More

    ಐಪಿಎಲ್ ಮಿನಿ ಹರಾಜು: ಈ ಬಾರಿ ಮಹಿಳಾ ಹರಾಜುಗಾರ್ತಿ, ರಚಿನ್, ಕೋಟ್ ಜೀ, ಟ್ರಾವಿಸ್ ಹೆಡ್ ಆಕರ್ಷಣೆ

    ಬೆಂಗಳೂರು: ಮುಂದಿನ ವರ್ಷದ ಐಪಿಎಲ್ 17ನೇ ಆವೃತ್ತಿಗೆ ಪೂರ್ವಭಾವಿಯಾಗಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಮಂಗಳವಾರ ಅರಬ್‌ರ ನಾಡು ದುಬೈನಲ್ಲಿ ನಡೆಯಲಿದೆ. ಎಲ್ಲ 10 ್ರಾಂಚೈಸಿಗಳ ಮಾಲೀಕರು ತಮ್ಮ ತಂಡಕ್ಕೆ ಹೆಚ್ಚಿನ ಸಮತೋಲನ ತರಬಲ್ಲ ಆಟಗಾರರ ಹುಡುಕಾಟದಲ್ಲಿವೆ.
    214 ಭಾರತೀಯರು,119 ವಿದೇಶೀಯರ ಸಹಿತ ಒಟ್ಟು 333 ಆಟಗಾರರು ಹರಾಜು ಕಣದಲ್ಲಿದ್ದಾರೆ. ಇದರಲ್ಲಿ 30 ವಿದೇಶಿಯರು ಸೇರಿ ಗರಿಷ್ಠ 77 ಆಟಗಾರರು ಮಾತ್ರ ಸೇಲಾಗುವ ಅವಕಾಶವಿದ್ದು,10 ತಂಡಗಳು ಒಟ್ಟು 262.95 ಕೋಟಿ ರೂ. ಬಜೆಟ್ ಹೊಂದಿವೆ.

    ಈ ಬಾರಿ ಮಹಿಳಾ ಹರಾಜುಗಾರ್ತಿ: 2018 ರಿಂದ ಯಶಸ್ವಿಯಾಗಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಸುಕೊಂಡು ಬಂದಿದ್ದ ಇಂಗ್ಲೆಂಡ್ ಹ್ಯೂ ಎಡ್‌ಮೀಡ್ಸ್ ಈ ಬಾರಿ ಗೈರಾಗುತ್ತಿದ್ದಾರೆ. ಅವರ ಬದಲಿಗೆ ಮಹಿಳಾ ಹರಾಜುಗಾರ್ತಿ ಮಲ್ಲಿಕಾ ಸಾಗರ್ ನಡೆಸಿಕೊಂಡಲಿದ್ದಾರೆ. ಮಹಿಳೆಯರ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಯ ಹರಾಜು ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದ ಮಲ್ಲಿಕಾ ಸಾಗರ್,ಮೊದಲ ಬಾರಿಗೆ ಐಪಿಎಲ್‌ನ ಹರಾಜು ಪ್ರಕ್ರಿಯೆ ನಡೆಸಿಕೊಡಲಿದ್ದಾರೆ. ಇದೇ ಮೊದಲ ಬಾರಿಗೆ ವಿದೇಶದಲ್ಲಿ ಆಯೋಜಿಸಲಾಗಿರುವ ಹರಾಜು ಪ್ರಕ್ರಿಯೆಯಲ್ಲಿ ಚೊಚ್ಚಲ ಬಾರಿಗೆ ಮಹಿಳಾ ಹರಾಜುಗಾರ್ತಿ ಕಾಣಿಸಿಕೊಳ್ಳಲಿದ್ದಾರೆ.

    ರಚಿನ್, ಕೋಟ್ ಜೀ, ಟ್ರಾವಿಸ್ ಹೆಡ್ ಆಕರ್ಷಣೆ: ಏಕದಿನ ವಿಶ್ವಕಪ್‌ನಲ್ಲಿ ಆಲ್ರೌಂಡ್ ನಿರ್ವಹಣೆ ಮೂಲಕ ಗಮನ ಸೆಳೆದಿರುವ ಕಿವೀಸ್‌ನ ಯುವ ಆಲ್ರೌಂಡರ್ ರಚಿನ್ ರವೀಂದ್ರ ಖರೀದಿಗೆ 10 ಪ್ರಾಂಚೈಸಿಗಳ ನಡುವೆ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ದಕ್ಷಿಣ ಆಫ್ರಿಕಾ ವೇಗಿ ಗೆರಾಲ್ಡ್ ಕೋಟ್ ಜೀ ಉತ್ತಮ ಬೇಡಿಕೆ ಕಂಡುಬರುವ ಸಾಧ್ಯತೆಗಳಿವೆ. ಇನ್ನು ಆಸೀಸ್ ತಂಡ ನಾಯಕ ಪ್ಯಾಟ್ ಕಮ್ಮಿನ್ಸ್ ಸೇರ್ಪಡೆಗೆ ಆರ್‌ಸಿಬಿ ಅಥವಾ ಸಿಎಸ್‌ಕೆ ತಂಡ ಪ್ರಯತ್ನ ನಡೆಸಿದರೂ ಅಚ್ಚರಿ ಇಲ್ಲ. ಗಾಯದ ಸಮಸ್ಯೆ ಹಾಗೂ ವೈಯಕ್ತಿಕ ಕಾರಣಗಳಿಂದ ಕಳೆದ ಬಾರಿ ಐಪಿಎಲ್‌ಗೆ ಅಲಭ್ಯರಾಗಿದ್ದ ಕಮ್ಮಿನ್ಸ್ ಈ ಬಾರಿ ಆಸೀಸ್ ತಂಡವನ್ನು ಯಶಸ್ವಿಯಾಗಿ ವಿಶ್ವಚಾಂಪಿಯನ್‌ಪಟ್ಟಕ್ಕೇರಿಸಿದ್ದಾರೆ. ಬೌಲಿಂಗ್ ಜತೆಗೆ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿಯೂ ಉಪಯುಕ್ತ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಆರ್‌ಸಿಬಿಯಿಂದ ಹೊರಬಿದ್ದಿರುವ ಜೋಶ್ ಹ್ಯಾಜಲ್‌ವುಡ್, ವನಿಂದು ಹಸರಂಗ, ಮಿಚೆಲ್ ಸ್ಟಾರ್ಕ್ ಹಾಗೂ ಆಸೀಸ್‌ನ ೈನಲ್ ಹೀರೋ ಟ್ರಾವಿಸ್ ಹೆಡ್ ಗರಿಷ್ಠ 2 ಕೋಟಿ ಮೂಲ ಬೆಲೆ ಹೊಂದಿರುವ ಪ್ರಮುಖ ಆಟಗಾರರೆನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts