More

    ಜಾಲಹಳ್ಳಿ ಗ್ರಾಮ ಪಂಚಾಯಿತಿಗೆ ಪಿಡಿಒ, ಕಾರ್ಯದರ್ಶಿ ನಿಯೋಜನೆ

    ದೇವದುರ್ಗ: ಗೊಂದಲದ ಗೂಡಾಗಿದ್ದ ಜಾಲಹಳ್ಳಿ ಗ್ರಾಪಂಗೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನಿಂಗಪ್ಪ ಪೂಜಾರಿಯನ್ನು ಅಭಿವೃದ್ಧಿ ಅಧಿಕಾರಿಯಾಗಿ, ಅಶೋಕ ಮುಂಡರಗಿಯನ್ನು ಕಾರ್ಯದರ್ಶಿಯಾಗಿ ಕ್ರಮವಾಗಿ ನಿಯೋಜಿಸಿ ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಹಾಗೂ ತಾಪಂ ಇಒ ಪಂಪಾಪತಿ ಹಿರೇಮಠ ಆದೇಶ ಹೊರಡಿಸಿದ್ದಾರೆ.

    ಚುನಾವಣೆ ಹಿನ್ನೆಲೆಯಲ್ಲಿ ಆದೇಶ ಹೊರಡಿಸಿದ್ದರಿಂದ ಈ ಇಬ್ಬರು ಅಧಿಕಾರಿಗಳು ಮಂಗಳವಾರ ಸಂಜೆ ಗ್ರಾಪಂಗೆ ಭೇಟಿ ನೀಡಿ ಹಾಜರಿ ಮಾಡಿಕೊಂಡರು. ಆರು ತಿಂಗಳಿನಿಂದ ಪಪಂ ಮುಖ್ಯಾಧಿಕಾರಿಯಾಗಿದ್ದ ಸಾಬಣ್ಣ ಕಟ್ಟಿಕಾರ್ ಅವರನ್ನು ವಾಪಸ್ ಕರೆಸಿಕೊಳ್ಳಲಾಗಿದೆ.

    ಜಾಲಹಳ್ಳಿ ಗ್ರಾಪಂ 8-10 ತಿಂಗಳಿನಿಂದ ಪಪಂಯಾಗಿ ಜಾರಿಯಲ್ಲಿತ್ತು. ಸಾಬಣ್ಣ ಕಾಟ್ಟಕಾರರನ್ನು ಪಪಂ ಮುಖ್ಯಾಧಿಕಾರಿಯಾಗಿ ನೇಮಕ ಮಾಡಿದ್ದು, ಇವರು ಹಲವು ತಿಂಗಳಿನಿಂದ ಕೆಲಸ ನಿರ್ವಹಿಸುತ್ತಿದ್ದರು. ಗ್ರಾಪಂ ಮುಂದುವರಿಸಿ ಚುನಾವಣೆ ನಡೆಸುವಂತೆ ಗುಲ್ಬರ್ಗಾ ವಿಭಾಗೀಯ ಪೀಠ ತೀರ್ಪು ನೀಡಿದ್ದರಿಂದ ಇತ್ತೀಚೆಗೆ ಆಯೋಗ ಚುನಾವಣೆ ಘೋಷಣೆ ಮಾಡಿತ್ತು.

    ಈ ಹಿನ್ನೆಲೆಯಲ್ಲಿ ಪಿಡಿಒ ಹಾಗೂ ಕಾರ್ಯದರ್ಶಿಯನ್ನು ನಿಯೋಜನೆ ಮಾಡಿ ತಾಪಂ ಇಒ ಆದೇಶಿಸಿದ್ದಾರೆ. ಇದರಿಂದ ಕೂಲಿಕಾರರಲ್ಲಿ ಹರ್ಷ ಮೂಡಿದ್ದು, ನರೇಗಾ ಯೋಜನೆ ಜಾರಿಗೊಳಿಸುವ ಆಶಾಭಾವ ಮೂಡಿದೆ. ಇನ್ನೊಂದೆಡೆ ಗ್ರಾಪಂ ಚುನಾವಣೆಯಲ್ಲಿ ಮೂರೂ ಪಕ್ಷಗಳು ಗಂಭೀರವಾಗಿ ಪರಿಗಣಿಸಿವೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖಂಡರು ಸಭೆ ನಡೆಸಿ, ಮೂರು ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅಭ್ಯರ್ಥಿಗಳನ್ನು ತಯಾರಿಮಾಡಿಕೊಳ್ಳುತ್ತಿದ್ದಾರೆ.

    ನಾಲ್ಕು ನಾಮಪತ್ರಗಳು ಸಲ್ಲಿಕೆ
    ಮೂರು ಗ್ರಾಪಂ ಸಾರ್ವತ್ರಿಕ ಚುನಾವಣೆ ಹಾಗೂ ಎರಡು ಗ್ರಾಪಂ ಸದಸ್ಯ ಸ್ಥಾನದ ಉಪಚುನಾವಣೆಗೆ ಮೂರನೇ ದಿನ ಬುಧವಾರ ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿವೆ. ಚಿಂಚೋಡಿ ಗ್ರಾಪಂ, ಗೆಜ್ಜಬಾವಿ, ನಗರಗುಂಡ ಸದಸ್ಯ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಜಾಲಹಳ್ಳಿ ಗ್ರಾಪಂನ 8ನೇ ವಾರ್ಡ್‌ಗೆ ಗುರುನಾಯಕ ಬಸವರಾಜ ಉಮೇದುವಾರಿಕೆ ಸಲ್ಲಿಸಿದರು. ಕರಡಿಗುಡ್ಡ ಗ್ರಾಪಂ ನೀಲವಂಜಿ ಸಾಮಾನ್ಯ ಸದಸ್ಯ ಸ್ಥಾನಕ್ಕೆ ತಾಯಮ್ಮ, ಪವಿತ್ರ ನರಸಣ್ಣ ನಾಮಪತ್ರ ಸಲ್ಲಿಸಿದರು. ಎಸ್ಟಿ ಮೀಸಲು ಸ್ಥಾನಕ್ಕೆ ನಾಗಮ್ಮ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts