More

    ಸಿರಿಗಂಧ ಕಲಾ ಸಂಸ್ಥೆಗೆ ಜನಪದ ಸಿರಿ ಪ್ರಶಸ್ತಿ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ನಗರದ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ರಂಗ ಸಾಮ್ರಾಟ ಸಾಂಸತಿಕ, ಶೈಕ್ಷಣಿಕ ಮತ್ತು ಕ್ರೀಡಾ ಸಂಶೋಧನಾ ಸಂಸ್ಥೆ ಇತ್ತೀಚೆಗೆ ಏರ್ಪಡಿಸಿದ್ದ ಜನಪದ ಉತ್ಸವದಲ್ಲಿ ಸಿರಿಗಂಧ ಕಲಾ ಸಂಸ್ಥೆಗೆ ಜನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ನೃತ್ಯ ನಿರ್ದೇಶಕ ಎ.ಎಂ. ಸೈಯ್ಯದ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜನಪದ ಜನರ ಬಾಯಿಂದ ಬಾಯಿಗೆ ಹರಿದು ಬಂದಿದ್ದು. ಅದರ ನಾಶ ಅಷ್ಟೊಂದು ಸುಲಭವಲ್ಲ. ನಮ್ಮ ಸಮೂಹ ಜವಾಬ್ದಾರಿ ವಹಿಸಿ ಜನಪದ ಉಳಿವಿಗೆ ಶ್ರಮಿಸಬೇಕಿದೆ. ಆಧುನಿಕ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿರುವ ಜಾನಪದ ಸಾಹಿತ್ಯ, ಸಂಸತಿ ಎಲ್ಲ ನೆಲೆಗಳಲ್ಲೂ ವ್ಯಾಪಿಸುವಂತೆ ಮಾಡುವ ಅಗತ್ಯವಿದೆ ಎಂದರು.
    ಪ್ರಶಸ್ತಿ ಸ್ವೀಕರಿಸಿದ ಸಿರಿಗಂಧ ಸಂಸ್ಥೆ ಅಧ್ಯಕ್ಷ ಪ್ರಕಾಶ ಕಂಬಳಿ ಮಾತನಾಡಿ, ನಮ್ಮ ಸಂಸತಿ ಬಿಂಬಿಸುವ ಜನಪದ ಕಲಾ ಸಂಪತ್ತನ್ನು ಉಳಿಸಿ ಬೆಳೆಸುವ ಕಾರ್ಯ ಸಂಘ ಸಂಸ್ಥೆಗಳಿಂದ ಆಗಬೇಕು. ಈ ನಿಟ್ಟಿನಲ್ಲಿ ರಂಗ ಸಾಮ್ರಾಟ ಸಂಸ್ಥೆ ಜನಪದ ಕಲಾವಿದರನ್ನು ಸನ್ಮಾನಿಸುತ್ತಿರುವುದು ಜಾನಪದ ಕಲೆಯ ಉಳಿವಿಗೆ ಶ್ರಮಿಸುತ್ತಿರುವ ನಮ್ಮಂತಹ ಅನೇಕ ಕಲಾವಿದರಿಗೆ ಸ್ಫೂತಿರ್ ನೀಡಿದಂತಾಗಿದೆ ಎಂದರು.
    ನಂತರ ವಿವಿಧ ಜನಪದ ಕಲಾತಂಡಗಳಿಂದ ಏರ್ಪಡಿಸಿದ್ದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕ್ವೀನ್​ ಬೀಸ್​ ತಂಡ ಪ್ರಥಮ, ರಾಕ್​ ಸ್ಟಾರ್​ ವುಮೆನ್ಸ್​ ತಂಡ ದ್ವೀತಿಯ ಹಾಗೂ ಸಿಂಗಾರ ಸಖಿ ಬಳಗ ತೃತೀಯ ಬಹುಮಾನ ಪಡೆದರು. ಗದಗ ಕವಿರತ್ನ ಕಾಳಿದಾಸ ಕಲಾತಂಡ ಹಾಗೂ ಹಾರೋಬೆಳವಡಿ ನಿರಂಜನ ತಂಡ ವಿಶೇಷ ಬಹುಮಾನ ಪಡೆದವು.
    ಡಾ.ಬಾಳಪ್ಪ ಚಿನಗುಡಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಪ್ರಕಾಶ ಕಂಬಳಿ, ಕಾರ್ಯದಶಿರ್ ಜಯಲಕ್ಷಿ$್ಮ ಎಚ್​., ಎಫ್​.ಬಿ. ಕಣವಿ, ಪ್ರಮೀಳಾ ಜಕ್ಕಣ್ಣವರ, ಅಲ್ಲಾಭಕ್ಷ ಮಕಾಂದಾರ, ಮಲ್ಲನಗೌಡ ಪಾಟೀಲ, ಚಿದಾನಂದ ಭಜಂತ್ರಿ, ಇತರರು ಇದ್ದರು.
    ಸಿಕಂದರ ದಂಡಿನ ಸ್ವಾಗತಿಸಿದರು. ಶೃತಿ ಹುರುಳಿಕೊಪ್ಪ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts