More

    ಕರೊನಾ ವೈರಸ್​ ಸೋಂಕಿನ ಪರಿಣಾಮ, 17 ವರ್ಷಗಳ ಕನಿಷ್ಠಮಟ್ಟಕ್ಕೆ ಕುಸಿದ ಜಾಗತಿಕ ತೈಲ ದರ

    ನವದೆಹಲಿ: ಕರೊನಾ ವೈರಸ್​ ಸೋಂಕು ಜಗತ್ತಿನಾದ್ಯಂತ ತನ್ನ ತಾಂಡವ ನೃತ್ಯ ಮುಂದುವರಿಸಿರುವಂತೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಉಂಟಾಗಿದೆ. ಸೋಮವಾರದ ವಹಿವಾಟಿನಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್​ಗೆ 23.28 ಡಾಲರ್​ಗೆ ಕುಸಿದಿದೆ. 17 ವರ್ಷಗಳ ಕನಿಷ್ಠ ಮಟ್ಟ ಇದಾಗಿದೆ.

    ಕರೊನಾ ವೈರಸ್​ ಸೋಂಕಿನ ನಡುವೆ ರಷ್ಯಾ ಹಾಗೂ ಸೌದಿ ಅರೇಬಿಯಾ ನಡುವೆ ಕಚ್ಚಾ ತೈಲ ಉತ್ಪಾದನೆ ವಿಷಯವಾಗಿ ಶೀತಲ ಸಮರ ನಡೆಯುತ್ತಿರುವುದು ಕಚ್ಚಾ ತೈಲ ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗಿದೆ.

    ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರಂತರವಾಗಿ ಇಳಿಕೆಯಾಗಲಾರಂಭಿಸಿದ ಹಿನ್ನೆಲೆಯಲ್ಲಿ ಭಾರತದಲ್ಲಿ ಮಾ.16ರಿಂದ ಪೆಟ್ರೋಲ್​ ಮತ್ತು ಡೀಸೆಲ್​ ದರಗಳನ್ನು ತಟಸ್ಥಗೊಳಿಸಲಾಗಿದೆ. ಈ ಬೆಲೆಗಳ ಮೇಲೆ ಕೇಂದ್ರ ಸರ್ಕಾರ ಈಗಾಗಲೆ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಇದೀಗ ಕರೊನಾ ವಿರುದ್ಧದ ಹೋರಾಟಕ್ಕೆ 1.70 ಲಕ್ಷ ಕೋಟಿ ರೂ. ಪರಿಹಾರ ಮೊತ್ತ ಘೋಷಿಸಿರುವ ಹಿನ್ನೆಲೆಯಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ಅಬಕಾರಿ ಸುಂಕವನ್ನು ಮತ್ತೊಂದು ಸುತ್ತು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts