More

    ಕಾಂಗ್ರೆಸ್​ನಿಂದ ದಲಿತರಿಗೆ ಅನ್ಯಾಯ

    ಕೋಲಾರ: ದಲಿತ ಪರ ಎನ್ನುವ ಕಾಂಗ್ರೆಸ್​ ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ಅವರಿಗೆ ಅನ್ಯಾಯ ಮಾಡಿದ್ದರ ಜತೆಗೆ ದಲಿತರನ್ನು ಮತಬ್ಯಾಂಕ್​ ಮಾಡಿಕೊಂಡು ಶೋಷಿಸುತ್ತ ಬಂದಿದೆ. ಇನ್ನಾದರೂ ತುಳಿತಕ್ಕೆ ಒಳಗಾಗಿರುವ ಸಮುದಾಯ ಎಚ್ಚೆತ್ತುಕೊಂಡು ದಲಿತರಿಗೆ ನ್ಯಾಯ ಒದಗಿಸುತ್ತಿರುವ ಬಿಜೆಪಿ ಬೆಂಬಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಆರ್​.ವರ್ತೂರು ಪ್ರಕಾಶ್​ ತಿಳಿಸಿದರು.
    ನಗರದ ಅಂಬೇಡ್ಕರ್​ ನಗರದಲ್ಲಿ ಸೋಮವಾರ ರೋಡ್​ ಶೋ ಮತ್ತು ಮನೆ ಮನೆ ಪ್ರಚಾರ ನಡೆಸಿದ ನಂತರ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು. ಸ್ವಾತಂತ್ರ ಕಾಲದಿಂದಲೂ ಕಾಂಗ್ರೆಸ್​ ದಲಿತರಿಗೆ ಅನ್ಯಾಯ ಮಾಡುತ್ತ ಬಂದಿದೆ. ಅಂಬೇಡ್ಕರ್​ರನ್ನು ಚುನಾವಣೆಯಲ್ಲಿ 2 ಬಾರಿ ಸೋಲಿಸಿದ ಕಾಂಗ್ರೆಸ್​ ಅವರು ಮೃತಪಟ್ಟಾಗ ದೆಹಲಿಯಲ್ಲಿ ಅಂತ್ಯಸಂಸ್ಕಾರಕ್ಕೆ ಕೂಡ ಜಾಗ ಕೊಡಲಿಲ್ಲ. ದಲಿತರು, ಬಡವರ ಮೂಗಿಗೆ ಚುನಾವಣೆ ಸಂದರ್ಭ ತುಪ್ಪ ಸವರಿ ಮತ ಪಡೆದು ವಂಚಿಸುತ್ತ ಬಂದಿದೆ. ಇನ್ನಾದರೂ ಸಮುದಾಯ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
    ರಾಜ್ಯದಲ್ಲಿ ಕಾಂಗ್ರೆಸ್​ ಟಾನುಟಿ ನಾಯಕರು ಮಲ್ಲಿಕಾರ್ಜುನ ರ್ಖಗೆ, ಡಾ.ಜಿ.ಪರಮೇಶ್ವರ್​, ಶ್ರೀನಿವಾಸ ಪ್ರಸಾದ್​, ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿ ಅವರು ಮುಖ್ಯಮಂತ್ರಿಗಳಾಗುವುದನ್ನು ತಪ್ಪಿಸಿದರು. ಆದರೆ ಬಿಜೆಪಿ ಡಿಸಿಎಂ ಆಗಿ ಗೋವಿಂದ ಕಾರಜೋಳ, ಎಂಎಲ್ಸಿಯಾಗಿ ಛಲವಾದಿ ನಾರಾಯಣಸ್ವಾಮಿ, ಸಚಿವರನ್ನಾಗಿ ಆನೇಕಲ್​ನ ಎ.ನಾರಾಯಣಸ್ವಾಮಿ ಅವರನ್ನು ಮಾಡಿ ನ್ಯಾಯ ಒದಗಿಸಿದೆ. ಸಾಮಾನ್ಯ ಕುಟುಂಬದ ಎಸ್​.ಮುನಿಸ್ವಾಮಿ ಅವರನ್ನು ಸಂಸದರನ್ನಾಗಿಸಿದೆ. ಕಾಂಗ್ರೆಸ್​ ಎಷ್ಟು ಮಂದಿ ದಲಿತರನ್ನು ಜನಪ್ರತಿನಿಧಿಗಳನ್ನಾಗಿಸಿದೆ ಎಂದು ಪ್ರಶ್ನಿಸಿದ ಅವರು, ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ ಕೊಟ್ಟಿದ್ದ ಜಾತಿ ಪ್ರಮಾಣ ಪತ್ರ ವಿವಾದ ನ್ಯಾಯಾಲಯದಲ್ಲಿದ್ದರೂ, ಕೊತ್ತೂರು ಮಂಜುನಾಥ್​ಗೆ ಕೋಲಾರದಲ್ಲಿ ಟಿಕೆಟ್​ ಕೊಟ್ಟು ಮತ್ತೆ ದಲಿತರಿಗೆ ಅನ್ಯಾಯವೆಸಗಿದೆ ಎಂದರು.
    ಗಾಂಧಿನಗರ ಮುಖಂಡರಾದ ಅಪ್ಪಿ, ಅರುಣ್​, ಮುನಿಯಪ್ಪ, ಮಧು, ರಾಜು, ಪ್ರಭಾಕರ್​, ಪ್ರಭು, ಶಂಕರ್​, ಗಂಗಾಧರ್​ ಉಪಸ್ಥಿತರಿದ್ದರು.

    ವೇಮಗಲ್​ನಲ್ಲಿ 10 ಸಾವಿರ ಲೀಡ್​ ನಿರೀಕ್ಷೆ


    ಕೋಲಾರ: ವೇಮಗಲ್​ ಹೋಬಳಿಯಲ್ಲಿ ಈ ಹಿಂದೆ ನನಗೆ 3500 ಮತ ಲೀಡ್​ ಬಂದಿದ್ದು, ಈ ಬಾರಿ 10 ಸಾವಿರ ಲೀಡ್​ ಬರುವ ನಿರೀೆಯಿದೆ ಎಂದು ಬಿಜೆಪಿ ಅಭ್ಯರ್ಥಿ ವರ್ತೂರು ಆರ್​.ಪ್ರಕಾಶ್​ ತಿಳಿಸಿದರು.
    ತಾಲೂಕಿನ ದೇವರಹಳ್ಳಿ, ಇರಗಸಂದ್ರದಲ್ಲಿ ಜೆಡಿಎಸ್​ ತೊರೆದ 20ಕ್ಕೂ ಹೆಚ್ಚು ಯುವಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ಈ ಭಾಗದ ಕೈಗಾರಿಕೆಗಳಲ್ಲಿ ಯುವಕ ಯುವತಿಯರಿಗೆ ಕೆಲಸ ಕೊಡಿಸಿ, ಬಸ್​ ಸೌಕರ್ಯ ಮಾಡಿಸಿಕೊಡಲಾಗುವುದು.ಅಗತ್ಯವಿರುವಲ್ಲಿ ಶುದ್ಧ ನೀರಿನ ಟಕಗಳನ್ನು ಸ್ಥಾಪಿಸಲಾಗುವುದು ಎಂದರು.
    ಮುಖಂಡರಾದ ಬೆಗ್ಲಿಸೂರ್ಯ ಪ್ರಕಾಶ್​, ತಾಪಂ ಸದಸ್ಯೆ ಮಂಜುಳಾ ರಾಜಣ್ಣ, ಕದರಿಪುರ ನಾರಾಯಣಪ್ಪ, ಜೆಡಿಎಸ್​ ತೊರೆದು ಬಿಜೆಪಿ ಸೇರ್ಪಡೆಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts