More

    50 ಮನೆಗಳಿಗೆ ಭಾಗಶಃ ಹಾನಿ

    ಜಮಖಂಡಿ: ತಾಲೂಕಿನಾದ್ಯಂತ ಕಳೆದ ಮೂರ‌್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬುಧವಾರ ಒಂದೇ ದಿನ ತಾಲೂಕಿನಲ್ಲಿ 5 ಮನೆಗಳು ಸಂಪೂರ್ಣ ಕುಸಿದಿದ್ದು, 50 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

    ಜಮಖಂಡಿ ನಗರದಲ್ಲಿ ಆರು, ತಾಲೂಕಿನ ಹುನ್ನೂರ ಗ್ರಾಮದಲ್ಲಿ 2, ಕಡಪಟ್ಟಿಯಲ್ಲಿ 5, ಸಿದ್ದಾಪುರದಲ್ಲಿ 3, ಮೈಗೂರಲ್ಲಿ 2, ಮರೆಗುದ್ದಿಯಲ್ಲಿ 2, ಕುಂಬಾರಹಳ್ಳದಲ್ಲಿ 1, ಮದರಖಂಡಿಯಲ್ಲಿ 3, ಹುಲ್ಯಾಳದಲ್ಲಿ 5, ಹುಣಶಿಕಟ್ಟಿಯಲ್ಲಿ 2, ಸಾವಳಗಿಯಲ್ಲಿ 1, ಟಕ್ಕಳಕಿಯಲ್ಲಿ 1, ಖಾಜಿಬೀಳಗಿಯಲ್ಲಿ 2, ಹಿರೇಪಡಸಲಗಿಯಲ್ಲಿ 2, ತೊದಲಬಾಗಿಯಲ್ಲಿ 2, ಅಡಿಹುಡಿಯಲ್ಲಿ 3, ಕನ್ನೊಳ್ಳಿಯಲ್ಲಿ 1, ಗದ್ಯಾಳದಲ್ಲಿ 2, ಕಲಬೀಳಗಿಯಲ್ಲಿ 5, ಗೋಠೆಯಲ್ಲಿ 1, ತುಂಗಳದಲ್ಲಿ 3, ಜಂಬಗಿ ಕೆಡಿ ಗ್ರಾಮದಲ್ಲಿ 1 ಮನೆ ಸೇರಿ ಒಟ್ಟು 55 ಮನೆಗಳು ಹಾನಿಗೊಳಗಾಗಿವೆ.

    ತಾಲೂಕಿನ ಸಾವಳಗಿ ಗ್ರಾಮದ ಸಿದ್ದು ಗವಳಿ ಎಂಬುವರ ಕೊಟ್ಟಿಗೆ ಬಿದ್ದು, ಆಕಳೊಂದು ಮೃತಪಟ್ಟಿದೆ. ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಕಬ್ಬು ಸೇರಿ ವಿವಿಧ ಬೆಳೆಗಳ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ.

    ಇನ್ನು ಎರಡು ದಿನ ಭಾರಿ ಮಳೆಯಾಗಲಿದ್ದು, ನದಿ ತೀರದ ರೈತರು, ಸಾರ್ವಜನಿಕರು ಹಾಗೂ ಮಣ್ಣಿನ ಮತ್ತು ಶಿಥಿಲಾವಸ್ಥೆ ಮನೆಗಳಲ್ಲಿ ವಾಸಿಸುತ್ತಿರುವವರು ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳಲು ಪ್ರತಿ ಗ್ರಾಮಗಳಲ್ಲಿ ಡಂಗುರ ಸಾರಲಾಗಿದೆ. ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಪಿಡಿಒಗಳು ಕೇಂದ್ರ ಸ್ಥಾನದಲ್ಲಿದ್ದು, ಹೆಚ್ಚು ನಿಗಾವಹಿಸಲು ಆದೇಶಿಸಲಾಗಿದೆ.
    – ಸಂಜಯ ಇಂಗಳೆ, ತಹಸೀಲ್ದಾರ್, ಜಮಖಂಡಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts