More

    ಜಾನಪದಕ್ಕಿದೆ ಆತ್ಮಸ್ಥೈರ್ಯ ಇಮ್ಮಡಿಸುವ ಶಕ್ತಿ

    ಚಿತ್ರದುರ್ಗ: ಜಾನಪದ ಕಲೆಗಳಿಗೆ ಜೀವನ ಬದಲಾಯಿಸುವ, ನೋವು ನಿವಾರಿಸುವ ಹಾಗೂ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಶಕ್ತಿಯಿದೆ ಎಂದು ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ರಾಜ್ಯಸಂಚಾಲಕ ಜಗದೀಶ್ ಹಿರೇಮನಿ ಹೇಳಿದರು.

    ಜಿಲ್ಲಾಡಳಿತದಿಂದ ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ, ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ-ನಶಿಸಿ ಹೋಗುತ್ತಿರುವ ತಳ ಸಮುದಾಯಗಳ ವಿಶಿಷ್ಟ ಕಲೆಗಳ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

    ಜಾನಪದ ಸಾಹಿತ್ಯ ಜೀವನ ಮೌಲ್ಯಗಳನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ತಿಳಿಸುತ್ತಿದೆ. ನಶಿಸುತ್ತಿರುವ ಈ ಕಲೆಗಳನ್ನು ರಕ್ಷಿಸಬೇಕಿದೆ. ಈ ನೆಲದ ಮೂಲ ಸಂಸ್ಕೃತಿಯ ಬೇರಿನ ಮೇಲೆ ಭವ್ಯಭಾರತ ನಿರ್ಮಾಣವಾಗಿದೆ ಎಂದರು.

    ಆಸಕ್ತರಿಗೆ 20 ದಿನಗಳ ತರಬೇತಿ ಕಾರ‌್ಯಾಗಾರ ಏರ್ಪಡಿಸಲಾಗಿದೆ. 21 ಜಿಲ್ಲೆಗಳಲ್ಲಿ 155 ಜಾನಪದ ಶಿಕ್ಷಕರು, 62 ತಂಡಗಳಲ್ಲಿ 1550 ಕಲಾವಿದರಿಗೆ 150 ಜಾನಪದ ಕಲಾ ಪ್ರಕಾರಗಳ ತರಬೇತಿ ನೀಡಿದ್ದಾರೆ ಎಂದು ಹೇಳಿದರು.

    ಪಾಳೇಗಾರರ ಕಾಲದಿಂದಲೂ ಚಿತ್ರದುರ್ಗ ಜಿಲ್ಲೆ ವಿಶಿಷ್ಟ ಜಾನಪದ ಕಲೆಗಳಿಗೆ ಹೆಸರಾಗಿದೆ. ಖಾಸಾ ಬೇಡರ ಪಡೆ, ಹಗಲು ವೇಷ, ಸೋಬಾನೆ ಪದ, ಜಡೆಕೋಲು ಪ್ರದರ್ಶನ, ತಮಟೆ ಚರ್ಮವಾದ್ಯಗಳ ಬಗ್ಗೆ ನುರಿತ ಜಾನಪದ ಕಲಾವಿದರು ಜಿಲ್ಲೆಯಲ್ಲಿ ತರಬೇತಿ ನೀಡಿ ದ್ದಾರೆ. ಉತ್ತಮ ಪ್ರದರ್ಶನ ನೀಡುವ ಎರಡು ತಂಡಗಳನ್ನು ರಾಜ್ಯಮಟ್ಟದ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುವುದು ಎಂದರು.

    ಉಪನ್ಯಾಸ ನೀಡಿದ ಶಿಕ್ಷಕಿ ಗೀತಾ ಭರಮಸಾಗರ ಅವರು, ವಿಶ್ವ ಸಂಸ್ಕೃತಿಗೆ ಕರ್ನಾಟಕದ ಜಾನಪದ ಕಲೆಗಳು ನಾಡಿನ ಸಾಂಸ್ಕೃತಿಕ ಶ್ರೀ ಮಂತಿಕೆ ಹೆಚ್ಚಿಸಿವೆ. ಗ್ರಾಮೀಣ ಕಲಾವಿದರನ್ನು ಮುಖ್ಯವಾಹಿನಿಗೆ ತರಬೇಕು. ತಳ ಸಮುದಾಯಗಳ ಕಲೆಗಳು ವಂಶ ಪಾರಂಪರ‌್ಯವಾಗಿ ಮುಂದುವರೆದುಕೊಂಡು ಬಂದಿವೆ. ಗ್ರಾಮೀಣ ಮಹಿಳೆಯರು ಜಾನಪದ ಕಲೆಗಳ ರಾಯಭಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

    ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿ ಕಾರ್ಜುನ, ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ ಜಿಲ್ಲಾ ಸಂಚಾಲಕಿ ಭಾರ್ಗವಿ ದ್ರಾವಿಡ, ಜಿಲ್ಲಾ ಸಂಚಾಲಕ ಹುಲ್ಲೂರು ಎ.ಕೃಷ್ಣಪ್ಪ, ಕಲಾವಿದ ರಾದ ಡಿ.ಒ.ಮುರಾರ್ಜಿ, ಎಚ್.ನಿಂಗಪ್ಪ, ಶ್ರೀನಿವಾಸ್, ಗಂಗಣ್ಣ, ಮಾರಕ್ಕ, ಗೌರಮ್ಮ, ಕೃಷ್ಣಣ್ಣ, ಜಿ.ಬಿ ನಿಂಗರಾಜು ಹಾಗೂ ಅಧಿಕಾರಿ ಗಳಿದ್ದರು. ಕಲಾವಿದ ಹರೀಶ್ ನಿರೂಪಿಸಿದರು.

    ವೇದಿಕೆ ಕಾರ‌್ಯಕ್ರಮಕ್ಕೂ ಮುನ್ನ ಡಿಸಿ ಕಚೇರಿಯಿಂದ ರಂಗಮಂದಿರದವರೆಗೆ ಮೆರವಣಿಗೆ ಏರ್ಪಡಿಸಲಾಗಿತ್ತು. ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಇದ್ದರು. ಮೆರವಣಿಗೆ ವೀರವನಿತೆ ಒನಕೆ ಓಬವ್ವ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮದಕರಿ ವೃತ್ತಗಳ ಮೂಲಕ ರಂಗಮಂದಿರ ತಲುಪಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts