More

    ಶತಮಾನದ ಸಂಭ್ರಮಕ್ಕೆ ನೂತನ ಲೋಗೋ ಬಿಡುಗಡೆ ಮಾಡಿದ ಐಒಎ

    ನವದೆಹಲಿ: ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಭಾರತ 100 ವರ್ಷ ಪೂರೈಸಿದ ನೆನಪಿಗಾಗಿ ಭಾರತೀಯ ಒಲಿಂಪಿಕ್ ಸಂಸ್ಥೆ ನೂತನ ಲಾಂಛನ ಬಿಡುಗಡೆ ಮಾಡಿದೆ. ಶತಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಸಿದ್ಧಪಡಿಸಲಾಗಿರುವ ಲೋಗೋಗೆ ಟೀಮ್ ಇಂಡಿಯಾ ಎಂದು ಹೆಸರಿಡಲಾಗಿದೆ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರುವ ಭಾರತೀಯ ಕ್ರೀಡಾಪಟುಗಳ ಕೊಡುಗೆಯನ್ನು ಇದೇ ಸ್ಮರಿಸಲಾಗಿದೆ.

    ಇದನ್ನೂ ಓದಿ: ಮುಂದಿನ ವರ್ಷವೂ ಟೋಕಿಯೊ ಒಲಿಂಪಿಕ್ಸ್ ನಡೆಯುವುದು ಅನುಮಾನ..?

    ಶತಮಾನದ ಸಂಭ್ರಮಕ್ಕೆ ನೂತನ ಲೋಗೋ ಬಿಡುಗಡೆ ಮಾಡಿದ ಐಒಎಭಾರತ 100 ವರ್ಷಗಳಿಂದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಾ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಸ್ಪರ್ಧಿಸುತ್ತಿರುವುದೇ ಹೆಮ್ಮೆಯ ಸಂಗತಿ. ಕ್ರೀಡಾಪಟುಗಳು, ಅಧಿಕಾರಿಗಳ ವರ್ಗದ ಕೊಡುಗೆ ಸಾಕಷ್ಟಿದೆ. ‘ಹೊಸ ಲಾಂಛನ ದೇಶದ ಕ್ರೀಡೆಯ ಮೌಲ್ಯದ ಸಂಕೇತ, ವಿಶ್ವ ಮಟ್ಟದಲ್ಲಿ ಕ್ರೀಡಾಪಟುಗಳು ಮಿಂಚಬೇಕು ಎಂಬುದೇ ನಮ್ಮೆಲ್ಲರ ಉದ್ದೇಶ. ತಿರಂಗ ಮಿಶ್ರಿತ ನೂತನ ಲೋಗೋ ಎಲ್ಲ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ’ ಎಂದು ಐಒಎ ಅಧ್ಯಕ್ಷ ನರೀಂದರ್ ಬಾತ್ರ ಹಾಗೂ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಜಂಟಿ ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ:ಹಾವು ಕಚ್ಚಿದ್ದಕ್ಕೆ ಮದ್ದು ಇದೆ, ತಪ್ಪು ಗ್ರಹಿಕೆಗೆ ಇಲ್ಲ ಎಂದು ಅಫ್ರಿದಿಗೆ ಚಾಟಿ ಬೀಸಿದ ಆಕಾಶ್​ ಚೋಪ್ರಾ!

    ಹಿಂದಿನ ಲೋಗೋ ‘ಸ್ಟಾರ್ ಆ್ ಇಂಡಿಯಾ’ ಬ್ರಿಟಿಷ್ ರಾಜ್ ಕಾಲದಲ್ಲಿ ಅಳವಡಿಸಿಕೊಂಡಿದ್ದು, ಅಂದಿನಿಂದ ಇಂದಿನವರೆಗೂ ಐಒಎ ಸಿಂಬಲ್ ಅದೇ ಆಗಿತ್ತು. ಇದೀಗ ನೂತನ ಲೋಗೋಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅನುಮತಿ ನೀಡಿದ್ದು, ಆಗಸ್ಟ್ 15 ರಂದು ವಿಶೇಷ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

    ಗೆದ್ದ ಪದಕಗಳನ್ನು ಕರೋನಾ ವಾರಿಯರ್ಸ್​ಗೆ ಅರ್ಪಿಸಲು ಮುಂದಾದ ಒಲಿಂಪಿಕ್ಸ್ ಚಾಂಪಿಯನ್ ಕ್ಯಾರೊಲಿನ್ ಮರಿನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts