More

    ಸಿಎಸ್‌ಕೆ ಎದುರು ಹೀನಾಯ ಸೋಲು ಕಂಡ ಡೆಲ್ಲಿ ; ಕಠಿಣಗೊಂಡ ಪಂತ್ ಪಡೆಯ ಪ್ಲೇಆಫ್ ಹಾದಿ

    ಮುಂಬೈ: ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಬಳಿಕ ಬೌಲಿಂಗ್‌ನಲ್ಲೂ ಸವಾರಿ ನಡೆಸಿದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಐಪಿಎಲ್-15ರ ತನ್ನ ಔಪಚಾರಿಕ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 91 ರನ್‌ಗಳಿಂದ ಸೋಲಿಸಿತು. ಪ್ಲೇಆಫ್ ಹಂತಕ್ಕೇರಲು ಮಹತ್ವ ಪಡೆದಿದ್ದ ಪಂದ್ಯದಲ್ಲಿ ಮುಗ್ಗರಿಸಿದ ಡೆಲ್ಲಿ ತಂಡದ ಮುಂದಿನ ಹಾದಿ ದುರ್ಗಮಗೊಂಡಿತು. ಸೋಲಿನ ನಡುವೆಯೂ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಕಾಯ್ದುಕೊಂಡ ರಿಷಭ್ ಪಂತ್ ಪಡೆ ಮುಂದಿನ ಮೂರು ಪಂದ್ಯಗಳಲ್ಲಿ ಗೆದ್ದರೂ ಇತರ ಪಂದ್ಯಗಳ ಫಲಿತಾಂಶದ ಮೇಲೆ ಪ್ಲೇಆಫ್ ಭವಿಷ್ಯ ಅಡಗಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಆರಂಭಿಕ ಬ್ಯಾಟರ್‌ಗಳಾದ ಡೆವೊನ್ ಕಾನ್‌ವೇ (87 ರನ್, 49 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್ (41 ರನ್, 33 ಎಸೆತ, 4 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 208 ರನ್ ಪೇರಿಸಿತು. ಪ್ರತಿಯಾಗಿ ಡೆಲ್ಲಿ ತಂಡ 17.4 ಓವರ್‌ಗಳಲ್ಲಿ 117 ರನ್‌ಗಳಿಗೆ ಸರ್ವಪತನ ಕಂಡಿತು.

    ಸಿಎಸ್‌ಕೆ: 6 ವಿಕೆಟ್‌ಗೆ 208 (ಋತುರಾಜ್ ಗಾಯಕ್ವಾಡ್ 41, ಡೆವೊನ್ ಕಾನ್‌ವೇ 87, ಶಿವಂ ದುಬೆ 32, ಎಂಎಸ್ ಧೋನಿ 21*, ಅನ್ರಿಚ್ ನೋಕಿಯ 42ಕ್ಕೆ 3, ಖಲೀಲ್ ಅಹಮದ್ 28ಕ್ಕೆ 2, ಮಿಚೆಲ್ ಮಾರ್ಷ್ 34ಕ್ಕೆ1), ಡೆಲ್ಲಿ ಕ್ಯಾಪಿಟಲ್ಸ್: 17.4 ಓವರ್‌ಗಳಲ್ಲಿ 117 (ಡೇವಿಡ್ ವಾರ್ನರ್ 19, ಮಿಚೆಲ್ ಮಾರ್ಷ್ 25, ರಿಷಭ್ ಪಂತ್ 21, ಶಾರ್ದೂಲ್ ಠಾಕೂರ್ 24, ಮೊಯಿನ್ ಅಲಿ 13ಕ್ಕೆ 3, ಡ್ವೇನ್ ಬ್ರಾವೊ 24ಕ್ಕೆ 2, ಮುಕೇಶ್ ಚೌಧರಿ 22ಕ್ಕೆ 2, ಸಿಮ್ರಾನ್‌ಜಿತ್ ಸಿಂಗ್ 27ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts