More

    ಜೆಡಿಎಸ್​ ಡಿಮ್ಯಾಂಡೆಡ್​ ಪಾರ್ಟಿ ಎಂದ ರೇವಣ್ಣ; ಹೌದು ಎಂದು ಒಪ್ಪಿದ್ರು ಸಿದ್ದರಾಮಯ್ಯ, ಈಶ್ವರಪ್ಪ!

    ಬೆಂಗಳೂರು: ರಾಜಕೀಯದಲ್ಲಿ ಸಂದರ್ಭಾನುಸಾರ ಒಮ್ಮೊಮ್ಮೆ ಒಂದೊಂದು ಪಕ್ಷಕ್ಕೆ ಬೇಡಿಕೆ ಬರುತ್ತದೆ. ಈಗ ಎಲ್ಲಿ-ಯಾವ ಪಕ್ಷ ಡಿಮ್ಯಾಂಡೆಡ್ ಪಾರ್ಟಿ ಎಂಬ ಬಗ್ಗೆ ಅಧಿವೇಶನದಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿದೆ. ಜೆಡಿಎಸ್​ನಲ್ಲಿದ್ದವರನ್ನು ಕಾಂಗ್ರೆಸ್​ಗೆ ಸೇರಿಸಿಕೊಂಡ ಬಗ್ಗೆ ನೇರವಾಗಿ ಯಾರ ಹೆಸರನ್ನೂ ಉಲ್ಲೇಖಿಸದೆ ಊರಿನ ಹೆಸರನ್ನು ಪ್ರಸ್ತಾಪಿಸಿದ ಜೆಡಿಎಸ್​ ನಾಯಕ ಎಚ್​.ಡಿ. ರೇವಣ್ಣ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾಲೆಳೆದರು.

    ನೀವು ಕಾಂಗ್ರೆಸ್​​ನವರು ಸಿಂದಗಿ ಹಾಗೂ ಶಿವಮೊಗ್ಗದಲ್ಲಿ ನಮ್ಮ ಪಕ್ಷದವರನ್ನು ಅಭ್ಯರ್ಥಿ ಆಗಿ ಹುಡುಕಿದ್ದೀರಿ ಎಂದು ಪರೋಕ್ಷವಾಗಿ ಮಧು ಬಂಗಾರಪ್ಪ, ಅಶೋಕ್ ಮನಗೂಳಿ ಅವರ ಪಕ್ಷಾಂತರ ವಿಚಾರವನ್ನು ರೇವಣ್ಣ ಪ್ರಸ್ತಾಪಿಸಿದರು. ಮಾತ್ರವಲ್ಲ ನಮ್ಮ ಪಕ್ಷಕ್ಕೆ ಡಿಮ್ಯಾಂಡ್ ಇದೆ ಎಂದು ಸಿದ್ದರಾಮಯ್ಯ ಅವರನ್ನು ಮಾತಲ್ಲೇ ಕುಟುಕಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಿಮ್ಮ ಪಕ್ಷಕ್ಕೆ ಡಿಮಾಂಡ್ ಇದ್ದೇ ಇದೆ. ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಲು ಜೆಡಿಎಸ್​ಗೆ ಸಾಧ್ಯವಿಲ್ಲ, ಹೀಗಾಗಿ ಡಿಮ್ಯಾಂಡ್​ನಲ್ಲಿ ಇರಲೇಬೇಕು ಎಂದು ರೇವಣ್ಣಗೆ ಸಿದ್ದರಾಮಯ್ಯ ಮಾತಿನೇಟು ಕೊಟ್ಟರು. ಇವರಿಬ್ಬರ ಮಾತಿನಲ್ಲಿ ಮಧ್ಯಪ್ರವೇಶಿಸಿದ ಕೆ.ಎಸ್​. ಈಶ್ವರಪ್ಪ, ರಾಜ್ಯದಲ್ಲಿ ಜೆಡಿಎಸ್​ ಡಿಮ್ಯಾಂಡ್ ಪಾರ್ಟಿ, ದೇಶದಲ್ಲಿ ಕಾಂಗ್ರೆಸ್​ ಡಿಮ್ಯಾಂಡೆಡ್ ಪಾರ್ಟಿ ಎಂದು ಸಿದ್ದರಾಮಯ್ಯ ಅವರಿಗೆ ತಮಾಷೆ ಮಾಡಿದರು.

    “ನನ್ನ ಹೆಲಿಕಾಪ್ಟರ್ ಕೆಟ್ಟಿತ್ತು… ಆದರೆ ನಾನದನ್ನು ಸಂಚು ಎನ್ನುವುದಿಲ್ಲ…”

    ಸಂಸದರ ಮನೆಯ ಮುಂದೆಯೇ ಆತ್ಮಹತ್ಯೆಗೆ ಪ್ರಯತ್ನಿಸಿದ ಸೊಸೆ… ಪ್ರೇಮಕಥೆಗೆ ಸ್ಫೋಟಕ ತಿರುವು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts