More

    ರೇಷ್ಮೆ ಬೆಳೆಗಾರರಿಗೆ ಅನ್ಯಾಯ : ಮೈಸೂರಿನಲ್ಲಿ ಏ.19 ರಂದು ಪ್ರತಿಭಟನೆ

    ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ರೇಷ್ಮೆ ಮಾರುಕಟ್ಟೆಯಲ್ಲಿ ದಲ್ಲಾಳಿಗಳೊಂದಿಗೆ ಅಧಿಕಾರಿಗಳು ಶಾಮೀಲಾಗಿರುವ ಹಿನ್ನೆಲೆಯಲ್ಲಿ ರೇಷ್ಮೆ ಬೆಳೆಗಾರರಿಗೆ ರೇಷ್ಮೆಗೂಡಿನ ದರದಲ್ಲಿ ಅನ್ಯಾಯವಾಗುತ್ತಿದ್ದು, ಈ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಏ.19 ಮತ್ತು 20 ರಂದು ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ರೈತ ಮುಖಂಡ ವಿದ್ಯಾಸಾಗರ್ ತಿಳಿಸಿದರು.

    ಏ.19 ರಂದು ನಗರದ ರೇಷ್ಮೆ ಮಾರುಕಟ್ಟೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ನಮ್ಮ ಮನವಿಗೆ ಸ್ಪಂದನೆ ದೊರೆಯದೆ ಇದ್ದರೆ ಏ.20 ರಂದು ನಗರದ ಎಪಿಎಂಸಿಯನ್ನು ಸಂಪೂರ್ಣ ಬಂದ್ ಮಾಡಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

    ರೇಷ್ಮೆ ಮಾರುಕಟ್ಟೆಯಲ್ಲಿ ವೈಜ್ಞಾನಿಕವಾಗಿ ರೇಷ್ಮೆಗೂಡಿನ ಪರಿಶೀಲನೆ ನಡೆಯುತ್ತಿಲ್ಲ. ಗೂಡಿನ ಗುಣಮಟ್ಟದ ಆಧಾರದ ಮೇಲೆ ಆನ್‌ಲೈನ್‌ನಲ್ಲಿ ಇರುವ ದರ ನಿಗದಿ ಆಗುತ್ತಿಲ್ಲ. ದಲ್ಲಾಳಿಗಳು ಹಾಗೂ ಅಧಿಕಾರಿಗಳು ಮೊದಲೇ ಶಾಮೀಲಾಗಿ ತಮ್ಮ ಮನಸೋ ಇಚ್ಛೆ ದರ ನಿಗದಿ ಮಾಡುತ್ತಿದ್ದಾರೆ. ರಾಮನಗರ ಮಾರುಕಟ್ಟೆಯಲ್ಲಿ ಅತಿ ಕಳಪೆ ಗೂಡಿಗೆ ಉತ್ತಮ ದೊರೆಯುತ್ತಿದೆ. ಆದರೆ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಉತ್ತಮ ಗುಣಮಟ್ಟದ ರೇಷ್ಮೆ ಗೂಡುಗಳಿಗೂ ರಾಮನಗರ ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಗೂಡಿಗೆ ನೀಡುತ್ತಿರುವಷ್ಟು ದರವೂ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಮೊದಲನೇ ಹರಾಜು ದರಕ್ಕೆ ಒಪ್ಪದ ರೈತರು ಎರಡನೇ ಹರಾಜಿಗೆ ಕಾದು ಕುಳಿತರೆ ದಲ್ಲಾಳಿಗಲು ಎರಡನೇ ಹರಾಜಿನಲ್ಲಿ ಮೊದಲ ಹರಾಜಿಗಿಂತ ಕೆ.ಜಿ.ಗೆ 15 ರಿಂದ 30 ರೂ. ಕಡಿಮೆ ದರಕ್ಕೆ ಕೂಗುತ್ತಿದ್ದಾರೆ. ಅಧಿಕಾರಿಗಳನ್ನು ಪ್ರಶ್ನಿಸಿದಲ್ಲಿ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿದೆ ಹೋದರೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಮಂಜು ಕಿರಣ್, ಇಮ್ಮಾವು ರಘು, ವೆಂಕಟೇಶ್, ಮಾದೇಶ್, ವರಕೋಡು ಕೃಷ್ಣೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts