More

    ಜಾಗೃತಿ ಜಾಥಾ ಯಶಸ್ಸಿಗೆ ಗ್ರಾಪಂ ಪಿಡಿಒಗಳು ಶ್ರಮಿಸಲಿ

    ಸಂಡೂರು: ತಾಲೂಕಿನ 26 ಗ್ರಾಪಂಗಳಲ್ಲಿ ಫೆ.17 ರಿಂದ 23ರವರೆಗೆ ಸಂವಿಧಾನ ಜಾಗೃತಿ ಜಾಥಾ ಸಂಚರಿಸಲಿದ್ದು, ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಾಪಂ ಇಒ ಎಚ್.ಷಡಾಕ್ಷರಯ್ಯ ಹೇಳಿದರು.

    ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಫೆ.17ರಂದು ತೋರಣಗಲ್, ಕುರೇಕುಪ್ಪ, ವಡ್ಡು, ತಾಳೂರು, ಪೆ.18ಕ್ಕೆ ಬನ್ನಿಹಟ್ಟಿ, ಯು.ರಾಜಾಪುರ, ಅಂತಾಪುರ, ವಿಠಲಾಪುರ, ಮೆಟ್ರಿಕಿ.

    ಇದನ್ನೂ ಓದಿ: ಜೀತ ಪದ್ಧತಿ ಬಗ್ಗೆ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಿ

    ಫೆ.19ಕ್ಕೆ ತಾರಾನಗರ, ಭುಜಂಗನಗರ, ನರಸಿಂಗಾಪುರ, ದೇವಗಿರಿ, ಕೃಷ್ಣಾನಗರ, ಫೆ.20ರಂದು ಸಂಡೂರು ಪಟ್ಟಣಕ್ಕೆ ಆಗಮಿಸಲಿದೆ. ಫೆ.21ರಂದು ಸುಶೀಲಾನಗರ, ಯಶವಂತನಗರ, ಬಂಡ್ರಿ, ನಿಡಗುರ್ತಿ.

    ಫೆ.22ಕ್ಕೆ ಎಚ್.ಕೆ.ಹಳ್ಳಿ, ಕಾಳಿಂಗೇರಿ, ಅಗ್ರಹಾರ, ಸೋವೇನಹಳ್ಳಿ, ಫೆ.23ಕ್ಕೆ ಚೋರನೂರು, ಬೊಮ್ಮಘಟ್ಟ, ಯರ‌್ರಯ್ಯನಹಳ್ಳಿ, ಗೊಲ್ಲಲಿಂಗಮ್ಮನಹಳ್ಳಿ ಗ್ರಾಪಂಗೆ ಬರಲಿದ್ದು, ಜಾಥಾ ಯಶಸ್ಸಿಗೆ ಪಿಡಿಒಗಳು ಶ್ರಮಿಸಬೇಕು ಎಂದು ತಿಳಿಸಿದರು.

    ಜಿಪಂ ಉಪ ಕಾರ್ಯದರ್ಶಿ ಗಿರಿಜಾ ಶಂಕರ್ ಮಾತನಾಡಿದರು. ಬಿಇಒ ಡಾ.ಐ.ಆರ್.ಅಕ್ಕಿ, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ್, ಎಸ್ಟಿ ಕಲ್ಯಾಣಾಧಿಕಾರಿ ಕೆ.ರವಿಕುಮಾರ್, ಸಿಡಿಪಿಒ ಎಳೆನಾಗಪ್ಪ, ಬಿಸಿಎಂನ ಸಂಗಮೇಶ್, ತಾಪಂ ಎಡಿಗಳಾದ ದುರುಗಪ್ಪ, ರೇಣುಕಾಚಾರ್ಯ ಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts