More

    ಆಸೀಸ್ ಎದುರು ಏಕದಿನ ಸರಣಿ ಗೆದ್ದ ದಕ್ಷಿಣ ಆಫ್ರಿಕಾ: ಪಾಕ್‌ಗೆ ಒಲಿದ ಅದೃಷ್ಟ

    ಜೊಹಾನ್ಸ್‌ಬರ್ಗ್: ಯುವ ವೇಗಿ ಮಾರ್ಕೋ ಜಾನ್ಸೆನ್ (47 ರನ್ ಹಾಗೂ 39ಕ್ಕೆ 5 ವಿಕೆಟ್) ಆಲ್ರೌಂಡ್ ನಿರ್ವಹಣೆಯ ಬಲದಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು 122 ರನ್‌ಗಳಿಂದ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ ಸರಣಿಯ ಮೊದಲೆರಡು ಪಂದ್ಯ ಬೀಗಿದ್ದ ಆಸೀಸ್‌ಗೆ ದಿಟ್ಟ ತಿರುಗೇಟು ನೀಡಿದ ಟೆಂಬಾ ಬವುಮಾ ಪಡೆ, 3-2ರಿಂದ ಸರಣಿ ವಶಪಡಿಸಿಕೊಂಡಿತು. ಇದರಿಂದ ಆಸೀಸ್ ಐಸಿಸಿ ಏಕದಿನ ರ‌್ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೆ ಜಾರಿದ್ದರೆ, ಪಾಕಿಸ್ತಾನ (115) ಮತ್ತೆ ಅಗ್ರಸ್ಥಾನಕ್ಕೇರಿದೆ. ಪಾಕ್‌ನಷ್ಟೇ ಅಂಕ ಹೊಂದಿದ್ದರೂ, ಭಾರತ ದಶಾಂಶ ಲೆಕ್ಕಾಚಾರದಲ್ಲಿ 2ನೇ ಸ್ಥಾನದಲ್ಲಿದೆ.

    https://x.com/ProteasMenCSA/status/1703425246382956859?s=20

    ಭಾನುವಾರ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ದ.ಆಫ್ರಿಕಾ, ಏಡೆನ್ ಮಾರ್ಕ್ರಮ್ (93) ಶತಕ ವಂಚಿತ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್‌ಗೆ 315 ರನ್ ಪೇರಿಸಿತು. ಪ್ರತಿಯಾಗಿ ಆಸೀಸ್ 34.1 ಓವರ್‌ಗಳಲ್ಲಿ 193 ರನ್‌ಗಳಿಗೆ ಆಲೌಟ್ ಆಯಿತು.

    ದಕ್ಷಿಣ ಆಫ್ರಿಕಾ: 9 ವಿಕೆಟ್‌ಗೆ 315 (ಡಿ ಕಾಕ್ 27, ಡುಸೆನ್ 30, ಮಾರ್ಕ್ರಮ್ 93, ಮಿಲ್ಲರ್ 63, ಮಾರ್ಕೋ ಜಾನ್ಸೆನ್ 47, ಆಡಂ ಝಂಪಾ 70ಕ್ಕೆ3, ಅಬೋಟ್ 54ಕ್ಕೆ2).
    ಆಸ್ಟ್ರೇಲಿಯಾ: 34.1 ಓವರ್‌ಗಳಲ್ಲಿ 193 (ಮಿಚೆಲ್ ಮಾರ್ಷ್ 71, ಲಬುಶೇನ್ 44, ಗ್ರೀನ್ 18, ಸೀನ್ ಅಬೋಟ್ 22, ಜಾನ್ಸೆನ್ 39ಕ್ಕೆ5, ಕೇಶವ್ ಮಹಾರಾಜ್ 33ಕ್ಕೆ4).

    https://x.com/ICCAsiaCricket/status/1703430431088275921?s=20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts