More

    ಕೆರೆಗದ್ದೆಯಲ್ಲ ಇದು ಕೆಸರುಗದ್ದೆ..!

    ಹೊಸನಗರ: ರಸ್ತೆ ಅಭಿವೃದ್ಧಿ ಮಾಡಿ ಎಂದರೆ ಇಡೀ ಕೆರೆಗದ್ದೆಯನ್ನೇ ಕೆಸರುಗದ್ದೆಯನ್ನಾಗಿ ಮಾಡಿದ್ದಾರೆ. ಶಾಲೆ ಮಕ್ಕಳು, ವೃದ್ಧರು ನಡೆದುಕೊಂಡು ಹೋಗಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಽಗಳು ಕಣ್ಮರೆಯಾಗಿದ್ದಾರೆ ನಾವೇನು ಮಾಡಬೇಕು ಸ್ವಾಮಿ?

    ಹೌದು, ತಾಲೂಕಿನ ಬೈಸೆ ಗ್ರಾಮದ ಕೆರೆಗದ್ದೆ ಗ್ರಾಮಸ್ಥರ ಆಕ್ರೋಶದ ನುಡಿ ಇದು. ವಾರದಿಂದ ಸುರಿಯುತ್ತಿರುವ ಮಳೆಗೆ ಬೈಸೆ ಸೇತುವೆಯಿಂದ ಕೆರೆಗದ್ದೆಗೆ ಹೋಗುವ ಅರ್ಧ ಕಿಮೀ ರಸ್ತೆ ಅಕ್ಷರಶಃ ಕೆಸರುಗದ್ದೆಯಾಗಿದೆ. ಅದೇ ಕೆಸರು ಗದ್ದೆಯಲ್ಲಿ ಭಾನುವಾರ ಭತ್ತದ ಸಸಿ ನಾಟಿ ಕಾರ್ಯ ಮಾಡುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
    ಕೆರೆಗದ್ದೆ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ. ಮೀಸಲಿಟ್ಟು ಚುನಾವಣೆಗೆ ಮುನ್ನ ಶಂಕುಸ್ಥಾಪನೆ ಮಾಡಲಾಗಿದೆ. ಅಲ್ಲದೆ ರಸ್ತೆಗೆ ಆರಂಭದಲ್ಲಿ ಮಣ್ಣು ಹಾಕಿ ಕಾಮಗಾರಿ ಆರಂಭಿಸಲಾಗಿತ್ತು. ಚುನಾವಣೆ ಮುಗಿದು ಎರಡು ತಿಂಗಳು ಕಳೆದರೂ ಕಾಮಗಾರಿಯ ಸುಳಿವೇ ಇಲ್ಲ. ಅಲ್ಲದೆ ರಸ್ತೆಗೆ ಗ್ರಾವೆಲ್ ಮಣ್ಣು ಹಾಕಬೇಕಿತ್ತು. ಆದರೆ ಹತ್ತಿರದಲ್ಲೇ ಇದ್ದ ಕೆಂಪುಮಣ್ಣು ಹಾಕಲಾಗಿದೆ. ಇದೀಗ ಮಳೆ ಸುರಿದ ಹೊಡೆತಕ್ಕೆ ಸಂಪೂರ್ಣ ಕೆಸರುಗದ್ದೆಯಾಗಿದೆ. ಕಾಲು ಹುಗಿದುಹೋಗುತ್ತಿದ್ದು ಓಡಾಡುವುದೇ ಕಷ್ಟವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
    ಜನಪ್ರತಿನಿಽಗಳೂ ಇಲ್ಲ. ಗುತ್ತಿಗೆದಾರರ ಸುಳಿವೂ ಇಲ್ಲ.. ನೋಡಿ ನೋಡಿ ಸಾಕಾಗಿ ಗ್ರಾಮಸ್ಥರೇ ಸ್ವಂತ ವೆಚ್ಚದಲ್ಲಿ ಅರ್ಧ ಕಿಮೀ ರಸ್ತೆ ಮೇಲಿನ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ತುರ್ತಾಗಿ ರಸ್ತೆಗೆ ಜೆಲ್ಲಿ ಹಾಕಿ ಗ್ರಾಮಸ್ಥರು ಓಡಾಡಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಗ್ರಾಪಂ ಮುಂದೆ ಸತ್ಯಾಗ್ರಹ ನಡೆಸುತ್ತೇವೆ. ಅದಕ್ಕೂ ಗಮನಹರಿಸದಿದ್ದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮನೆ ಮುಂದೆ ಧರಣಿ ಕೂರುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
    ಗ್ರಾಮದ ಪ್ರಮುಖರಾದ ಶ್ರೀನಿವಾಸ್ ನಾಯಕ್, ಶ್ರೀಧರ್, ಮನೋಜ್, ಚರಣ್, ಮಂಜುನಾಥ ಗೌಡ, ಹರೀಶ್, ಸಂತೋಷ್, ಪ್ರಶಾಂತ್, ಕೌಸಲ್ಯಾ, ಲಲಿತಾ, ಪದ್ಮಜಾ ನಾಯಕ್, ಇಂದ್ರಮ್ಮ, ಸರಸ್ವತಿ, ಗೀತಕ್ಕ, ಭಾಗೀರಥಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts