More

    ಸಂಕಷ್ಟದಲ್ಲಿರುವ ಜನರಿಗೆ ನೆರವಾಗಿ ; ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ

    ತುಮಕೂರು : ಸಂಕಷ್ಟದಲ್ಲಿರುವ ಜನರಿಗೆ ನೆರವಿನ ಹಸ್ತ ಚಾಚುವ ಮೂಲಕ ಕಾರ್ಯಕರ್ತರು ಪಕ್ಷದ ಘನತೆ ಹೆಚ್ಚಿಸಬೇಕು ಎಂದು ಸಣ್ಣನೀರಾವರಿ, ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಶನಿವಾರ ಬಿಜೆಪಿ ನಗರ ಮಂಡಲದ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳ ಟೀಕೆಗೆ ಉತ್ತರ ನೀಡುವುದಕ್ಕಷ್ಟೇ ಕಾರ್ಯಕರ್ತರು ಸೀಮಿತವಾಗದೆ. ತಮಗೆ ವಹಿಸಿರುವ ಜವಾಬ್ದಾರಿಯನ್ನು ಚಾಚು ತಪ್ಪದೆ ಪಾಲಿಸಿದಾಗ ಪಕ್ಷ ಮತ್ತೊಮ್ಮೆ ಜನ ಮನ್ನಣೆ ಗಳಿಸಲು ಸಾಧ್ಯ ಎಂದರು.
    ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ಕಾರ್ಯಕರ್ತರು ಮನದಟ್ಟು ಮಾಡಬೇಕಿದೆ. ಸರ್ಕಾರ ಹಾಗೂ ಪಕ್ಷ ಎರಡು ಒಟ್ಟಿಗೆ ಹೋಗಬೇಕಿದೆ. ವಾಜಪೇಯಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದರೂ 2004ರ ಲೋಕಸಭಾ ಚುನಾವಣೆಯಲ್ಲಿ ಸೋಲಾಯಿತು. ಇದಕ್ಕೆ ಕಾರಣ ಸರ್ಕಾರದ ಕಾರ್ಯಕ್ರಮಗಳು ಜನರ ನಡುವೆ ಪ್ರಚಾರವಾಗಲಿಲ್ಲ. ಇದನ್ನು ಸ್ವತಃ ವಾಜಪೇಯಿ ಅವರು ಒಪ್ಪಿಕೊಂಡಿದ್ದರು. ಹಾಗಾಗಿ, ಪಕ್ಷದ ಸರ್ಕಾರಗಳು ಎಲ್ಲರ ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಒಂದಿಲ್ಲೊಂದು ಹೊಸ ಸಮಸ್ಯೆಗಳು ಉದ್ಬವವಾಗುತ್ತಲೇ ಇರುತ್ತವೆ. ಅವುಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕಿದೆ ಎಂದು ತಿಳಿಸಿದರು.

    1950ರಲ್ಲಿ ಜನಸಂಘ ಆರಂಭವಾದಾಗ ಇದ್ದ ಧ್ಯೇಯೋದ್ದೇಶಗಳೇ ಇಂದಿಗೂ ಬಿಜೆಪಿ ಮುಂದುವರಿಸಿಕೊಂಡು ಬಂದಿದೆ. ಹಾಗಾಗಿ, 2 ಸ್ಥಾನದಿಂದ ಈಗ ಅಧಿಕಾರ ಹಿಡಿಯುವ ಮಟ್ಟಿಗೆ ಜನರು ನಮ್ಮನ್ನು ಬೆಳೆಸಿದ್ದಾರೆ. ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಹೊಟ್ಟೆಪಾಡಿನ ಸ್ಥಿತಿ ಗಂಭೀರವಾಗಿದೆ. ಇಂತಹ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಜನರ ಸಂಕಷ್ಟಗಳಿಗೆ ಸ್ಪಂದಿಸಿದ ರೀತಿ ನಿಜಕ್ಕೂ ಮೆಚ್ಚುವಂತಹದ್ದು ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

    ಪಕ್ಷವನ್ನು ಸಂಘಟನಾತ್ಮಕವಾಗಿ ಸದಾ ಚಟುವಟಿಕೆ, ಕ್ರೀಯಾಶೀಲವಾಗಿಡಲು ಇಂತಹ ಕಾರ್ಯಕಾರಣಿ ಸಭೆಗಳು ಅನಿವಾರ್ಯ. ಪಕ್ಷ ವಹಿಸಿದ ಜವಾಬ್ದಾರಿಯನ್ನು ನೀವು ನಿರ್ಲಕ್ಷಿಸಿದರೆ, ಪಕ್ಷ ನಿಮ್ಮನ್ನು ನಿರ್ಲಕ್ಷಿಸುತ್ತದೆ ಎಂಬುದಕ್ಕೆ ನಮ್ಮ ನಡುವೆ ಹಲವಾರು ಉದಾಹರಣೆಗಳಿವೆ. ಕಾರ್ಯಕರ್ತರಿಂದ ಜನನಾಯಕನಾಗಬೇಕಾದರೆ ಪಕ್ಷದ ಕೆಲಸವನ್ನು ಚಾಚೂ ತಪ್ಪದೆ ಮಾಡಿ.
    ಎಸ್.ಶಿವಪ್ರಸಾದ್ ಬಿಜೆಪಿ ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts