More

    ಲಂಕಾ ಕ್ರಿಕೆಟ್‌ನಲ್ಲಿ ಜಯ್ ಷಾ ಹಸ್ತಕ್ಷೇಪ: ಬಿಸಿಸಿಐ ಕಾರ್ಯದರ್ಶಿ ವಿರುದ್ಧ ಮಾಜಿ ನಾಯಕ ಅರ್ಜುನ ರಣತುಂಗ ಆರೋಪ

    ನವದೆಹಲಿ: ಸರ್ಕಾರದ ಹಸ್ತಕ್ಷೇಪದಿಂದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು (ಎಸ್‌ಎಲ್‌ಸಿ) ಐಸಿಸಿ ಅಮಾನತುಗೊಳಿಸಿರುವ ನಡುವೆ, ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಶ್ರೀಲಂಕಾ ಕ್ರಿಕೆಟ್‌ಅನ್ನು ಹಾಳು ಮಾಡುತ್ತಿದ್ದಾರೆ ಎಂದು 1996ರ ಏಕದಿನ ವಿಶ್ವಕಪ್ ವಿಜೇತ ಲಂಕಾ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗ ಆರೋಪಿಸಿದ್ದಾರೆ.
    ಸ್ಥಳೀಯ ಪತ್ರಿಕೆಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ರಣತುಂಗ, ‘ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧಿಕಾರಿಗಳ ಜತೆಗಿನ ನಿಕಟ ಸಂಪರ್ಕದಿಂದಾಗಿ ಮಂಡಳಿಯನ್ನು ನಿಯಂತ್ರಿಸಬಹುದು ಎಂದು ಜಯ್ ಷಾ ಅವರು ತಿಳಿದುಕೊಂಡಿದ್ದಾರೆ. ಜಯ್ ಷಾ ಲಂಕಾ ಕ್ರಿಕೆಟ್ ಮಂಡಳಿಯನ್ನು ಮುನ್ನಡೆಸುತ್ತಿದ್ದು, ಅವರ ಒತ್ತಡದಿಂದಾಗಿ ಎಸ್‌ಎಲ್‌ಸಿ ಹಾಳಾಗುತ್ತಿದೆ. ಭಾರತದ ಒಬ್ಬ ವ್ಯಕ್ತಿಯಿಂದಾಗಿ ಶ್ರೀಲಂಕಾದಲ್ಲಿ ಕ್ರಿಕೆಟ್ ಕೆಳಮಟ್ಟ ತಲುಪಿದೆ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
    ಕಳೆದ ಒಂದು ವಾರದಿಂದ ಲಂಕಾ ಕ್ರಿಕೆಟ್ ಮಂಡಳಿಯ ಒಳಗೆ ಮತ್ತು ಹೊರಗೆ ಸಾಕಷ್ಟು ವಿಷಯಗಳು ನಡೆದಿವೆ. ಜಯ್ ಷಾ ಅವರ ತಂದೆ ಭಾರತ ಸರ್ಕಾರದ ಕೇಂದ್ರ ಗೃಹ ಮಂತ್ರಿ (ಅಮಿತ್ ಷಾ) ಆಗಿರುವುದರಿಂದ ಅವರು (ಜಯ್ ಷಾ) ಪ್ರಭಾವಿ ವ್ಯಕ್ತಿ ಎನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟ ಶ್ರೀಲಂಕಾ ತಂಡ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಕೂಡ ವಿಲಗೊಂಡಿದೆ.
    ವಿಶ್ವಕಪ್ ವೈಲ್ಯದ ಬಳಿಕ ಬಳಿಕ ಲಂಕಾ ಕ್ರೀಡಾ ಸಚಿವ ರೋಶನ್ ರಣಸಿಂಘೆ, ಎಸ್‌ಎಲ್‌ಸಿಯ ಆಡಳಿತ ಮಂಡಳಿಯನ್ನು ವಜಾಗೊಳಿಸಿ ರಣತುಂಗ ನೇತೃತ್ವದಲ್ಲಿ ಮಧ್ಯಂತರ ಸಮಿತಿಯನ್ನು ನೇಮಿಸಿದ್ದರು. ಆದರೆ ಇದಕ್ಕೆ ಲಂಕಾ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts