More

    ಕಡಲೆ ಬಿತ್ತನೆ ಬೀಜಕ್ಕೆ ಹೆಚ್ಚಿದ ಬೇಡಿಕೆ

    ಜಗಳೂರು: ದೇಶಕ್ಕೆ ಅನ್ನ ನೀಡುವ ರೈತರ ಶ್ರೇಯೋಭಿವೃದ್ಧಿಗೆ ಸರ್ಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಹಸೀಲ್ದಾರ್ ಡಾ. ನಾಗವೇಣಿ ತಿಳಿಸಿದರು.

    ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಬುಧವಾರ ಕೃಷಿ ಇಲಾಖೆಯಿಂದ ಕಡಲೆ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಕಡಲೆ ಬಿತ್ತನೆಗೆ ಇದು ಸಕಾಲವಾಗಿದೆ. ತಾಲೂಕಿನಲ್ಲಿ ಎಷ್ಟೇ ರೈತರು ಬಿತ್ತನೆ ಮಾಡಿದರೂ ಅವರಿಗೆ ಕಡಲೆ ಬೀಜ ವಿತರಿಸಲಾಗುವುದು. ಬಿತ್ತನೆ ಬೀಜ ಪಡೆಯಲು ಬರುವವರಿಗೆ ಕರೊನಾ ಪರೀಕ್ಷೆಯ ವರದಿ ನೆಗೆಟಿವ್ ಬಂದಿರಬೇಕು. ಮಾಸ್ಕ್ ಧರಿಸುವ ಜತೆಗೆ ದೈಹಿಕ ಅಂತರ ಪಾಲಿಸಿದರಷ್ಟೆ ಬೀಜ ವಿತರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಕೃಷಿ ಸಹಾಯಕ ನಿರ್ದೇಶಕ ಬಿ.ವಿ. ಶ್ರೀನಿವಾಸಲು ಮಾತನಾಡಿ, ರೈತರು ಕೇವಲ ಸರ್ಕಾರದಿಂದ ವಿತರಿಸುವ ಬಿತ್ತನೆ ಬೀಜಗಳಿಗೆ ಸೀಮಿತವಾಗದೆ ತಾವೇ ಬೆಳೆದು ಸಂಗ್ರಹಿಸಿಕೊಂಡಿರುವ ಗುಣಮಟ್ಟದ ಬೀಜಗಳನ್ನು ಬಿತ್ತನೆ ಮಾಡಬಹುದು ಎಂದು ತಿಳಿಸಿದರು.

    ಈ ವರ್ಷ ಅತ್ಯಧಿಕ ಮಳೆಯಾದ್ದರಿಂದ ಕಡಲೆ ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ 1500 ಟನ್ ಬೀಜ ದಾಸ್ತಾನು ಮಾಡಲಾಗಿದೆ. ರೈತರು ಗೊಂದಲ ಮಾಡಿಕೊಳ್ಳದೆ ಶಾಂತಿಯುತವಾಗಿ ಪಡೆಯಬೇಕು ಎಂದು ತಿಳಿಸಿದರು.

    ಬಿತ್ತನೆ ಬೀಜ ಪಡೆಯಲು ಬರುವ ರೈತರು ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು. ಅನಾರೋಗ್ಯದಲ್ಲಿರುವವರ ಪರವಾಗಿ ಬಂದಿದ್ದರೆ ಅವರ ಮೂಲ ಆಧಾರ್ ಕಾರ್ಡ್ ತರಬೇಕು. ಮುಖಕ್ಕೆ ಮಾಸ್ಕ್ ಧರಿಸಿ ದೈಹಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.

    ರ‌್ಯಾಪಿಡ್ ಪರೀಕ್ಷೆ: ಬಿತ್ತನೆ ಬೀಜ ಖರೀದಿಗೆ ಬಂದಿದ್ದ ಎಲ್ಲ ರೈತರಿಗೂ ತಾಲೂಕು ಆಡಳಿತ, ಆರೋಗ್ಯ ಮತ್ತು ಕೃಷಿ ಇಲಾಖೆ ವತಿಯಿಂದ ಕರೊನಾ ರ‌್ಯಾಪಿಡ್ ಪರೀಕ್ಷೆ ನಡೆಸಲಾಯಿತು. ಈ ವೇಳೆ ವರದಿ ನೆಗೆಟಿವ್ ಬಂದವರಿಗೆ ಬಿತ್ತನೆ ಬೀಜ ವಿತರಿಸಲಾಯಿತು. ಕೋವಿಡ್ ಪರೀಕ್ಷೆಗೊಳಗಾದ 110 ಮಂದಿ ರೈತರಲ್ಲಿ 3 ಜನರಿಗೆ ಪಾಸಿಟಿವ್ ದೃಢಪಟ್ಟ ಕಾರಣ ತಕ್ಷಣವೇ ಅವರನ್ನು ಆಸ್ಪತ್ರೆಗೆ ಕಳಿಸಿಕೊಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts