More

    ರಾಷ್ಟ್ರೀಯ- ಅಂತಾರಾಷ್ಟ್ರೀಯ ಕುಸ್ತಿ ಪ್ರದರ್ಶನ ಪಂದ್ಯ ಮಾ.5ರಂದು

    ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಶ್ರೀ ರಂಭಾಪುರ ಜಗದ್ಗುರು ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ಜರುಗುತ್ತಿರುವ ತೃತೀಯ ಕರ್ನಾಟಕ ಕುಸ್ತಿ ಹಬ್ಬದ ಸಮಾರೋಪ ಸಮಾರಂಭ ಮಾ.5ರಂದು ಸಂಜೆ 4 ಗಂಟೆಗೆ ಜರುಗಲಿದೆ. ಸಮಾರೋಪದ ಅಂಗವಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕುಸ್ತಿ ಪಟುಗಳಿಂದ ಪ್ರದರ್ಶನ ಪಂದ್ಯ ಆಯೋಜಿಸಲಾಗಿದೆ.
    ಓಲಿಂಪಿಕ್ ಕುಸ್ತಿ ಪದಕ ವಿಜೇತೆ ಅಂಗೇರಿಯ ಪೈಲ್ವಾನ್ ನೇಮಿತ ಜಸ್ಮಿತ್ ಜತೆ ವಿಶ್ವ ಕುಸ್ತಿ ಪದಕ ವಿಜೇತೆ ಪೈಲ್ವಾನ್ ಲಲಿತಾ ಶೆರವಾತ್ ಜೋಡಿ ಕುಸ್ತಿ ಪಂದ್ಯ ಹಾಗೂ ವಿಶ್ವ ಕುಸ್ತಿ ಪದಕ ವಿಜೇತರಾದ ಪೈಲ್ವಾನ್ ಅನಸ್ತಾನಾ ಉಕ್ರೇನ್ ಜತೆ ಪೈಲ್ವಾನ್ ಪ್ರಿಯಾ ಹರಿಯಾಣ ಜೋಡಿ ಕುಸ್ತಿ ಹಾಗೂ ಪೈಲ್ವಾನ್ ತೇತಿನಾ ಉಕ್ರೇನ್ ಜತೆ ಹರಿಯಾಣದ ಪೈಲ್ವಾನ್ ಕವಿತಾ ಪರಮಾರಾ ಜೋಡಿ ಪ್ರದರ್ಶನ ಕುಸ್ತಿ ಪಂದ್ಯ ಜರುಗಲಿವೆ.
    ಅಂತಾರಾಷ್ಟ್ರೀಯ ಕುಸ್ತಿಪಟು ಪೈಲ್ವಾನ್ ಹುಸೇನ್ ರುಸ್ತುಂ ಎ. ಇರಾನ್, ಭಾರತ ಕೇಸರಿ ಹರಿಯಾಣದ ಪೈಲ್ವಾನ್ ಉಮೇಶ ಚೌಧರಿ, ಮಧುರಾ ಚೌಧರಿ ಜೋಡಿ, ಅಂತಾರಾಷ್ಟ್ರೀಯ ಕೇಸರಿ ಸೊಲ್ಲಾಪುರದ ಪೈಲ್ವಾನ್ ಮಹೇಂದ್ರ ಗಾಯಕವಾಡ, ಭಾರತ ಕೇಸರಿ ಹರಿಯಾಣದ ಪೈಲ್ವಾನ್ ಮಂಜೀತ್ ಐತ್ರಿ ಜೋಡಿ, ಪಂಜಾಬ ಕೇಸರಿ ಪೈಲ್ವಾನ್ ಕವಲಜೀತ್ ಸಿಂಗ್ ಹಾಗೂ ರಾಷ್ಟ್ರೀಯ ಚಾಂಪಿಯನ್ ಮಹಾರಾಷ್ಟ್ರದ ಪೈಲ್ವಾನ್ ಸಿಕಂದರ್ ಶೇಖ್ ಜೋಡಿ, ಇರಾನಿ ರಾಷ್ಟ್ರೀಯ ಚಾಂಪಿಯನ್ ಪೈಲ್ವಾನ್ ಆಲಿ ಮೇಹರಿ ಇರಾನ್ ಹಾಗೂ ಮಹಾರಾಷ್ಟ್ರದ ಪೈಲ್ವಾನ್ ಸಾಗರ ಬಿರಾಜಾದಾರ ಜೋಡಿ, ಭಾರತ ಕೇಸರಿ ಸೌವಾರ್ ಕುಸ್ತಿ ಅಖಾಡದ ಪೈಲ್ವಾನ್ ಸೋನು ದೆಹಲಿ ಹಾಗೂ ರಾಷ್ಟ್ರೀಯ ಬಂಗಾರ ಪದಕ ವಿಜೇತ ಪೈಲ್ವಾನ್ ಮೌಲ್ವಿ ಕೊಕಾಟೆ ಜೋಡಿ ಪ್ರದರ್ಶನ ಕುಸ್ತಿ ಪಂದ್ಯ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts