More

    ಟ್ರೈಲ್‌ಬ್ಲೇಜರ್ಸ್‌ ಎದುರು ಸೋತರೂ ಫೈನಲ್ ಪ್ರವೇಶಿಸಿದ ವೆಲಾಸಿಟಿ

    ಪುಣೆ: ಹಾಲಿ ಚಾಂಪಿಯನ್ ಟ್ರೈಲ್‌ಬ್ಲೇಜರ್ಸ್‌ ತಂಡದ ಸಂಘಟಿತ ಹೋರಾಟದ ಎದುರು ಸೋಲು ಕಂಡರೂ ವೆಲಾಸಿಟಿ ತಂಡ ರನ್‌ರೇಟ್ ಲೆಕ್ಕಾಚಾರದಲ್ಲಿ ಮುನ್ನಡೆ ಸಾಧಿಸುವ ಮೂಲಕ ಮಹಿಳೆಯರ ಮಿನಿ ಐಪಿಎಲ್ ಖ್ಯಾತಿಯ ವುಮೆನ್ಸ್ ಟಿ20 ಚಾಲೆಂಜ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೇರಿತು. ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ವೆಲಾಸಿಟಿ ಹಾಗೂ ಸೂಪರ್‌ನೋವಾಸ್ ತಂಡಗಳು ಎದುರಾಗಲಿವೆ. ಎಂಸಿಎ ಸ್ಟೇಡಿಯಂನಲ್ಲಿ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ದೀಪ್ತಿ ಶರ್ಮ ಸಾರಥ್ಯದ ವೆಲಾಸಿಟಿ ಸ್ಮತಿ ಮಂದನಾ ನೇತೃತ್ವದ ಟ್ರೈಲ್‌ಬ್ಲೇಜರ್ಸ್‌ ತಂಡಕ್ಕೆ 16 ರನ್‌ಗಳಿಂದ ಶರಣಾಯಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟ್ರೈಲ್‌ಬ್ಲೇಜರ್ಸ್‌, ಆರಂಭಿಕ ಬ್ಯಾಟುಗಾರ್ತಿ ಸಭಿನೆನಿ ಮೇಘನಾ (73 ರನ್, 47 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ಜೆಮೀಮಾ ರೋಡ್ರಿಗಸ್ (66 ರನ್, 44 ಎಸೆತ, 7 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‌ಗೆ 190 ರನ್ ಕಲೆಹಾಕಿತು. ಪ್ರತಿಯಾಗಿ ನಾಗಾಲ್ಯಾಂಡ್‌ನ ಯುವ ಬ್ಯಾಟುಗಾರ್ತಿ ಕಿರಣ್ ಪ್ರಭು ನವ್ಗಿರೆ (69 ರನ್, 34ಎಸೆತ, 5 ಬೌಂಡರಿ, 5 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನಡುವೆಯೂ ವೆಲಾಸಿಟಿ ತಂಡ 9 ವಿಕೆಟ್‌ಗೆ 174 ಮೊತ್ತ ಪೇರಿಸಲಷ್ಟೇ ಶಕ್ತವಾಯಿತು. ವೆಲಾಸಿಟಿ ಕನಿಷ್ಠ 159 ರನ್ ಪೇರಿಸಿದರೂ ಫೈನಲ್‌ಗೇರುವ ಅವಕಾಶ ಹೊಂದಿತ್ತು.

    ಟ್ರೈಲ್‌ಬ್ಲೇಜರ್ಸ್‌: 5 ವಿಕೆಟ್‌ಗೆ 190 (ಎಸ್.ಮೇಘನಾ 73, ರೋಡ್ರಿಗಸ್ 66, ಹ್ಯಾಲಿ ಮ್ಯಾಥ್ಯಸ್ 27, ಸಿಮ್ರಾನ್ ಬಹದೂರ್ 31ಕ್ಕೆ 2, ಕೇಟ್ ಕ್ರಾಸ್ 27ಕ್ಕೆ 1, ಸ್ನೇಹಾ ರಾಣಾ 37ಕ್ಕೆ 1). ವೆಲಾಸಿಟಿ: 9 ವಿಕೆಟ್‌ಗೆ 174 (ಶೆಾಲಿ ವರ್ಮ 29, ಕಿರಣ್ ಪ್ರಭು ನವ್ಗಿರೆ 69, ಪೂನಮ್ ಯಾದವ್ 33ಕ್ಕೆ 2, ರಾಜೇಶ್ವರಿ ಗಾಯಕ್ವಾಡ್ 44ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts