More

    ಪತ್ರಿಕಾ ವಿತರಿಕರಿಗೂ ಗುರುತಿನ ಚೀಟಿ ವಿತರಣೆ

    ಕೆ.ಆರ್.ನಗರ: ಪಟ್ಟಣ ವ್ಯಾಪ್ತಿಯಲ್ಲಿ ನಿತ್ಯ ಪ್ರತಿ ಮನೆಗೆ ದಿನಪತ್ರಿಕೆ ಹಂಚಿಕೆ ಮಾಡುವ ವಿತರಕರನ್ನು ಬೀದಿ ಬದಿ ವ್ಯಾಪಾರಿಗಳೆಂದು ಪರಿಗಣಿಸಿ ಪುರಸಭೆಯಿಂದ ಗುರುತಿನ ಚೀಟಿ ನೀಡಲು ಸರ್ಕಾರ ಅನುಮತಿ ನೀಡಿದ್ದು, ಅರ್ಹರು ಇದರ ಅನುಕೂಲ ಪಡೆದುಕೊಳ್ಳಬಹುದು ಎಂದು ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ ತಿಳಿಸಿದರು.

    ಪಟ್ಟಣದ ಪುರಸಭೆಯಲ್ಲಿ ಶನಿವಾರ ಪತ್ರಕರ್ತರು ಮತ್ತು ಪತ್ರಿಕೆ ವಿತರಕರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯಡಿ ದೊರೆಯುವ ಸಾಲ ಸೌಲಭ್ಯವನ್ನು ಪತ್ರಿಕಾ ವಿತರಕರಿಗೂ ಕಲ್ಪಿಸುವ ಸಲುವಾಗಿ ಅವರನ್ನು ಬೀದಿ ಬದಿ ವ್ಯಾಪಾರಿಗಳ ವ್ಯಾಪ್ತಿಗೆ ಸೇರಿಸಲಾಗುತ್ತಿದೆ ಎಂದರು.

    ಬೀದಿ ವ್ಯಾಪಾರಿಗಳಿಗೆ ಆತ್ಮ ನಿರ್ಭರ್ ನಿಧಿ(ಪಿಎಂ ಸ್ವ-ನಿಧಿ) ಯೋಜನೆಯಡಿ ಶೇ.7 ರಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸಲಾಗುವುದು. ಮೊದಲ ಕಂತಿನ ಕಿರು ಸಾಲ ಸೌಲಭ್ಯ 10,000 ರೂ., 2ನೇ ಕಂತಿನ 20,000 ರೂ. ಹಾಗೂ 3ನೇ ಕಂತಿನಲ್ಲಿ 50 , 000 ರೂ. ಅನ್ನು ವಿವಿಧ ಬ್ಯಾಂಕ್‌ಗಳ ಮೂಲಕ ಒದಗಿಸಲಾಗುವುದು ಎಂದು ಹೇಳಿದರು.

    ಪಟ್ಟಣದಲ್ಲಿ ರಸ್ತೆ ಬದಿ ವ್ಯಾಪಾರ ಮಾಡುತ್ತಿರುವ 700 ಜನರನ್ನು ಈಗಾಗಲೇ ಪುರಸಭೆ ಗುರುತಿಸಿ ಗುರುತಿನ ಚೀಟಿ ವಿತರಿಸಿದೆ. ಜತೆಗೆ 10,000 ರೂ.ಸಾಲ ಸೌಲಭ್ಯ ಕೊಡಿಸಲಾಗಿದ್ದು, 50 ಜನರಿಗೆ ಎರಡನೇ ಕಂತಿನ ಹಣ 20,000 ರೂ. ಹಾಗೂ 30 ಜನರಿಗೆ ಮೂರನೇ ಕಂತಿನ ಹಣ 50,000 ರೂ. ನೀಡಲಾಗಿದೆ ಎಂದು ತಿಳಿಸಿದರು.

    ಪೂರ್ಣ ಪ್ರಮಾಣದಲ್ಲಿ ಸಾಲವನ್ನು ಮರುಪಾವತಿ ಮಾಡಿದವರಿಗೆ ಶೇ.4 ರಷ್ಟು ಬಡ್ಡಿಯನ್ನು ವಾಪಸ್ ಕೊಡಲಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts