More

    ಅಮೆರಿಕದ ಮಿತ್ರರು ಗುಲಾಮರು

    ಟೆಹರಾನ್: ಇರಾನ್​ನ ಪ್ರಭಾವಿ ಸೇನಾ ನಾಯಕ ಕಾಸಿಂ ಸುಲೇಮಾನಿಯನ್ನು ಅಮೆರಿಕ ಹತ್ಯೆ (ಜ.3)ಮಾಡಿದ ನಂತರ ಉಭಯ ದೇಶಗಳ ನಡುವಿನ ವಾಕ್ಸಮರ ಮತ್ತೆ ತಾರಕಕ್ಕೇರಿದ್ದು, ಅಮೆರಿಕದ ಮಿತ್ರ ದೇಶಗಳು ಅದರ ‘ಗುಲಾಮರು’ ಎಂದು ಇರಾನ್ ನಾಯಕ ಆಯತುಲ್ಲಾ ಅಲಿ ಖಮೇನಿ ಛೇಡಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾಲಿಗೆ ಮೇಲೆ ಹಿಡಿತವಿರಲಿ ಎಂದು ಎದಿರೇಟು ಕೊಟ್ಟಿದ್ದಾರೆ.

    ಶುಕ್ರವಾರ ಬೃಹತ್ ಪ್ರಾರ್ಥನಾ ಸಭೆಯಲ್ಲಿ ಮಾತನಾಡಿದ ಖಮೇನಿ, ಅಮೆರಿಕದ ಬೆದರಿಕೆಗೆ ಜಗ್ಗಿದ ಅದರ ಮಿತ್ರ ದೇಶಗಳಾದ ಬ್ರಿಟನ್, ಫ್ರಾನ್ಸ್ ಮತ್ತು ಜಪಾನ್ ಆ ರಾಷ್ಟ್ರದ ದಾಸ್ಯಕ್ಕೆ ಒಳಪಟ್ಟಿವೆ ಎಂದು ಟೀಕಿಸಿದ್ದರು. ಯುರೋಪ್​ನ ಕಾರುಗಳ ಮೇಲೆ ತೆರಿಗೆ ವಿಧಿಸುವುದಾಗಿ ಅಮೆರಿಕ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಈ ಮೂರೂ ದೇಶಗಳು ಇರಾನ್​ನೊಂದಿಗಿನ 2015ರ ಪರಮಾಣು ಒಪ್ಪಂದ ಸಂಬಂಧ ವಿವಾದ ಬಗೆಹರಿಸುವ ವ್ಯವಸ್ಥೆ ರೂಪಿಸಲು ಮಂಗಳವಾರ ನಿರ್ಧರಿಸಿದ್ದವು. ಆ ಕಾರಣಕ್ಕೆ ಅವುಗಳನ್ನು ಖಮೇನಿ ದೂಷಿಸಿದ್ದಾರೆ.

    ‘ಖಮೇನಿ ತನ್ನ ಮಾತುಗಳ ಮೇಲೆ ಹಿಡಿತವಿಟ್ಟುಕೊಳ್ಳಬೇಕು’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಈ ಮಧ್ಯೆ, ಉಕ್ರೇನ್ ವಿಮಾನ ಹೊಡೆದುರಿಳಿಸಿದ್ದು ಆಕಸ್ಮಿಕ ಘಟನೆ. ಇದಕ್ಕೆ ಕೆಲವರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೆ ನೆಪವಾಗಿಟ್ಟುಕೊಂಡು ಇರಾನ್ ಆಂತರಿಕ ವಿಷಯದಲ್ಲಿ ಮೂಗುತೂರಿಸಲು ಯತ್ನಿಸಿದರೆ ಹುಶಾರ್ ಎಂದು ಖಮೇನಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts