More

    ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಷರಿಷತ್ ಒಪ್ಪಿಗೆ ಸಿಕ್ಕಿತಾ?

    ಬೆಂಗಳೂರು: ವಿಧಾನ ಸಭೆಯಲ್ಲಿ ಅಂಗೀಕಾರಗೊಂಡ ಭೂಸುಧಾರಣಾ ಕಾಯ್ದೆಯ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್​ನಲ್ಲಿ ತೀವ್ರ ಚರ್ಚೆಗೆ ಒಳಗಾಯಿತು. ಈ ವಿಚಾರವಾಗಿ ತಡರಾತ್ರಿವರೆಗೂ ಹೈಡ್ರಾಮಾ ನಡೆದಿದ್ದು, 12.40ರ ತನಕವೂ ಚರ್ಚೆ ಮುಂದುವರಿದಿತ್ತು. ವಿಪಕ್ಷ ಸದಸ್ಯರು ಬಿಗಿಪಟ್ಟುಯ ಹಿಡಿದ ಕಾರಣ ವಿಧೇಯಕಗಳ ವಿಚಾರ ಅಂತಿಮವಾಗಲಿಲ್ಲ. ತಡರಾತ್ರಿಯಾದರೂ ವಿಪಕ್ಷ ಸದಸ್ಯರು ಚರ್ಚೆ ಮುಂದುವರಿಸಿದ ಕಾರಣ ಯಾವುದೇ ಒಮ್ಮತ ಸಾಧ್ಯವಾಗಲಿಲ್ಲ. ಶನಿವಾರವೇ ಕಲಾಪದ ಕೊನೆಯ ದಿನವಾದ್ದರಿಂದ ಮಧ್ಯರಾತ್ರಿ 12 ಗಂಟೆ ತನಕವೂ ವಿಪಕ್ಷ ಸದಸ್ಯರು ಡಿಜೆ ಹಳ್ಳಿ, ಕೆಜೆಹಳ್ಳಿ ಗಲಭೆ ವಿಚಾರದಲ್ಲೇ ಕಲಾಪ ಮುಂದುವರಿದಿತ್ತು.

    ಆನಂತರದಲ್ಲಿ ಭೂಸುಧಾರಣಾ ಕಾಯ್ದೆ ವಿಚಾರ ಚರ್ಚೆಗೆ ಬಂದಿತ್ತು. ವಿಪಕ್ಷ ಸದಸ್ಯರ ಪೈಕಿ ಎಸ್.ಆರ್.ಪಾಟೀಲ್​ ಮತ್ತು ಬಸವರಾಜ ಹೊರಟ್ಟಿ, ಮರಿತಿಬ್ಬೇಗೌಡ ಅವರು ವಿಧೇಯಕ ವಿರೋಧಿಸಿ ವಿಸ್ತೃತವಾಗಿ ಮಾತನಾಡಿದರು. ಇದಕ್ಕೆ, ಮಧ್ಯರಾತ್ರಿ ಆದರೂ ಭಾಷಣ ಮಾಡುತ್ತಿದ್ದಾರೆಂದು ಆಡಳಿತ ಪಕ್ಷದ ಸದಸ್ಯರ ಆಕ್ಷೇಪವ್ಯಕ್ತಪಡಿಸಿದ್ದರು. ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಸಮರ ಏರ್ಪಟ್ಟಿತ್ತು. ಇವೆಲ್ಲದರ ನಡುವೆ, ಸಭಾಪತಿಯವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಸಭಾಪತಿಯವರ ಈ ನಡೆ ಆಡಳಿತ ಪಕ್ಷದವರ ಅಚ್ಚರಿಗೆ ಕಾರಣವಾಯಿತು.

    ಇದನ್ನೂ ಓದಿ: PHOTOS|ಭೀಕರ ರಸ್ತೆ ಅಪಘಾತಕ್ಕೆ ಗರ್ಭಿಣಿ ಸೇರಿ 7 ಜನರ ದಾರುಣ ಸಾವು

    ಕಲಾಪದ ಕೊನೆಯ ದಿನಾದ್ದರಿಂದ ವಿವಾದಿತ ಭೂಸುಧಾರಣಾ ತಿದ್ದುಪಡಿ ವಿಧೇಯಕ ಮತ್ತು ಎಪಿಎಂಸಿ ತಿದ್ದುಪಡಿ ವಿಧೇಯಕ ಅಂಗೀಕಾರವಾಗದಂತೆ ಮಾಡಲು ಚರ್ಚೆಯ ಮೇಲಿನ ಭಾಷಣವನ್ನು ದೀರ್ಘ ಅವಧಿಗೆ ಎಳೆದರು. ಹೀಗಾಗಿ ಎಪಿಎಂಸಿ ತಿದ್ದುಪಡಿ ವಿಧೇಯಕ ಚರ್ಚೆಗೇ ಬರಲಿಲ್ಲ. ಭೂಸುಧಾರಣಾ ತಿದ್ದುಪಡಿ ವಿಧೇಯಕವೂ ಅಂಗೀಕಾರವಾಗಲಿಲ್ಲ.

    ಷರಿಷತ್ ಸಭಾಪತಿಗಳ ನಡೆ ನಿಗೂಢ- ಅಂಪೈರ್ ಎಂದೂ ಹೀಗಿರಬಾರದು ಎಂದ ಸಚಿವ ಸುರೇಶ್ ಕುಮಾರ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts