More

  ವಿಶ್ವಗುರು ಬಸವಣ್ಣವರ ಜಯಂತ್ಯೋತ್ಸವ

  ಹುಬ್ಬಳ್ಳಿ : ನೈಋತ್ಯ ರೈಲ್ವೆ ವೀರಶೈವ ಲಿಂಗಾಯತ ಹಾಗೂ ಎಲ್ಲ ಒಳಪಂಗಡಗಳ ನೌಕರರ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣವರ 891ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ನಗರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

  ಡಾ. ಚನ್ನರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಡಾ. ಎಚ್.ವಿ. ಬೆಳಗಲಿ ಅತಿಥಿಗಳಾಗಿದ್ದರು. ಉಪನ್ಯಾಸಕರಾಗಿ ಸಾಹಿತಿ ಶ್ರೀಧರ ಆಸಂಗಿಹಾಳ ಭಾಗವಹಿಸಿದ್ದರು. ರೈಲ್ವೆ ಸಿಬ್ಬಂದಿ ಹಾಗೂ ಬಸವಾಭಿಮಾನಿಗಳು ಉಪಸ್ಥಿತರಿದ್ದರು ಎಂದು ಸಂಘದ ಅಧ್ಯಕ್ಷ ರಾಜು ಶಿವಶಿಂಪಿಗೇರ ಹಾಗೂ ಕಾರ್ಯದರ್ಶಿ ಪ್ರಶಾಂತ ಮಟ್ಟಿ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts