More

    ತರಕಾರಿ ಮತ್ತು ಹಣ್ಣುಗಳನ್ನು ಸ್ಯಾನಿಟೈಸರ್​ನಲ್ಲಿ ಸ್ವಚ್ಛಗೊಳಿಸಬೇಡಿ

    ನವದೆಹಲಿ: ವಿಶ್ವದಾದ್ಯಂತ ಕರೊನಾ ಸೋಂಕಿನ ಹರಡುವಿಕೆ ಹೆಚ್ಚಾದ ನಂತರದಲ್ಲಿ ಹೊರಗಿನಿಂದ ತರುವ ಯಾವುದೇ ವಸ್ತು, ಹಣ್ಣ, ತರಕಾರಿಗಳನ್ನು ಹೇಗೆ ಸ್ವಚ್ಛಗೊಳಿಸಬೇಕು? ಅವುಗಳಲ್ಲಿ ಕರೊನಾ ವೈರಾಣು ಇದ್ದರೆ ಕತೆ ಏನು ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ. ಈ ಪ್ರಶ್ನೆಗಳಿಗೆ ಚಂಡಿಗಢದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆಯ (ಪಿಜಿಐಎಂಇಆರ್​) ಪ್ರೊಫೆಸರ್​ ಡಾ. ಸೋನು ಗೋಯೆಲ್​ ಸ್ಪಷ್ಟನೆ ನೀಡಿದ್ದಾರೆ.

    ಸಾಮಾನ್ಯವಾಗಿ ಹಣ್ಣು ಮತ್ತು ತರಕಾರಿಗಳ ಮೇಲೆ ಕರೊನಾ ವೈರಾಣು ಏಳರಿಂದ ಎಂಟು ಗಂಟೆ ಕಾಲ ಜೀವಂತವಾಗಿರುತ್ತದೆ. ಆದರೆ, ಬಿಸಿಲಿಗೆ ಒಡ್ಡಿದರೆ ಗರಿಷ್ಠ ನಾಲ್ಕು ಗಂಟೆ ಕಾಲ ಅದು ಜೀವಂತವಾಗಿರುತ್ತದೆ. ಆದ್ದರಿಂದ, ಯಾವುದೇ ಹಣ್ಣು ಮತ್ತು ತರಕಾರಿಯನ್ನು ತಂದಕೂಡಲೇ ಬಳಸದೆ, ಕನಿಷ್ಠ ನಾಲ್ಕು ಗಂಟೆ ಕಾಲ ಕವರ್​ನಲ್ಲಿ ಹಾಗೆಯೇ ಬಿಡಬೇಕು ಎಂದು ಅವರು ಹೇಳುತ್ತಾರೆ.

    ಇದನ್ನೂ ಓದಿ: VIDEO| ಲಾಕ್‌ಡೌನ್‌ನಲ್ಲಿ ನೆರೆಹೊರೆಯವರ ವಿಭಿನ್ನ ಆಟ

    ಇದಾದ ಬಳಿಕ ಹಣ್ಣು ಮತ್ತು ತರಕಾರಿಯನ್ನು ಪ್ಯಾಕೆಟ್​ನಿಂದ ತೆಗೆದು, ಉಗುರು ಬೆಚ್ಚಗಿನ ನೀರಿನಲ್ಲಿ ಇಡಿ. ಆನಂತರ ಚಿಟಿಕೆಯಷ್ಟು ಬೇಕಿಂಗ್​ ಸೋಡಾ ಬಳಸಿ ಬಿಸಿನೀರಿನಲ್ಲಿ ತೊಳೆದು ಬಳಸಿದರೆ ಕರೊನಾದಿಂದ ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡುತ್ತಾರೆ.
    ಯಾವುದೇ ಕಾರಣಕ್ಕೂ ಹಣ್ಣು ಮತ್ತು ತರಕಾರಿಗಳ ಮೇಲೆ ಸ್ಯಾನಿಟೈಸರ್​ ಸಿಂಪಡಿಸಬಾರದಂತೆ. ಇವುಗಳ ಮೇಲಿರುವ ಕರೊನಾ ವೈರಾಣುವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲು ಸಾಧ್ಯವಾಗುವುದಿಲ್ಲ. ತರಕಾರಿ ಮತ್ತು ಹಣ್ಣುಗಳ ಮೇಲೆ ನೈಸರ್ಗಿಕವಾದ ಸುಕ್ಕುಗಳಿರುತ್ತವೆ. ಆ ಸುಕ್ಕುಗಳಲ್ಲಿ ಇರುವ ವೈರಾಣುಗಳು ಸ್ಯಾನಿಟೈಸರ್​ನಿಂದ ನಿಷ್ಕ್ರಿಯಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾರೆ.

    ಸ್ಯಾನಿಟೈಸರ್​ ಏನಿದ್ದರೂ ನಮ್ಮ ಮೈ, ಕೈ ಹಾಗೂ ಕಾಲುಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಬಳಸಬಹುದಾಗಿದೆ. ಇದು ಪರಿಣಾಮಕಾರಿಯೂ ಹೌದು. ಸ್ಯಾನಿಟೈಸರ್​ನಲ್ಲಿ ಹಾನಿಕಾರಕ ರಾಸಾಯನಿಕಗಳು ಇರುತ್ತವೆ. ಇವನ್ನು ಸೇವಿಸಿದರೆ, ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ತರಕಾರಿ ಮತ್ತು ಹಣ್ಣುಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದು ಸೂಕ್ತ. ಒಂದು ಹನಿ ಪೊಟ್ಯಾಷಿಯಂ ಪರಮಾಂಗ್ನೇಟ್​ ಅನ್ನು ಉಗುರು ಬೆಚ್ಚಗಿನ ನೀರಿಗೆ ಹಾಕಿದರೆ ಮತ್ತೂ ಉತ್ತಮ. ಇದು ಲಭ್ಯವಿಲ್ಲವಾದರೆ, ಅಡುಗೆ ಸೋಡಾವೇ ಸಾಕು ಎಂದು ತಿಳಿಸುತ್ತಾರೆ.

    ಜಾಹ್ನವಿ ಮತ್ತು ಖುಷಿ ಸೇರಿ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಬೋನಿ ಕಪೂರ್​ ಹೇಳಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts