More

    ಬಸವಣ್ಣರ ವಿಚಾರಧಾರೆ ಮೈಗೂಡಿಸಿಕೊಳ್ಳುವುದು ಮುಖ್ಯ

    ಚಿಕ್ಕಮಗಳೂರು: ಬದುಕಿನ ಕಲ್ಯಾಣಕ್ಕಾಗಿ ಬಸವಣ್ಣನ ವಿಚಾರಧಾರೆಗಳನ್ನು ಎಲ್ಲರೂ ಮನೆ, ಮನಗಳಲ್ಲಿ ಪಾಲಿಸುವ ಜೊತೆಗೆ ಮೈಗೂಡಿಸಿಕೊಳ್ಳುವುದು ಅತಿಮುಖ್ಯ ಎಂದು ಅಖಿಲ ಭಾರತ ವಿರಶೈವ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಚಂದ್ರಮೌಳಿ ತಿಳಿಸಿದರು.

    ನಗರದ ಎಂ.ಜಿ.ರಸ್ತೆಯ ಶ್ರೀ ಬಸವಣ್ಣ ದೇವಾಲಯದ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ವಿಶ್ವಗುರು ಶ್ರೀ ಬಸವೇಶ್ವರ ಜನ್ಮದಿನಾಚರಣೆಯಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಮಾನತೆಯ ಹರಿಕಾರರು, ಕಾಯಕ ಮತ್ತು ದಾಸೋಹ ತತ್ವಗಳನ್ನು ಕೊಟ್ಟವರು ಬಸವಣ್ಣ. ಅವರ ವಚನಗಳು, ವಿಚಾರಧಾರೆಗಳು ಎಂದೆAದಿಗೂ ಅಮೂಲ್ಯವಾದುದು. ದಯವೇ ಧರ್ಮದ ಮೂಲವಯ್ಯ ಎಂಬುದು ಬಸವ ಧರ್ಮದ ತಿರುಳು. ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದ ದಾರ್ಶನಿಕರು ಎಂದು ಸ್ಮರಿಸಿದರು.
    ಬಸವೇಶ್ವರರ ಆಲೋಚನೆ, ಚಿಂತನೆಗಳು ಮನುಕುಲಕ್ಕೆ ಸೇವೆ ಮಾಡಲು ಪ್ರೇರಣೆ ನೀಡುತ್ತವೆ. ದಮನಿತರನ್ನು ಸಬಲಗೊಳಿಸುವಲ್ಲಿ ಒತ್ತು ನೀಡುತ್ತಾ ಸದೃಢ ಮತ್ತು ಸಮೃದ್ಧ ಸಮಾಜ ನಿರ್ಮಾಣಕ್ಕೆ ಅವರು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
    ಹನ್ನೆರಡನೇಯ ಶತಮಾನದಲ್ಲಿಯೇ ಬಸವಣ್ಣನವರ ಕನಸು ಸಮಸಮಾಜ ನಿರ್ಮಾಣ ಮಾಡ ಬೇಕು ಎನ್ನುವುದಾಗಿತ್ತು. ಹಾಗಾಗಿ ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ನ್ಯಾಯ ಸಿಗುವಂತೆ ಮಾಡುವ ಜೊತೆಗೆ ಸ್ತಿçà ಸಮಾನತೆಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಮಹಾಪುರುಷ ಎಂದು ತಿಳಿಸಿದರು.
    ಸಮಾಜದ ಯುವ ಮುಖಂಡ ಜಿ.ವೀರೇಶ್ ಮಾತನಾಡಿ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದ ಕಾಲದಲ್ಲಿ ಬಸವಣ್ಣನವರು ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರಲು ಬುನಾದಿ ಹಾಕಿದವರು. ಜೊತೆಗೆ ಹೊಸ ಚಿಂತನೆಗಳನ್ನು ಕಟ್ಟಿಕೊಟ್ಟು ಜನರಲ್ಲಿ ಜಾಗೃತಿಯನ್ನು ಮೂಡಿಸಿದವರು ಎಂದರು.
    ಕಾರ್ಯಕ್ರಮದಲ್ಲಿ ನಗರ ವೀರಶೈವ ಸಮಾಜದ ಅಧ್ಯಕ್ಷ ಸಿ.ಆರ್.ಅಶೋಕ್‌ಕುಮಾರ್, ಜನಾಂಗದ ಮುಖಂಡರಾದ ಓಂಕಾರಸ್ವಾಮಿ, ಈಶ್ವರಪ್ಪ, ಹೇಮನಾಥ್, ವಕೀಲ ಜಗದೀಶ್, ಜಯಪ್ರಕಾಶ್, ಉಮೇಶ್, ನಂದೀಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts