More

    ಜಿಲ್ಲೆಯ 160 ಶಿಕ್ಷಕರಿಗೆ ಅನ್ಯಾಯ

    ಗದಗ: ಪ್ರಾಥಮಿಕ ಶಾಲೆಯಲ್ಲಿ 10-15 ವರ್ಷ ಸೇವೆ ಸಲ್ಲಿಸಿ ಅರ್ಹತೆ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ಹೊಂದಿದರೂ ಹಿಂದಿನ ಸೇವೆಯನ್ನು ಪರಿಗಣಿಸದಿರುವುದರಿಂದ ಅನೇಕ ಶಿಕ್ಷಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆ ಸರಿಪಡಿಸುವಂತೆ ಹಲವಾರು ಸಲ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯ ವಿವೇಕಾನಂದಗೌಡ ಪಾಟೀಲ ಹೇಳಿದರು.

    ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ರಾಜ್ಯ ಬಡ್ತಿ ಪ್ರೌಢಶಾಲಾ ಶಿಕ್ಷಕರ ಸಂಘದ ಸಭೆಯಲ್ಲಿ ಅವರು ಮಾತನಾಡಿದರು. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಹೊಂದಿರುವ ಜಿಲ್ಲೆಯ 160 ಶಿಕ್ಷಕರಿಗೆ ಅನ್ಯಾಯ ವಾಗಿದೆ. ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಬದಲಾವಣೆಯಾಗಬೇಕಾಗಿದೆ. ಸಂಘಟನಾತ್ಮಕವಾಗಿ ಅಹವಾಲುಗಳನ್ನು ಸಲ್ಲಿಸಿ ಸರಿಪಡಿಸಬೇಕೆಂದು ಒತ್ತಾಯಿಸಬೇಕಾಗಿದೆ ಎಂದರು. ಜಿಲ್ಲಾ ಸಹಶಿಕ್ಷಕರ ಸಂಘದ ಗೌರವ ಕಾರ್ಯದರ್ಶಿ ಪಿ.ಎಚ್. ಕಡಿವಾಲ ಮಾತನಾಡಿ, ಶಿಕ್ಷಕರ ಸಂಘಟನೆ ಬೇರೆ ಯಾದರೂ ಶಿಕ್ಷಕರು ಒಂದೇ ಆಗಿರುವಾಗ ಸಹಶಿಕ್ಷಕರ ಸಂಘದ ಬೆಂಬಲ ಸದಾ ಬಡ್ತಿ ಸಂಘಕ್ಕೆ ಇದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಗೌರವಾಧ್ಯಕ್ಷ ಸಿ.ಬಿ. ಮಾಳಗಿ ಮಾತನಾಡಿದರು. ಸಂಘದ ಮುಂಡರಗಿ ತಾಲೂಕು ಅಧ್ಯಕ್ಷ ಪಿ.ಜಿ.ಹಿರೇಮಠ, ನರಗುಂದ ತಾಲೂಕು ಅಧ್ಯಕ್ಷ ಐ.ಎಸ್.ಅಂಕಲಿ, ಗದಗ ಗ್ರಾಮೀಣ ಅಧ್ಯಕ್ಷ ಶಾಂತಕುಮಾರ ಭಜಂತ್ರಿ, ರೋಣದ ಐ.ಎಸ್. ಮಾದರ ಮಾತನಾಡಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ಯು.ಎಂ.ಹಾದಿಮನಿ ಅವರನ್ನು ಸನ್ಮಾನಿಸಲಾಯಿತು. ಸಿ.ಜಿ. ಹಿರೇಮಠ, ಅಶೋಕ ಹಾದಿ, ಶಿವಾನಂದ ಗಿಡ್ನಂದಿ, ವೈ.ಎ. ಕವಳಿ, ವಿ.ಎಲ್. ಪೂಜಾರ, ಪಿ.ವಿ. ಇನಾಮದಾರ, ಆರ್.ಜಿ. ಕವಲಗೇರಿ, ಎಂ.ಎ. ಹೊಸಮನಿ, ಬಿ.ಎ. ಹಿರೇಗೌಡರ, ಎಚ್.ಡಿ. ಬಂಡಿವಡ್ಡರ, ಎಸ್.ಸಿ. ಲಮಾಣಿ, ಎಸ್.ಎಸ್. ಪಾಟೀಲ, ಕೆ.ಎನ್. ಶಿರಬಡಗಿ ಇತರರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts