More

    ಸರ್ಕಾರಿ ವೈದ್ಯರಿಗೆ ಖಾಸಗಿ ಸೇವೆಯೆ ಹಿತ…?

    ಕಿರುವಾರ ಎಸ್.ಸುದರ್ಶನ್ ಕೋಲಾರ
    ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಸರ್ಕಾರಿ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಾಗದಿದ್ದರೂ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಸಿಗುತ್ತಾರೆ. ಅವರಿಗೆ ಸರ್ಕಾರಿ ಸೇವೆಗಿಂತ ಖಾಸಗಿ ಸೇವೆಯೇ ಹಿತ ಎಂಬಂತಾಗಿದೆ…

    ಜಿಲ್ಲೆಯಲ್ಲಿ ೨ ಸರ್ಕಾರಿ ಜಿಲ್ಲಾಸ್ಪತ್ರೆ, ೫ ತಾಲೂಕು ಸರ್ಕಾರಿ ಆಸ್ಪತ್ರೆ, ಕೋಲಾರ ಮತ್ತು ಶ್ರೀನಿವಾಸಪುದಲ್ಲಿ ತಲಾ ೫ ಸಮುದಾಯದ ಆರೋಗ್ಯ ಕೇಂದ್ರಗಳು ಹಾಗೂ ಒಟ್ಟು ೭೩ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ. ಜಿಲ್ಲಾ ೨ ಆಸ್ಪತ್ರೆಗಳಲ್ಲಿ ತಲಾ ೪೦ಕ್ಕೂ ಹೆಚ್ಚು ವೈದ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿವಿಧ ವೈದ್ಯರ ೧೬೭ ಮಂಜೂರು ಹುದ್ದೆಗಳ ಪೈಕಿ ೧೨೮ ಭರ್ತಿಯಾಗಿವೆ. ೩೯ ಹುದ್ದೆಗಳು ಖಾಲಿ ಇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಕೆಲ ವೈದ್ಯರಿಗೆ ಖಾಸಗಿ ವ್ಯಾಮೋಹ ಹೆಚ್ಚಾಗಿದ್ದು, ಈ ಬಗ್ಗೆ ಹೇಳೊರು… ಕೇಳೊರು… ಇಲ್ಲದಂತಾಗಿದೆ.

    ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಅಽಕಾರಿಗಳು, ಸಿಬ್ಬಂದಿ ಯಾವ ಯಾವ ಪಾಳಿಯಲ್ಲಿ ಕೆಲಸ ನಿರ್ವಹಿಸಬೇಕು ಎಂಬುದರ ಬಗ್ಗೆ ರಾಜ್ಯ ಸರ್ಕಾರವು ಸಮಯ ನಿಗದಿ ಮಾಡಿದೆ. ಆದರೆ ಇದರ ಅರಿವಿಲ್ಲದೆ ಸುಮಾರು ಮಂದಿ ಬೆಳಗ್ಗೆ ೧೧ಕ್ಕೆ ಬಂದು ಮಧ್ಯಾಹ್ನ ೧.೩೦ಕ್ಕೆ ಊಟಕ್ಕೆ ಹೊರಡುತ್ತಾರೆ. ಬಳಿಕ ಮಧ್ಯಾಹ್ನ ೩ಕ್ಕೆ ಕೆಲಸಕ್ಕೆ ಬಂದರೆ ಸಂಜೆ ೪.೩೦ ಅಗುವುದರೊಳಗೆ ಮನೆಗೆ ಹೊರಡುತ್ತಾರೆ. ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿ ಕೇಂದ್ರ ಸ್ಥಾನದಲ್ಲೇ ಉಳಿದು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

    *ರಜೆಗೆ ಪೂರ್ವಾನುಮತಿ ಕಡ್ಡಾಯ
    ವೈದ್ಯರು, ಸಿಬ್ಬಂದಿ ಇಲಾಖೆ ಮುಖ್ಯಸ್ಥರ ಪೂರ್ವಾನುಮತಿಯನ್ನು ಪಡೆಯದೇ ಕೇಂದ್ರ ಸ್ಥಾನ ಬಿಡುತ್ತಿರುವ ಹಲವು ಪ್ರಕರಣಗಳು ಇಲಾಖೆ ಅಽಕಾರಿಗಳ ಗಮನಕ್ಕೆ ಬಂದಿದೆ. ಯಾವುದೇ ಅಽಕಾರಿ, ಸಿಬ್ಬಂದಿ ರಜೆಗೆ ತೆರಳುವ ಮುನ್ನ ಅಥವಾ ವಿದೇಶ ಪ್ರಯಾಣಕ್ಕೆ ತೆರಳುವ ಮುನ್ನ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಕೆಲವೊಂದು ವೈದ್ಯಕೀಯ ತುರ್ತು ಪ್ರಕರಣಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ಸಂದರ್ಭಗಳಲ್ಲಿ ಕೇಂದ್ರ ಸ್ಥಾನ ಬಿಡುವ ಮುನ್ನ ನಿಯಾಮಾನುಸಾರ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಇಲ್ಲದಿದ್ದ ಪಕ್ಷದಲ್ಲಿ ಅಂತಹ ಪ್ರಕರಣಗಳನ್ನು ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಿ ಇಲಾಖೆ ವಿಚಾರಣೆಯನ್ನು ಏಕಪಕ್ಷೀಯವಾಗಿ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಆಯುಕ್ತರು ತಿಳಿಸಿದ್ದಾರೆ.

    • ತುರ್ತು ಸೇವೆಗಳನ್ನು ಸಕಾಲದಲ್ಲಿ ತಲುಪಿಸಬೇಕು
      ಇಲಾಖೆಯ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಾಗೂ ತುರ್ತು ಸೇವೆಗಳನ್ನು ಸಕಾಲದಲ್ಲಿ ಒದಗಿಸುವ ಸಲುವಾಗಿ ವೈದ್ಯರು ಹಾಗೂ ಸಿಬ್ಬಂದಿಗೆ ವಸತಿ ಗೃಹಗಳನ್ನು ಕಲ್ಪಿಸಲಾಗಿದೆ. ವಸತಿಗೃಹ ಲಭ್ಯವಿಲ್ಲದ ಕಡೆ ಕೇಂದ್ರ ಸ್ಥಾನದಲ್ಲಿ ವಾಸಿಸಲು ಎಚ್‌ಆರ್‌ಎ ಸೌಲಭ್ಯ ನೀಡಲಾಗಿದೆ. ವೈದ್ಯರು ಹಾಗೂ ಸಿಬ್ಬಂದಿ ಕೇಂದ್ರಸ್ಥಾನದಲ್ಲಿ ವಾಸವಿರದೇ ಇರುವುದರಿಂದ ಸಾರ್ವಜನಿಕರಿಗೆ ಸಕಾಲದಲ್ಲಿ ವೈದ್ಯಕೀಯ ತುರ್ತು ಸೇವೆ ಕಲ್ಪಿಸಲು ಆಗದೆ ಸೌಲಭ್ಯಗಳಿಂದ ವಂಚನೆಗೆ ಒಳಗಾಗುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಈ ದೂರುಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕೇಂದ್ರಸ್ಥಾನದಲ್ಲಿ ಲಭ್ಯವಿಲ್ಲದ ವೈದ್ಯರ ವಿರುದ್ಧ ಕ್ರಮಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.

    ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಕೆಲಸ ಮಾಡುವ ಬಹುತೇಕ ವೈದ್ಯರು ಖಾಸಗಿ ನರ್ಸಿಂಗ್ ಹೋಮ್, ಕ್ಲಿನಿಕ್‌ಗಳನ್ನು ಹೊಂದಿದ್ದು, ಸರ್ಕಾರಿ ಆಸ್ಪತ್ರೆಗಿಂತ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಇದರಿಂದಾಗಿ ರೋಗಿಗಳಿಗೆ ಸಕಾಲಕ್ಕೆ ಸೇವೆ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇಲಾಖೆಯ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    • ಅರ್ಹರಲ್ಲದವರಿಗೆ ಶುಶ್ರ‍್ರೂಷಾಽಕಾರಿ ಹುದ್ದೆಗೆ ನಿಯೋಜನೆ
      ಶುಶ್ರೂಷಕಿಯಾಗಿರುವ ವಿಜಯಮ್ಮ ಮ್ಯಾಟ್ರಿನ್ ಆಗಲು ಅರ್ಹತೆಯಿಲ್ಲದಿದ್ದರೂ ಆರೋಗ್ಯ ಇಲಾಖೆಯ ಅಽಕಾರಿಗಳು ಒತ್ತಡಕ್ಕೆ ಮಣಿದು ಶುಶ್ರೂಷಾಧಿಕಾರಿ ಹುದ್ದೆಗೆ ನಿಯೋಜನೆ ಮಾಡಿದ್ದಾರೆ. ಈ ಹುದ್ದೆಗೆ ಸರ್ಕಾರಿ ಜ್ಯೇಷ್ಠತೆ ಆಧಾರದ ಮೇರೆಗೆ ನಿಯತಕಾಲಿಕವಾಗಿ ನೇಮಕವಾಗಿರಬೇಕು. ಹಿರಿಯ ಹಾಗೂ ಅರ್ಹತೆ ಹೊಂದಿರುವವರು ಇದ್ದರೂ ಅವರಿಗೆ ಕೆಲ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಗ್ರೇಡ್-೨ ಅರ್ಹತೆ ಹೊಂದಿರುವ ವಿಜಯಮ್ಮ ಶುಶ್ರೂಷಕಿಯಾಗಿ ಕೆಲಸ ನಿರ್ವಹಿಸುವುದು ಬಿಟ್ಟು, ಅರ್ಹತೆಯಿಲ್ಲದಿದ್ದರೂ ಶುಶ್ರೂಷಾಧಿಕಾರಿಯಾಗಿ ಇರುವುದು ಆಸ್ಪತ್ರೆಯಲ್ಲಿ ಅಧಿಕಾರಿಗಳ, ಸಿಬ್ಬಂದಿಯ ಆಕ್ರೋಶಕ್ಕೆ ಕಾರಣವಾಗಿದೆ.
    • ಸಮಯಕ್ಕೆ ದೊರೆಯದ ವರದಿಗಳು
      ಯಾವುದೇ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳಲು ಸರ್ಕಾರಿ ಆಸ್ಪತ್ರೆಗೆ ಬಂದರೆ ರಕ್ತಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಬೆಳಗ್ಗೆ ರಕ್ತದ ಮಾದರಿ ನೀಡಿದರೆ ವರದಿಗಾಗಿ ಮಧ್ಯಾಹ್ನ ೨.೩೦ ರತನಕ ಕಾಯಬೇಕು. ಮಧ್ಯಾಹ್ನದ ಮೇಲೆ ವೈದ್ಯರು ಸಿಗುವುದು ಕಷ್ಟಸಾಧ್ಯವಾಗಿದೆ. ಇದರಿಂದಾಗಿ ತುರ್ತು ಚಿಕಿತ್ಸೆಗೆ ಒಳಗಾಗಬೇಕಾದವರು ಬೇಸರಗೊಂಡು ವೈದ್ಯರನ್ನು ಸಂಪರ್ಕಿಸಿದರೆ ಅವರು ಹೇಳುವ ವಿಳಾಸಕ್ಕೆ ಹೋದರೆ ಚಿಕಿತ್ಸೆ ನೀಡುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಾಗಿ ವೈದ್ಯರು ಲಭ್ಯವಾಗದೆ ಇರುವ ಬಗ್ಗೆ ಲಿಖಿತವಾಗಿ ದೂರು ನೀಡಿದರೆ ಪರಿಶೀಲನೆ ನಡೆಸಿ ಅಂತಹ ವೈದ್ಯರ ವಿರುದ್ಧ ಕ್ರಮಕೈಗೊಳ್ಳಲಾಗುವುದು.
    – ಡಾ.ಜಗದೀಶ್, ಡಿಎಚ್‌ಒ, ಕೋಲಾರ.

    ರಾತ್ರಿ ಸಮಯದಲ್ಲಿ ಮಗುವಿಗೆ ಜ್ವರ ಜಾಸ್ತಿಯಾಗಿ ಚಿಕಿತ್ಸೆಗಾಗಿ ಜಿಲ್ಲಾ ಎಸ್‌ಎನ್‌ಆರ್ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆ ಸಮಯದಲ್ಲಿ ಮಕ್ಕಳ ತಜ್ಞರು ಇರಲಿಲ್ಲ. ಶುಶ್ರೂಷಕಿಯನ್ನು ಕೇಳಿದ್ದಕ್ಕೆ ಅವರೇ ಒಂದು ರಸೀದಿ ಬರೆದುಕೊಟ್ಟರು. ಔಷಧಗಳು ಲಭ್ಯವಿಲ್ಲ, ಹೀಗಾಗಿ ಹೊರಗಡೆ ತೆಗೆದುಕೊಳ್ಳಿ ಎಂದು ಹೇಳಿದರು. ಆನಂತರ ಪಕ್ಕದ ಖಾಸಗಿ ಇಟಿಸಿಎಂ ಆಸ್ಪತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆ ಕೊಡಿಸಲಾಯಿತು.
    – ಪ್ರಮೋದ್, ಕೋಲಾರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts