More

    ಬಿಜೆಪಿ ವರಿಷ್ಠರು ರಾಜ್ಯಸಭೆ ಸದಸ್ಯನಾಗಿ ಮಾಡುತ್ತೇವೆ ಎಂದಿದ್ದರು…ನನಗೆ ಮೂಲೆಗುಂಪಾಗಲು ಇಷ್ಟವಿಲ್ಲ; ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ವಿಧನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್​ ನೀಡಲು ನಿರಾಕರಿಸಿದ ಬಿಜೆಪಿ ವರಿಷ್ಠರು, ರಾಜ್ಯಸಭೆ ಸದಸ್ಯನಾಗಿ ಮಾಡುವ ಆಫರ್ ನೀಡಿದ್ದರು. ಆದರೆ, ನನಗೆ ಮೂಲೆಗುಂಪಾಗುವ ಆಶಯ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದು ಶಿರಸಿಗೆ ತೆರಳಿ, ಸ್ಪೀಕರ್ ಕಾಗೇರಿ ಅವರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಸಂಜೆ ಬೆಂಗಳೂರಿಗೆ ತೆರಳಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ನಮ್ಮ ಬೀಗರು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಹೆಲಿಕ್ಯಾಪ್ಟರ್ ಕಳುಹಿಸಿದ್ದಾರೆ. ಕಾಂಗ್ರೆಸ್ ಮುಖಂಡರು ವಿಶೇಷ ವಿಮಾನ‌ ಕಳುಹಿಸಿದ ಬಗ್ಗೆ ಮಾಹಿತಿ ಇಲ್ಲ ಎಂದರು.

    ಇದನ್ನೂ ಓದಿ: ಜಗದೀಶ್ ಶೆಟ್ಟರ್ ರಾಜೀನಾಮೆ ನಿರ್ಧಾರದಿಂದ ಕಸಿವಿಸಿಯಾಗಿದೆ; ಡ್ಯಾಮೇಜ್ ಕಂಟ್ರೋಲ್​ಗೆ ಬೇಕಾದ ತಂತ್ರ ರೂಪಿಸಲಾಗುತ್ತಿದೆ! ಸಿಎಂ ಬೊಮ್ಮಾಯಿ

    ನನಗೆ ಸಿಕ್ಕಿರುವ ಅಧಿಕಾರ ಅಲ್ಪ ಅವಧಿಯದ್ದು!

    ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದಲ್ಲಿ ಅಪಮಾನ ಎದುರಾದಾಗ ಬಿಜೆಪಿಯಿಂದ ಹೊರಬಂದು ಕೆಜೆಪಿ ಕಟ್ಟಿದ್ದರು. ಪಕ್ಷ ಒಡೆದಿದ್ದ ಯಡಿಯೂರಪ್ಪ ಅವರಿಗೆ ನನಗೆ ಆಗಿರುವ ಅಪಮಾನದ ಅರಿವು ಇದೆ ಎಂದು ಭಾವಿಸುತ್ತೇನೆ. ಬಿಜೆಪಿ ನನಗೆ ಹಲವಾರು ರೀತಿಯ ಸ್ಥಾನಮಾನ ಕೊಟ್ಟಿದೆ. ನಾನು ಆ ಪಕ್ಷಕ್ಕೆ ಚಿರಋಣಿ. ನಾನು ಸಹ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೆ. ನನಗೆ ಸಿಕ್ಕಿರುವ ಎಲ್ಲ ರೀತಿಯ ಅಧಿಕಾರ ಅಲ್ಪ ಅವಧಿಯದ್ದು ಎಂದು ಜಗದೀಶ್ ಶೆಟ್ಟರ್ ಹೇಳಿದರು.

    ಬೆಂಗಳೂರಿಗೆ ತೆರಳಿ ತೀರ್ಮಾನ!

    ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಬೆಂಗಳೂರಿಗೆ ತೆರಳಿದ ಬಳಿಕ ತೀರ್ಮಾನ ಮಾಡುತ್ತೇನೆ. ಸದ್ಯದ ನನ್ನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ಭೇಟಿಯಾಗಲು ಬಂದಿರುವುದು ಸಹಜ. ಜಗದೀಶ್ ಶೆಟ್ಟರ್ ಬಂದರೂ ಬರಲಿ ಎಂದು ಕಾಂಗ್ರೆಸ್ ನಾಯಕರು ಬಂದಿದ್ದಾರೆ ಎಂದರು.

    ಇದನ್ನೂ ಓದಿ: 3 ದಿನ ಕಾದರೂ ಟಿಕೆಟ್ ಸಿಕ್ಕಿಲ್ಲ! ಧೋನಿಯನ್ನು ನೋಡಲೇಬೇಕೆಂದು ಕಣ್ಣೀರು ಹಾಕಿದ ಅಭಿಮಾನಿ…

    ಅಮಿತ್ ಶಾ ಕರೆ ಮಾಡಿಲ್ಲ…

    ರಾಜೀನಾಮೆ ನೀಡಲು ಸ್ಪೀಕರ್ ಬಳಿ ಹೋದಾಗ ಅಮಿತ್ ಶಾ ನನಗೆ ಕರೆ ಮಾಡಿಲ್ಲ. ಕಾಗೇರಿ ಮತ್ತು ನಮ್ಮದು ಹಳೇ ಸ್ನೇಹ, ಈ ಕಾರಣದಿಂದ ಮನವೋಲಿಸಲು ಪ್ರಯತ್ನ ಪಟ್ಟರು ಎಂದು ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿರು.

    ಇದನ್ನೂ ಓದಿ: ಪೊಲೀಸರಿಗೆ ಗುಡ್​ ನ್ಯೂಸ್; ಚುನಾವಣೆ ಕರ್ತವ್ಯ ಭತ್ಯೆ ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts