More

    ವಿದ್ಯಾರ್ಥಿಗಳಿಗೆ ಕೃಷಿಯ ಅರಿವು ಅಗತ್ಯ

    ಸಿಂಧನೂರು: ವಿದ್ಯಾರ್ಥಿಗಳು ಪಠ್ಯದ ಜ್ಞಾನದ ಜತೆಗೆ ಕೃಷಿಯ ತಿಳವಳಿಕೆ ಪಡೆದುಕೊಳ್ಳುವುದು ಅತ್ಯಗತ್ಯ ಎಂದು ಎಸ್ಡಿಎಂಸಿ ಸದಸ್ಯ ಬಸವರಾಜ ಹೇಳಿದರು.

    ಕೃಷಿಯ ತಿಳವಳಿಕೆ ಪಡೆದುಕೊಳ್ಳುವುದು ಅತ್ಯಗತ್ಯ

    ತಾಲೂಕಿನ ವಿರುಪಾಪುರ ಗ್ರಾಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ರಾಯಚೂರು ಜಂಟಿಯಾಗಿ ಹಮ್ಮಿಕೊಂಡಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ನಡಿಗೆ ಕೃಷಿಯ ಕಡೆಗೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

    ಇದನ್ನೂ ಓದಿ: ಹೊಸ ಚೇಂಬರ್ ನಿರ್ಮಾಣಕ್ಕೆ ಅಗತ್ಯ ಕ್ರಮ

    ಕಾರ್ಯಕ್ರಮದಲ್ಲಿ ಭತ್ತದ ನಾಟಿ, ಭತ್ತದ ರೋಗ ನಿಯಂತ್ರಣ ಹಾಗೂ ಹೆಚ್ಚು ಇಳುವರಿ ಬರಲು ಅನುಸರಿಸಬೇಕಾದ ಕಾರ್ಯ ವೈಖರಿ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಶ್ನೆಗಳನ್ನು ಕೇಳುವ ಮೂಲಕ ಗೊಂದಲಗಳನ್ನು ಪರಿಹಾರ ಮಾಡಿಕೊಂಡರು.
    ಎಸ್ಡಿಎಂಸಿ ಅಧ್ಯಕ್ಷ ಈರಪ್ಪ ಅಯ್ಯಳಿ, ಮುಖ್ಯ ಶಿಕ್ಷಕಿ ರಮಾದೇವಿ ಶಂಭೋಜಿ, ಹಿರಿಯ ಶಿಕ್ಷಕರಾದ ನಾಗರಾಜ, ಮೌಲಾಸಾಬ್, ಶಾರದಮ್ಮ, ಕಾವೇರಿ, ಸುನೀತಾ, ಮಂಜುಳಾ, ಸಾವಿತ್ರಿ ಬಾಯಿ, ಗೈಡ್ ಕ್ಯಾಪ್ಟನ್ ಶ್ವೇತಾ ಗೊರವರ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾರ್ಯದರ್ಶಿ ಬೀರಪ್ಪ ಶಂಭೋಜಿ, ಅತಿಥಿ ಶಿಕ್ಷಕ ಪಂಪಾಪತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts