More

    ಚೀನಾದಿಂದ ಮರಳುವವರ ತಪಾಸಣೆಗೆ ವಿಶೇಷ ಚಿಕಿತ್ಸಾ ಘಟಕ: ಕೊರೊನಾ ಶಂಕಿತರು ಎಂದು ಕಂಡು ಬಂದವರ ಮೇಲೆ ತೀವ್ರ ನಿಗಾ

    ನವದೆಹಲಿ: ಚೀನಾದ ವೂಹಾನ್​ನಿಂದ ಮರಳುವವರಿಗೆ ತಪಾಸಣೆ ನಡೆಸಲು ವಿಶೇಷ ಚಿಕಿತ್ಸಾ ಕೊಠಡಿಯನ್ನು ದೆಹಲಿಯ ಮಣಿಸರ​ ಎಂಬಲ್ಲಿ ನಿರ್ಮಿಸಲಾಗಿದೆ.

    ಕೊರೊನಾ ವೈರಸ್​ ಭೀತಿ ಹಿನ್ನೆಲೆಯಲ್ಲಿ ಚಿಕಿತ್ಸೆ ಉದ್ದೇಶಕ್ಕಾಗಿಯೇ ಪೂರ್ಣ ಪ್ರಮಾಣದ ಕಾರ್ಯಾಚರಣೆಯನ್ನು ಭಾರತೀಯ ಸೇನೆ ನಡೆಸಿದೆ. ಅಂದಾಜು 300 ವಿದ್ಯಾರ್ಥಿಗಳನ್ನು ತಪಾಸಣೆಗೊಳಪಡಿಸಲಿದ್ದು, ವೈದ್ಯರ ತಂಡ ಅವರ ಮೇಲೆ ಎರಡು ವಾರಗಳ ಕಾಲ ವಿಶೇಷ ನಿಗಾ ವಹಿಸಲಿದೆ.

    ಚೀನಾದಿಂದ ಮರಳುವವರ ತಪಾಸಣೆಗೆ ವಿಶೇಷ ಚಿಕಿತ್ಸಾ ಘಟಕ: ಕೊರೊನಾ ಶಂಕಿತರು ಎಂದು ಕಂಡು ಬಂದವರ ಮೇಲೆ ತೀವ್ರ ನಿಗಾಅಲ್ಲದೆ ಅವರೆಲ್ಲ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ವಿಮಾನನಿಲ್ದಾಣದಲ್ಲೇ ತಪಾಸಣೆ ನಡೆಸಲಾಗುತ್ತದೆ. ಮಾರಕ ವೈರಸ್​ ಕೊರೊನಾ ಶಂಕಿತರೆಂದು ಕಂಡು ಬಂದಲ್ಲಿ ಈ ವಿಶೇಷ ಕೊಠಡಿಗೆ ರವಾನಿಸಲಾಗುವುದು.

    ಹಾಗೆ ಬರುವ ವಿದ್ಯಾರ್ಥಿಗಳ ಗುಂಪನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗುವುದು. ಈ ಗುಂಪುಗಳಲ್ಲಿ ವೈರಸ್​ ಪೀಡಿತರು ಎಂದು ಕಂಡು ಬಂದಲ್ಲಿ ಅದಕ್ಕಾಗಿ ಸಿದ್ಧಪಡಿಸಿದ ವಾಹನದಲ್ಲಿ ವಿಶೇಷ ಕೊಠಡಿಗೆ ರವಾನಿಸಲಾಗುವುದು.

    ಈ ವಿಶೇಷ ಕೊಠಡಿ ಒಳಗೆ ನಾಗರಿಕರಿಗೆ ಪ್ರವೇಶ ಇರುವುದಿಲ್ಲ. ಅಲ್ಲದೆ ತೀವ್ರ ತುರ್ತು ಪರಿಸ್ಥಿತಿ ಹೊರತು ಒಳಗಿರುವ ವೈದ್ಯರು ಮತ್ತು ದಾದಿಯರು ಕೂಡ ಹೊರಹೋಗುವಂತಿಲ್ಲ.

    ಚೀನಾದಿಂದ ಮರಳುವವರ ತಪಾಸಣೆಗೆ ವಿಶೇಷ ಚಿಕಿತ್ಸಾ ಘಟಕ: ಕೊರೊನಾ ಶಂಕಿತರು ಎಂದು ಕಂಡು ಬಂದವರ ಮೇಲೆ ತೀವ್ರ ನಿಗಾಇಂಡೋ-ಟಿಬೇಟಿಯನ್​ ಬಾರ್ಡರ್​ ಪೊಲೀಸರು ಕೂಡ ದೆಹಲಿಯ ನೈಋತ್ಯ ಭಾಗದಲ್ಲಿ ಇದೇ ರೀತಿಯ ಚಿಕಿತ್ಸೆಗಾಗಿ ವಿಶೇಷ ಘಟಕವನ್ನು ಸ್ಥಾಪಿಸಿದ್ದಾರೆ.

    ಕೇರಳದ ತ್ರಿಶೂರ್​ನಲ್ಲಿ ರಾಷ್ಟ್ರದ ಮೊದಲ ಕೊರೊನಾ ವೈರಸ್​ ಪೀಡಿತ ಮಹಿಳೆ ಗುರುವಾರ ಪತ್ತೆಯಾಗಿದ್ದರು. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಕೇರಳ ಆರೋಗ್ಯ ಸಚಿವಾಲಯ ತಿಳಿಸಿತ್ತು.

    ಚೀನಾದ ವುಹಾನ್​ನ ವೈದ್ಯಕೀಯ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆ ರಾಷ್ಟ್ರಕ್ಕೆ ಮರಳಿದ್ದು, ದೆಹಲಿಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಗಾಗಿ ನಂತರ ತ್ರಿಶೂರ್​ಗೆ ಬಂದಿದ್ದರು. ತಪಾಸಣೆ ವರದಿಯಲ್ಲಿ ಆಕೆಗೆ ವೈರಸ್​ ಹರಡಿರುವುದು ದೃಢಪಟ್ಟಿತು. ಕೂಡಲೇ ಕೇಂದ್ರ ಸರ್ಕಾರ, ಕೇರಳ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.

    ಮಹಿಳೆಗೆ ವೈರಸ್​ ಹರಡಿರುವ ಪ್ರಕರಣ ಪರಿಶೀಲನೆಗೆ ಕೇರಳ ಸರ್ಕಾರ ಮೈದ್ಯಕೀಯ ಮಂಡಳಿ ರಚನೆ ಮಾಡಿದೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts