More

    ಟ್ರಾಲಿಯಲ್ಲಿದ್ದ ಕಬ್ಬಿಗೆ ಆಕಸ್ಮಿಕ ಬೆಂಕಿ

    ಜಮಖಂಡಿ: ಟ್ರಾೃಕ್ಟರ್ ಟ್ರಾಲಿಯಲ್ಲಿದ್ದ ಕಬ್ಬಿಗೆ ಗುರುವಾರ ಸಂಜೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿ ಉರಿದ ಪರಿಣಾಮ ಕೆಲ ಕಾಲ ಸೃಷ್ಟಿಯಾಗಿದ್ದ ಆತಂಕದ ವಾತಾವರಣ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದಂತಾಗಿದೆ.

    ನಗರದ ವಿಜಯಪುರ- ಧಾರವಾಡ ರಾಜ್ಯ ಹೆದ್ದಾರಿಯ ಬಸವೇಶ್ವರ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ರೈತ ಚಿದಾನಂದ ಬಿರಾದಾರ ಅವರ ಕಬ್ಬು ಸುಟ್ಟಿದ್ದು,ಅಪಾರ ನಷ್ಟವಾಗಿದೆ.

    ಟ್ರಾೃಕ್ಟರ್‌ನ ಡಬಲ್ ಟ್ರಾಲಿಯಲ್ಲಿ ಸಿದ್ದಾಪುರ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಲಾಗುತ್ತಿತ್ತು. ಬಸವೇಶ್ವರ ಸರ್ಕಲ್ ಬಳಿ ಕಬ್ಬಿನಲ್ಲಿದ್ದ ರವದಿಗೆ ಆಕಸ್ಮಿಕ ವಿದ್ಯುತ್ ತಂತಿ ತಗುಲಿದೆ. ಸರ್ಕಲ್‌ನಲ್ಲಿದ್ದ ಜನ ಬೆಂಕಿ ಹೊತ್ತಿಕೊಂಡಿದ್ದನ್ನು ತಕ್ಷಣವೇ ಚಾಲಕನ ಗಮನಕ್ಕೆ ತಂದಿದ್ದಾರೆ. ಚಾಲಕ ಸುರೇಶ ತುಂಗಳ ಸಮಯ ಪ್ರಜ್ಞೆ ಮೆರೆದು ಟ್ರಾೃಕ್ಟರ್‌ನ್ನು ಚಲಾಯಿಸಿಕೊಂಡು ವಾಟರ್ ಸರ್ವಿಸ್ ಇರುವ ಸೆಂಟರ್‌ವೊಂದಕ್ಕೆ ತೆರಳಿದ್ದಾನೆ. ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದರು. ಚಾಲಕನ ಧೈರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

    ವಿಡಿಯೋ ವೈರಲ್: ಟ್ರಾೃಕ್ಟರ್ ಟ್ರಾಲಿಯಲ್ಲಿದ್ದ ಕಬ್ಬಿಗೆ ಬೆಂಕಿ ಹತ್ತಿದ್ದ ದೃಶ್ಯವನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಸಿನಿಮೀಯ ರೀತಿಯಲ್ಲಿದ್ದ ಈ ದೃಶ್ಯವನ್ನು ನೋಡಿ ಸಾರ್ವಜನಿಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದರಿಂದ ಅನಾಹುತ ತಪ್ಪಿದಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts