More

    ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ

    ಎಚ್.ಡಿ. ಕೋಟೆ: ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆಯನ್ನು ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಇಲಾಖೆಯ ವಿಸ್ತರಣಾಧಿಕಾರಿ ಪರಶಿವಮೂರ್ತಿ ಹೇಳಿದರು.

    ವಿಮಾ ಸೌಲಭ್ಯವು ಆಕಸ್ಮಿಕ ಅವಘಡಗಳು ಸಂಭವಿಸಿದ ಸಂದರ್ಭ ನೆರವಿಗೆ ಬರುತ್ತದೆ. ಈ ಯೋಜನೆಯೂ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಪ್ರೀಮಿಯಂ ಪಾವತಿಸುವ ಅವಶ್ಯಕತೆ ಇರುವುದಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸ್ವಿಗ್ಗಿ, ಜೊಮೊಟೊ ಸೇರಿದಂತೆ ಇತರ ಡೆಲಿವರಿ ಬಾಯ್‌ಗಳಾಗಿ ಅಸಂಘಟಿತ ವಲಯಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಯೋಜನೆಯ ಸೌಲಭ್ಯ ಪಡೆಯಬಹುದು ಎಂದರು.

    ಈ ಯೋಜನೆಯಲ್ಲಿ ಅಪಘಾತದಿಂದ ಮರಣ ಹೊಂದಿದವರಿಗೆ ಒಟ್ಟು ನಾಲ್ಕು ಲಕ್ಷ ಪರಿಹಾರ ಮೊತ್ತ ಲಭಿಸಲಿದೆ. ಶಾಶ್ವತ ದುರ್ಬಲತೆ ಹೊಂದಿದವರಿಗೆ ಎರಡು ಲಕ್ಷ ರೂ.ವರೆಗೆ ಆಸ್ಪತ್ರೆ ವೆಚ್ಚ ಲಭಿಸಲಿದೆ. 18ರಿಂದ 60 ವರ್ಷದೊಳಗಿನವರು ಈ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಬಹುದು ಎಂದರು.
    ವಿಮೆ ಮಾಡಿಸಲು ಆಧಾರ್, ವೃತ್ತಿ ನಿರ್ವಹಿಸುತ್ತಿರುವ ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ ಅಥವಾ ವೇತನ ಚೀಟಿ, ಇ-ಶ್ರಮ ನೋಂದಣಿ ಮಾಡಿಸಿದ್ದಲ್ಲಿ ಇ-ಶ್ರಮ ನೋಂದಣಿ ಸಂಖ್ಯೆ ಅವಶ್ಯ ಎಂದು ತಿಳಿಸಿದರು.

    ಜ.12 ರಂದು ಪಟ್ಟಣದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾ ವಿತರಕರಿಗೆ ಈ ಯೋಜನೆಯ ನೋಂದಣಿಯನ್ನು ಹಮ್ಮಿಕೊಂಡಿದ್ದು, ಅರ್ಹರು ಯೋಜನೆಯ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

    ಪತ್ರಕರ್ತರ ಸಂಘದ ಅಧ್ಯಕ್ಷ ಬೀಚನಹಳ್ಳಿ ಮಂಜು, ಉಪಾಧ್ಯಕ್ಷ ಎಡತೊರೆ ಮಹೇಶ್, ಖಜಾಂಚಿ ಮಂಜು ಕೋಟೆ, ಪ್ರಧಾನ ಕಾರ್ಯದರ್ಶಿ ನಾಗರಾಮ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts