More

    ಪಾಕ್ ನಾಯಕ ಬಾಬರ್ ಅಜಮ್-ಝಕಾ ಆಶ್ರ್ ವಾಟ್ಸ್ ಆ್ಯಪ್ ಚಾಟ್ ಲೀಕ್: ಆಯ್ಕೆಗಾರ ಇಂಜಮಾಮ್ ರಾಜೀನಾಮೆ

    ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನಕ್ಕೆ ಮೊದಲ ವಿಕೆಟ್ ಪತನಗೊಂಡಿದೆ. ರಾಷ್ಟ್ರೀಯ ತಂಡದ ಮುಖ್ಯ ಆಯ್ಕೆಗಾರ, ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ.
    ಟೂರ್ನಿಯಲ್ಲಿ ಸತತ 4 ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಪಾಕ್ ತಂಡದಲ್ಲಿ ಸ್ವಹಿತಾಸಕ್ತಿಯ ಕಾರಣಕ್ಕೆ ಕೆಲ ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂಬ ಆರೋಪಗಳ ಜತೆಗೆ ಮಾಧ್ಯಮಗಳ ವರದಿಯಂತೆ ಹಿತಾಸಕ್ತಿ ಸಂಘರ್ಷದ ಆರೋಪಗಳ ಬಗ್ಗೆ ತನಿಖೆ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ 5 ಸದಸ್ಯರ ಸತ್ಯ ಶೋಧನಾ ಸಮಿತಿ ರಚಿಸಿದೆ. ಮುಖ್ಯ ಆಯ್ಕೆಗಾರ ಮೇಲೆ ಆರೋಪ ಕೇಳಿ ಬಂದ ಬೆನ್ನಲ್ಲೇ ಇಂಜಮಾಮ್ ರಾಜೀನಾಮೆ ಪತ್ರವನ್ನು ಪಿಸಿಬಿ ಅಧ್ಯಕ್ಷ ಝಾಕ ಆಶ್ರ್ಗೆ ರವಾನಿಸಿದ್ದು, ಸತ್ಯ ಶೋಧನಾ ಸಮಿತಿ ವಿಚಾರಣೆ ನಡೆಸುವವರೆಗೂ ತಂಡದಿಂದ ದೂರವಿರುವುದು ಉತ್ತಮ ಎಂದು ಇಂಜಮಾಮ್ ತಿಳಿಸಿದ್ದಾರೆ.
    ವಾಟ್ಸ್ ಆ್ಯಪ್ ಚಾಟ್ ಲೀಕ್?: ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ ನಾಯಕ ಬಾಬರ್ ಅಜಮ್ ನಾಯಕತ್ವದ ಬಗ್ಗೆ ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಬಾಬರ್ ಅಜಮ್ ಕರೆಗಳನ್ನು ಝಕಾ ಆಶ್ರ್ ಸ್ವೀಕರಿಸುತ್ತಿಲ್ಲ ಎಂಬ ವರದಿಗಳು ಹರಿದಾಡಿದಂತೆ ಪಿಸಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್ ನಸೀರ್ ಮತ್ತು ಬಾಬರ್ ಅಜಮ್ ನಡುವಿನ ವಾಟ್ಸಾಪ್ ಸಂಭಾಷಣೆಯನ್ನು ಖಾಸಗಿ ವಾಹಿನಿ ಸಂವಾದಲ್ಲಿ ಬಹಿರಂಗಪಡಿಸಲಾಗಿದೆ. ಸುದ್ದಿವಾಹಿನಿಗಳಲ್ಲಿ ಬಾಬರ್ ಕರೆಯನ್ನು ಝಕಾ ಆಶ್ರ್ ಸ್ವೀಕರಿಸುತ್ತಿಲ್ಲ ಎಂಬ ವರದಿ ಪ್ರಸಾರವಾಗಿತ್ತಿದ್ದು ನೀವು ಸಂಪರ್ಕಿಸಲು ಪ್ರಯತ್ನಿಸಿದಿರೇ ? ಎಂಬ ಪ್ರಶ್ನೆಗೆ ‘ನಾನು ಯಾರಿಗೂ ಕರೆ ಮಾಡಿಲ್ಲ’ ಎಂದು ಬಾಬರ್ ಉತ್ತರಿಸಿರುವ ಚಾಟ್ ಎಲ್ಲೆಡೆ ವೈರಲ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts