ಬೆಳಗಾವಿ: ಬೈಕ್ ಮೇಲಿಂದ ಬಿದ್ದು ಗಾಯ ಗೊಂಡಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾನೆ. ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದ ಸಣ್ಣ ಫಕೀರಪ್ಪ ಹಂದೂರ (38) ಮೃತ ವ್ಯಕ್ತಿ. ಆ. 2ರಂದು ತಾರಿಹಾಳ- ಮಾಸ್ತಮರಡಿ ರಸ್ತೆಯಲ್ಲಿ ಬೈಕ್‌ನಿಂದ ಬಿದ್ದು ತಲೆಗೆ ಪೆಟ್ಟಾಗಿತ್ತು. ಹುಬ್ಬಳ್ಳಿ ಕಿಮ್ಸ್‌ಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರ ಸಾವು
ಕೊಕಟನೂರ: ಅಥಣಿ ತಾಲೂಕಿನ ಭರಮ ಖೋಡಿ ಕ್ರಾಸ್ ಬಳಿ ಜತ್ತ- ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸಮೀಪದ ಗುಂಡೇವಾಡಿ ಗ್ರಾಮದ ನಿವಾಸಿ ಪವಾಡೆಪ್ಪ ಈರಪ್ಪ ಗುಂಜಿಗಾವಿ (44) ಮೃತಪಟ್ಟ ವ್ಯಕ್ತಿ. ದೈನಂದಿನ ಕೆಲಸದ ನಿಮಿತ್ತ ಬೈಕ್ ಮೇಲೆ ಅಥಣಿ ಕಡೆಗೆ ಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.