More

    ಹೈಟೆಕ್ ರಂಗಮಂದಿರ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

    ಜಗಳೂರು: ರಂಗಮಂದಿರ ನಿರ್ಮಿಸಲು ಉದ್ದೇಶಿಸಿರುವ ಪಟ್ಟಣದ ಬಾಲಕರ ಸರ್ಕಾರಿ ಶಾಲಾ ಆವರಣಕ್ಕೆ ಶನಿವಾರ ಶಾಸಕ ಎಸ್.ವಿ ರಾಮಚಂದ್ರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆ, ಸಮಾರಂಭ ನಡೆಸಲು ಪಟ್ಟಣದಲ್ಲಿ ಎಲ್ಲೂ ವಿಶಾಲ ಜಾಗವಿಲ್ಲ. ಹೀಗಾಗಿ ಹಳೇ ಶಾಲೆಯನ್ನು ತೆರವುಗೊಳಿಸಿ ವಿವಿಧ ಅನುದಾನದ ಕ್ರೂಢೀಕರಿಸಿಕೊಂಡು ಹೈಟೆಕ್ ರಂಗಮಂದಿರ, ಸುತ್ತಲು ಪಾರ್ಕ್ ನಿರ್ಮಿಸಲಾಗುವುದು ಎಂದು ತಿಳಿಸಿದರು.

    ಈ ಹಿಂದೆ ಹೊಸ ಮಹಾತ್ಮಾಗಾಂಧಿ ಬಸ್ ನಿಲ್ದಾಣ, ಈಗ ಮಿನಿ ಬಸ್ ನಿಲ್ದಾಣ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಪಟ್ಟಣ ಪಂಚಾಯಿತಿ ಅನುದಾನ ಬಳಸಿ ಪ್ರತಿ ವಾರ್ಡ್‌ಗಳಲ್ಲೂ ಸಿಸಿ ರಸ್ತೆ, ಅಗತ್ಯವಿದ್ದೆಡೆ ಬಾಕ್ಸ್ ಚರಂಡಿ ನಿರ್ಮಿಸಲಾಗಿದೆ. 4 ಕೋಟಿ ರೂ. ವೆಚ್ಚದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ವೈಭವ ಹೋಟೆಲ್ ವರೆಗೆ, ಪ್ರವಾಸಿ ಮಂದಿರದಿಂದ ಹೊಸ ಬಸ್ ನಿಲ್ದಾಣ, ಮಹಾತ್ಮಾಗಾಂಧಿ ವೃತ್ತದಿಂದ ಮರೇನಹಳ್ಳಿ ರಸ್ತೆ ಹರ್ಷಿತಾ ಕಾಲೇಜು ವರೆಗಿನ ದ್ವಿಮುಖ ರಸ್ತೆ ಹಾಗೂ ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿಗೆ ನಡೆಯುತ್ತಿದ್ದು, ಇದರ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಗಮನ ಹರಿಸಬೇಕು ಎಂದರು.

    ಕರೊನಾ ಕಾರಣಕ್ಕೆ ಕಳೆದ ಮೂರು ತಿಂಗಳಿಂದ ಎಲ್ಲ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಶೀಘ್ರವೇ ಎಲ್ಲವೂ ಪುನಾರಂಭಗೊಳ್ಳಲಿವೆ. ವೈರಾಣು ಬಗ್ಗೆ ಎಚ್ಚರದಿಂದ ಇದ್ದು ಆರೋಗ್ಯ ರಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದರು.
    ನಿರ್ಮಿತಿ ಕೇಂದ್ರದ ಎಇಇ ರಾಜಶೇಖರ್, ಇಂಜಿನಿಯರ್ ಚಂದ್ರಶೇಖರ್, ಮುಖಂಡರಾದ ಚಟ್ನಳ್ಳಿ ರಾಜಪ್ಪ, ಇಂದ್ರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts