More

    ಇಸ್ಲಾಮಿಕ್​ ಪ್ರಚಾರಕ ಝಾಕೀರ್​ ನಾಯ್ಕ್​ಗೆ ಬ್ರಿಟನ್​ನಲ್ಲೂ ಎದುರಾಯ್ತು ಕುತ್ತು

    ಲಂಡನ್​: ಮಲೇಷ್ಯಾದಲ್ಲಿ ತಲೆಮರೆಸಿಕೊಂಡಿರುವ, ಭಾರತ ಹಾಗೂ ಬಾಂಗ್ಲಾದೇಶದಲ್ಲಿ ವಾಂಟೆಡ್​ ಆಗಿರುವ ಇಸ್ಲಾಮಿಕ್​ ಪ್ರಚಾರಕ, ಉಗ್ರರ ನಂಟಿನ ಆರೋಪಿ ಝಾಕೀರ್​ ನಾಯ್ಕ್​ಗೆ ಯುನೈಟೆಡ್​ ಕಿಂಗ್​ಡಂನಲ್ಲೂ ಕುತ್ತು ಎದುರಾಗಿದೆ.

    ಈತನ ಒಡೆತನ ಪೀಸ್​ ಟಿ.ವಿ. ಹಾಗೂ ಪೀಸ್​ ಟಿ.ವಿ. (ಉರ್ದು) ವಾಹಿನಿಗಳಿಗೆ ಅಲ್ಲಿನ ಮಾಧ್ಯಮ ನಿಯಂತ್ರಕ ಸಂಸ್ಥೆ ಆಪ್​ಕಾಮ್​ ಬರೋಬ್ಬರಿ ಮೂರು ಲಕ್ಷ ಪೌಂಡ್​ (ಅಂದಾಜು 2.75 ಕೋಟಿ ರೂ.) ದಂಡ ವಿಧಿಸಿದೆ. ಈ ಮೂಲಕ ತನ್ನ ವಾಹಿನಿಗಳಲ್ಲಿ ಈತ ಕೋಮು ಭಾವನೆ ಕೆರಳಿಸುವ ಹಾಗೂ ಹಿಂಸೆಯನ್ನು ಪ್ರಚೋದಿಸುವ ಭಾಷಣ ಮಾಡುತ್ತಿದ್ದ ಎನ್ನುವುದು ಕೂಡ ಸಾಬೀತಾದಂತಾಗಿದೆ.

    ಇದನ್ನೂ ಓದಿ; ಶಾಲೆಗಳನ್ನು ಪಾಳಿಗಳಲ್ಲಿ ನಡೆಸುವುದಕ್ಕೆ ವಿರೋಧವೇಕೆ? 

    ದ್ವೇಷಭಾವ ಬೆಳೆಸುವ ಹಾಗೂ ಕೊಲೆಯನ್ನು ಪ್ರಚೋದಿಸುವ ಭಾಷಣಗಳನ್ನು ನಿರಂತರವಾಗಿ ತನ್ನ ವಾಹಿನಿಗಳಲ್ಲಿ ಬಿತ್ತರಿಸಿದ್ದಕ್ಕೆ ಈ ದಂಡ ವಿಧಿಸಲಾಗಿದೆ ಎಂದು ಆಫ್​ಕಾಮ್​ ಸಂಸ್ಥೆ ಹೇಳಿದೆ. ಪೀಸ್​ ಟಿವಿಯ ಪಾಲುದಾರ ಸಂಸ್ಥೆ ಲಾರ್ಡ್​ ಕಮ್ಯೂನಿಕೇಷನ್ಸ್​ಗೆ ಒಂದು ಲಕ್ಷ ಪೌಂಡ್​ ಪೀಸ್​ ಟಿವಿ ಉರ್ದು ವಾಹಿನಿಯ ಒಡೆತನ ಹೊಂದಿರುವ ಕ್ಲಬ್​ ಟಿವಿಗೆ ಎರಡು ಲಕ್ಷ ಪೌಂಡ್​ ದಂಡ ವಿಧಿಸಲಾಗಿದೆ.

    ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ಹಾಗೂ ತನ್ನ ವಾಹಿನಿಗಳಲ್ಲಿ ಕೋಮು ಭಾವನೆ ಕೆರಳಿಸುವ ಕಾರ್ಯಕ್ರಮ ಬಿತ್ತರಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಇದರ ತನಿಖೆ ನಡೆಸುತ್ತಿದ್ದಾಗಲೇ ಜಾಕೀರ್​ ಹುಸೇನ್​ ಮಲೇಷ್ಯಾಗೆ ಪರಾರಿಯಾಗಿ ಆಶ್ರಯ ಪಡೆದುಕೊಂಡಿದ್ದಾನೆ.

    ಇದನ್ನೂ ಓದಿ; ನೀವು ವಾಸವಿರುವ ಪ್ರದೇಶದಲ್ಲಿ ಸೋಂಕು ನಿವಾರಕ ಸಿಂಪಡಿಸಿದ್ದಾರಾ? ಹಾಗಿದ್ದರೆ ಈ ಸುದ್ದಿ ಓದಿ… 

    ಬಾಂಗ್ಲಾ ರಾಜಧಾನಿ ಢಾಕಾದಲ್ಲಿ 2016ರಲ್ಲಿ ಸಂಭವಿಸಿದ ಸರಣಿ ಬಾಂಬ್​ ಸ್ಫೋಟ ಕೃತ್ಯಗಳಲ್ಲೂ ಈತನ ಪಾತ್ರವಿರುವ ಆರೋಪದಲ್ಲಿಯೂ ಈತ ಬಾಂಗ್ಲಾ ಸರ್ಕಾರಕ್ಕೂ ಬೇಕಾಗಿದ್ದಾನೆ.

    ಝಾಕೀರ್​ ಹಸ್ತಾಂತರಕ್ಕೆ ಭಾರತ ಮನವಿ: ತಲೆ ಮರೆಸಿಕೊಂಡಿರುವ ಆರೋಪಿ ಝಾಕೀರ್​ ನಾಯ್ಕ್​ನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಗುರುವಾರವಷ್ಟೇ (ಮೇ 14) ಭಾರತ ಸರ್ಕಾರ ಉನ್ನತ ಮಟ್ಟದಲ್ಲಿ ಮಲೇಷ್ಯಾಗೆ ಮನವಿ ಸಲ್ಲಿಸಿದೆ.

    ಸಿಬ್ಬಂದಿಗೆ ಸಂಬಳ ನೀಡಲು ಜಮೀನು ಮಾರಾಟಕ್ಕೆ ಮುಂದಾದ ತಿರುಪತಿ ದೇಗುಲ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts