More

    ಆರೆಸ್ಸೆಸ್ ನಾಯಕರು, ಕಚೇರಿಗಳ ಮೇಲೆ ಐಇಡಿ, ವಿಬಿಐಇಡಿಗಳ ಮೂಲಕ ದಾಳಿ ಸಾಧ್ಯತೆ: ಎಚ್ಚರಿಕೆ ಸಂದೇಶ ರವಾನಿಸಿದ ಗುಪ್ತಚರ ಇಲಾಖೆ

    ನವದೆಹಲಿ: ದೇಶದ ವಿವಿಧೆಡೆ ಇರುವ ಆರೆಸ್ಸೆಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ನಾಯಕರು ಮತ್ತು ಕಚೇರಿಗಳ ಮೇಲೆ ಜಾಗತಿಕ ಮಟ್ಟದ ಭಯೋತ್ಪಾದಕ ಗುಂಪುಗಳು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಇಂಟೆಲಿಜೆನ್ಸ್ ಬ್ಯೂರೋ ಇತ್ತೀಚಿನ ಮಾಹಿತಿ ಆಧರಿಸಿ ಎಚ್ಚರಿಸಿದೆ.

    ಈ ಉಗ್ರರು ಐಇಡಿಗಳನ್ನು ಅಥವಾ ವೆಹಿಕಲ್ ಬೋರ್ನ್​ ಇಂಪ್ರೂವೈಸ್ಡ್​​ ಐಇಡಿ(VBIEDs)ಗಳನ್ನು ಬಳುಸುವ ಸಾಧ್ಯತೆ ಇದೆ. ಸಂಭಾವ್ಯ ದಾಳಿಗಳು ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ ಮತ್ತು ಇತರೆ ಕಡೆಗಳಲ್ಲಿ ನಡೆಯುವ ಸಾಧ್ಯತೆ ಇದೆ.

    ಗುಪ್ತಚರ ಮಾಹಿತಿ ಪ್ರಕಾರ, ಜಾಗತಿಕ ಉಗ್ರ ಸಂಘಟನೆಗಳ ಜತೆಗೆ ಸಂಪರ್ಕ ಹೊಂದಿರುವ ಅನಾಮಧೇಯ ವ್ಯಕ್ತಿಗಳು ಆರೆಸ್ಸೆಸ್​ ನಾಯಕರನ್ನು, ಕಚೇರಿಗಳನ್ನು ಮತ್ತು ಪೊಲೀಸ್ ಠಾಣೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದು. ಇದಕ್ಕಾಗಿ ಆ ಉಗ್ರರು ಮುಂಬರುವ ದಿನಗಳಲ್ಲಿ ಐಇಡಿಗಳನ್ನು ಮತ್ತು ವಿಬಿಐಡಿಗಳನ್ನು ಬಳಸಬಹುದು. ಎಲ್ಲ ರಾಜ್ಯ ಸರ್ಕಾರಗಳು ಈ ಬಗ್ಗೆ ನಿಗಾವಹಿಸಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಇರುವ ಪೊಲೀಸ್ ಠಾಣೆ, ಆರೆಸ್ಸೆಸ್​ ಕಚೇರಿಗಳಿಗೆ ಬಿಗಿ ಭದ್ರತೆ ಒದಗಿಸಬೇಕು ಎಂದು ಸಲಹೆ ನೀಡಿದೆ.
    ಈ ನಿಟ್ಟಿನಲ್ಲಿ ಮಹಾರಾಷ್ಟ್ರ, ದೆಹಲಿ, ಪಂಜಾಬ್​, ರಾಜಸ್ಥಾನ, ಉತ್ತರ ಪ್ರದೇಶ, ಅಸ್ಸಾಂಗಳಲ್ಲಿ ಈ ಬಗ್ಗೆ ನಿಗಾವಹಿಸಲಾಗಿದ್ದು, ಪದಾಧಿಕಾರಿಗಳಿಗೆ ರಕ್ಷಣೆ ಒದಗಿಸುವ ವಿಚಾರ ಪರಿಶೀಲನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

    ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಅನೇಕ ಬಾರಿ ದಾಳಿಗಳಾದ ಉದಾಹರಣೆಗಳಿವೆ. ಕಳೆದ ತಿಂಗಳು ಬೆಂಗಳೂರು ಪೊಲೀಸರು ಆರೆಸ್ಸೆಸ್​ ಕಾರ್ಯಕರ್ತನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲು ಯತ್ನಿಸಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಡಿಸೆಂಬರ್​ನಲ್ಲಿ ಸಿಎಎ ಪರ ಜಾಗೃತಿ ಸಮಾವೇಶ ನಡೆದಾಗ ಈ ದಾಳಿ ಯತ್ನ ಆಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

    ಆರೋಪಿಗಳನ್ನು ಮೊಹಮ್ಮದ್ ಇರ್ಫಾನ್​, ಸೈಯದ್ ಅಕ್ಬರ್​, ಸೈಯದ್ ಸಿದ್ಧಿಕ್​ ಅಕ್ಬರ್, ಅಕ್ಬರ್ ಬಾಷಾ, ಸನಾವುಲ್ಲಾ ಶರೀಫ್, ಸಾದಿಕ್ ಅಲ್ ಅಮೀನ್ ಎಂದು ಗುರುತಿಸಲಾಗಿದ್ದು, ಇದರ ಹಿಂದೆ ದೊಡ್ಡ ಪಿತೂರಿಯೇ ಇದೆ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts