ ಅವರು ರಾಜ್ಯದ ಜನತಾಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದಾಗಿನಿಂದ ಈವರೆಗೂ ನನ್ನ ರಾಜಕೀಯದ ನಿಷ್ಠೆಯನ್ನು ಬೇರೆ ಯಾರು ಪ್ರಶ್ನೆ ಮಾಡುವಂತಿಲ್ಲ ಎಂದು ಎಚ್.ಡಿ.ದೇವೇಗೌಡ ಕಿಡಿ ಕಾರಿದರು.

    ಕಾಂಗ್ರೆಸ್‌ನ ಹಣೆಬರಹ ಗೊತ್ತಿದೆ: ನಾನು ಒಳಗೆ, ಹೊರಗೆ ರಾಜಕೀಯ ಮಾಡೋ ಪ್ರಶ್ನೆ ಬೇರೆ. ನಮ್ಮದು ಪ್ರಾದೇಶಿಕ ಪಕ್ಷ, ನನ್ನ ಅನುಮತಿ ಇಲ್ಲದೇ ಕುಮಾರಸ್ವಾಮಿ ಬಿಜೆಪಿ ಜತೆಗೆ ಹೋದ್ರು. ಕಾಂಗ್ರೆಸ್ ಜೆಡಿಎಸ್‌ಗೆ ಬೆಂಬಲ ನೀಡಬೇಕಾದರೆ ನಾನು ಬೇಡ ಅಂದೆ. ಕಾಂಗ್ರೆಸ್‌ನವರು ನಮ್ಮ ಮನೆ ಬಾಗಿಲಿಗೆ ಬಂದ್ರು, ಸಮ್ಮಿಶ್ರ ಸರ್ಕಾರವನ್ನು ತೆಗೆದವರು ಯಾರು? ಉತ್ತರ ಕೊಡ್ತಾರಾ? ಕುಮಾರಸ್ವಾಮಿ ಸರ್ಕಾರ ಭ್ರಷ್ಟ ಸರ್ಕಾರ ಅಂತಾರೆ, ಕಾಂಗ್ರೆಸ್‌ನವರ ಹಣೆ ಬರಹ ಏನಂತ ಗೊತ್ತಿದೆ ಎಂದು ಮಾಜಿ ಪ್ರಧಾನಿ ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts