More

    ಗೊಂದಳಿ ಸಮಾಜಕ್ಕೆ ಎಸ್‌ಟಿ ಮೀಸಲು ದೊರೆಯಲಿ

    ಜಮಖಂಡಿ: ಸ್ವಾಭಿಮಾನಿ ಗೊಂದಳಿ ಸಮಾಜಕ್ಕೆ ನ್ಯಾಯ ಸಮ್ಮತವಾಗಿ ಸರ್ಕಾರದ ಎಲ್ಲ ಸೌಲಭ್ಯ ದೊರೆಯುವ ಜತೆಗೆ ಎಸ್‌ಟಿ ಮೀಸಲಿಗೆ ಸೇರಿಸುವುದು ಅವಶ್ಯ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.

    ನಗರದ ಬಸವಭವನದಲ್ಲಿ ಭಾನುವಾರ ನಡೆದ ಗೊಂದಳಿ ಸಮಾಜ ಸಮಾವೇಶದಲ್ಲಿ ಮಾತನಾಡಿ, ಗೊಂದಳಿ ಸಮಾಜಕ್ಕೆ ನಿಗಮ ಸ್ಥಾಪಿಸಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಒತ್ತಾಯಿಸಲಾಗುವುದು. ಈ ಸಮಾಜ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಹಿಂದುಳಿದಿದೆ. ದೇವರಾಜು ಅರಸು ನಿಗಮದಲ್ಲಿ ಹಲವಾರು ಯೋಜನೆಗಳಿದ್ದು, ಸದುಪಯೋಗ ಮಾಡಿಕೊಳ್ಳಬೇಕು ಎಂದರು.

    ಹೊಸಪೇಟೆ ಬಾಲಕಿಯರ ಪಪೂ ಕಾಲೇಜು ಉಪನ್ಯಾಸಕ ಡಾ.ದಯಾನಂದ ಕಿನ್ನಾಳ ಮಾತನಾಡಿ, ಗೊಂದಳಿ ಸಮಾಜ ಕೇವಲ ಗೊಂದಳಿ ಹಾಡುವುದು ಅಷ್ಟೆ ಅಲ್ಲದೆ ಎಲ್ಲ ಕ್ಷೇತ್ರಗಳಲ್ಲಿ ತನ್ನದೇಯಾದ ವಿಶಿಷ್ಠ ಸ್ಥಾನಮಾನ ಹೊಂದಿದೆ. ವೇದ ಪುರಾಣ, ವಾರಕರಿ ಸಂಪ್ರದಾಯದಲ್ಲಿ ಈ ಸಮಾಜ ಗುರುತಿಸಿಕೊಂಡಿದೆ. ಬೇಹುಗಾರಿಕೆ, ಗುಡಚಾರಿಕೆ ಹಾಗೂ ಶ್ರದ್ದೆ, ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದೆ ಎಂದರು. ಪ್ರೊ.ಮಾರುತಿ ಜೋಶಿ ಮಾತನಾಡಿ, ರಾಜ್ಯದಲ್ಲಿ 8 ಲಕ್ಷ ಗೊಂದಳಿ ಜನಾಂಗವಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಮಾಜವನ್ನು ಎಸ್.ಟಿ. ಮೀಸಲಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

    ನ್ಯಾಯವಾದಿ ರವಿ ಕೊಂಡೆ, ಸಂಜಯ ಕದಮ, ದೇವರಾಜು ಅರಸು ನಿಗಮದ ಅಧಿಕಾರಿ ಎಂ.ಜಿ. ಬಿರಾದಾರ ಮಾತನಾಡಿದರು. ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದ ಸಾಧಕರನ್ನು ಸನ್ಮಾನಿಸಲಾಯಿತು. ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪಂಡರಪುರದ ಕೃಷ್ಣ ಮಹಾರಾಜರು, ಮನು ಮಹಾರಾಜರು, ಉದ್ಯಮಿ ಜಗದೀಶ ಗುಡಗುಂಟಿಮಠ, ಡಾ.ಉಮೇಶ ಮಹಾಬಳಶೆಟ್ಟಿ, ನಜೀರ ಕಂಗನ್ನೋಳ್ಳಿ, ಬಸವರಾಜ ನ್ಯಾಮಗೌಡ, ರಾಜು ಪಿಸಾಳ, ಕಾಡು ಮಾಳಿ, ತಾಪಂ ಅಧ್ಯಕ್ಷೆ ಸವಿತಾ ಕಲ್ಯಾಣಿ, ಅಜಯ ಕಡಪಟ್ಟಿ ಇತರರು ಇದ್ದರು.ಪ್ರೊ. ನಿವಾಸ ಕಟ್ಟಿಮನಿ ನಿರೂಪಿಸಿದರು. ರಾಮಕೃಷ್ಣ ಇಂಗಳೆ ವಂದಿಸಿದರು.

    ಭಾವಚಿತ್ರ ಮೆರವಣಿಗೆ
    ಮಹಿಳೆಯರ ಕುಂಭ ಹಾಗೂ ವಾದ್ಯಮೇಳದೊಂದಿಗೆ ಅಂಬಾಭವಾನಿ ಭಾವಚಿತ್ರದ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಮುಸ್ಲಿಂ ಸಮಾಜದ ನೂರಾನಿ ಯಂಗ್ ಕಮಿಟಿ ಸದಸ್ಯರು, ಯುವಕರು ಕುಡಿವ ನೀರಿನ ಬಾಟಲ್ ನೀಡಿ ಸೌಹಾರ್ದತೆ ಮೆರೆದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts